ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಳಮೀಸಲಾತಿ ಜಾರಿಗಾಗಿ ಕಂಪ್ಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆ

ಬಳ್ಳಾರಿ / ಕಂಪ್ಲಿ : ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ, ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಕಂಪ್ಲಿ ತಾಲೂಕು ಘಟಕದಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಮೊದಲಿಗೆ ಉದ್ಭವ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಒಳಮೀಸಲಾತಿ ಜಾರಿಗಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿ, ನಡುವಲ ಮಸೀದಿ, ಡಾ.ರಾಜಕುಮಾರ ರಸ್ತೆ, ಮಾರೆಮ್ಮ ಗುಡಿ, ಅಂಬೇಡ್ಕರ್ ವೃತ್ತದಲ್ಲಿ ತಲುಪಿ ಪ್ರತಿಭಟಿಸಿ, ನಂತರ ಕಂದಾಯ ನಿರೀಕ್ಷಕ ಜಗದೀಶ ಇವರಿಗೆ ಮನವಿ ಪತ್ರದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.
ಯುವ ಮುಖಂಡ ಪ್ರಸಾದ್ ಮಾತನಾಡಿ, ಮಾದಿಗ ಸಮುದಾಯವು ಸೇರಿದಂತೆ ಪರಿಶಿಷ್ಟ ಜಾತಿಯಲ್ಲಿರುವ ಹಲವು ಸಮುದಾಯಗಳು ಮೀಸಲಾತಿಯಲ್ಲಿ ಅನ್ಯಾಯಕ್ಕೆ ಒಳಗಾಗಿರುವುದನ್ನು ಮನಗಂಡು ಹಲವು ವರ್ಷಗಳಿಂದ ಒಳಮೀಸಲಾತಿಗಾಗಿ ಹಕ್ಕೊತ್ತಾಯ ಮಾಡುತ್ತಲೇ ಬಂದಿದ್ದಾರೆ. ಸರ್ಕಾರಗಳು ಯಾವುದೇ ಕಾಳಜಿ ತೋರದ ಹಿನ್ನಲೆ ಸುಮಾರು 35 ವರ್ಷಗಳಿಂದ ದೇಶದಾದ್ಯಂತ ಒಳಮೀಸಲಾತಿ ಜಾರಿಗಾಗಿ ತೀವ್ರತರದ ಹೋರಾಟ ಮಾಡಿದ್ದೇವೆ. ಹಲವು ಆಯೋಗಗಳು ರಚನೆಗೊಂಡು ಅಧ್ಯಾಯನ ಮಾಡಿ ಮೀಸಲಾತಿಯಲ್ಲಿ ಆಗುತ್ತಿರುವ ತಾರತಮ್ಯಗಳನ್ನು ಸ್ಪಷ್ಟವಾಗಿ ಗುರುತಿಸಿ ಈ ಅನ್ಯಾಯವನ್ನು ಸರಿಪಡಿಸಲು ಅನೇಕ ಶಿಫಾರಸ್ಸುಗಳನ್ನು ನೀಡಿವೆ. ಆದರೂ, ಸರಕಾರಗಳು ಯಾವುದೇ ವರದಿ ಅಂಗೀಕರಿಸಿ ಒಳಮೀಸಲಾತಿ ಜಾರಿ ಮಾಡಿ ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಕೊಡುವ ಧೈರ್ಯ ತೋರಿಲ್ಲ. 2025 ಭಾರತದ ಘನ ಸರ್ವೋಚ್ಚ ನ್ಯಾಯಲಯವು ,ಒಳಮೀಸಲಾತಿ ಅಳವಡಿಸಿ ಮೀಸಲಾತಿ ನೀಡುವುದನ್ನು ಆಯಾಯ ರಾಜ್ಯಗಳ ಹೊಣೆಗಾರಿಕೆ ಎಂದು ತೀರ್ಪು ನೀಡಿದ ನಂತರ ಹಲವು ರಾಜ್ಯಗಳು ಪ್ರತ್ಯೇಕ ಆಯೋಗಗಳನ್ನು ರಚಿಸಿ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿವೆ. ಹಾಗೆಯೇ ಕರ್ನಾಟಕ ಸರಕಾರವೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ವರದಿ ಪಡೆದುಕೊಂಡಿದೆ. ವರದಿಯನ್ನು ಅಂಗೀಕರಿಸಿ ಒಳಮೀಸಲಾತಿ ಕಾಯ್ಕೆಯನ್ನು ಅಂಗೀಕರಿಸಿದ ಅದಕ್ಕನುಗುಣವಾಗಿ ಶೇಕಡ 25ರಷ್ಟು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಶೇಕಡಾ 6 ರಷ್ಟು ಮೀಸಲಾತಿಯನ್ನು ಮಾದಿಗ ಮತ್ತು ಸಂಬಂಧಿತ ಸಮುದಾಯಗಳಿಗೆ ಕೂಡಲೇ ಜಾರಿಗೊಳಿಸಬೇಕು ಹಾಗೂ ಒಳಮೀಸಲಾತಿ ಒಪ್ಪದ ಸಮುದಾಯಗಳನ್ನು ಮತ್ತೊಂದು ಗುಂಪನ್ನಾಗಿ ಪರಿಗಣಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೆಚ್.ಜಡೆಪ್ಪ ಎಮ್ಮಿಗನೂರು, ಬೆಳಗೋಡ್ ಬಸವರಾಜ, ಹನುಮಂತಪ್ಪ ಸಣಾಪುರ, ಆರ್.ಎಂ.ರಾಮಯ್ಯ, ಮರಿಸ್ವಾಮಿ ಸಣಾಪುರ, ಎನ್.ಗಂಗಣ್ಣ, ವೀರಾಂಜಿನೀಯಲು, ಹೆಚ್.ಶ್ರೀನಿವಾಸ, ಯಲ್ಲಪ್ಪ, ಹೆಚ್.ಕುಮಾರ, ಬುಜ್ಜಿಕುಮಾರ, ಗೋಪಿ, ದೇವಲಾಪುರ ರಾಮ, ಹೆಚ್.ಪಂಪಾಪತಿ, ಹೆಚ್.ಜಗದೀಶ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!