
ಬಾಗಲಕೋಟೆ/ ಮುಧೋಳ :ಜಾತಿ ಮತ ಪಂಥಗಳನ್ನು ತೊಡೆದು ಹಾಕಿ ಸರ್ವ ಜನಾಂಗವನ್ನು ಸಮಾನತೆಯಿಂದ ಕಂಡು ಸರ್ವರಿಗೂ ಲೇಸನ್ನೇ ಬಯಸಿದ ಮಹಾಪುರುಷ ಸಿದ್ದಾರೂಢರು ಎಂದು ಪರಮಪೂಜ್ಯ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.
ಅವರು ಮುಧೋಳ ತಾಲೂಕಿನ ಮುಗಳಖೋಡದ ಶ್ರೀ ಸಿದ್ದಾರೂಢ ಭಾರತಿ ಆಶ್ರಮದಲ್ಲಿ ಜರುಗಿದ ಶಿವಾವತಾರಿ ಸಿದ್ಧಾರೂಢರ 190 ನೆಯ ಜಯಂತೋತ್ಸವ ಹಾಗೂ ನಾಮಕರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ಕಪಟಿಗಳಿಗೆ. ಕ್ರೋಧಿಗಳಿಗೆ.ಕುಹಕಿಗಳಿಗೆ. ಕಲ್ಯಾಣವನ್ನು ಬಯಸಿದ ಧೀರ ಪುರುಷ .ಶಾಂತಸ್ವರೂಪಿ ಸಿದ್ದಾರೂಢರು ಎಂದರು.
ಈ ಸಂದರ್ಭದಲ್ಲಿ ಯಲ್ಲಟ್ಟಿಯ ಲಕ್ಷ್ಮಣ ಮಾಳಗೊಂಡ ತಂಡದವರು ತತ್ವಪದಗಳನ್ನ ಹೇಳಿದರು. ಶಿವಲಿಂಗವ್ವ ಪೊಲೀಸ್ ತಂಡದವರು ಭಕ್ತಿಗೀತೆಗಳನ್ನು ಹೇಳಿ ರಂಜಿಸಿದರು. ರೇಖಾ ಹಿಪ್ಪರಗಿ. ಸಾವಿತ್ರಿ ಹಿರೇಮಠ. ಭಾರತಿ ಹಿರೇಮಠ. ಭೌರವ್ವ ಕುಂಬಾರ. ಭೌರಮ್ಮ ಹಿರೇಮಠ. ಲಲಿತಾ ನಾವಿ. ಪದ್ದವ್ವ ಮುಳ್ಳೂರ. ನಿಂಗವ್ವ ಕನ್ನೊಳ್ಳಿ. ಅಣ್ಣವ್ವ ಡಂಗಿ. ಶ್ಯಾಮಲಾ ಕನ್ನ್ನೋಳಿ, ರತ್ನಾಬಾಯಿ ಮಂಟೂರ ಮುಂತಾದ ತಾಯಂದಿರು ನಾಮಕರಣದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇದೆ ಸಂದರ್ಭದಲ್ಲಿ ಸಾಧಕರಾದ ಕುಳಲಿಯ ಮಹಾಂತಯ್ಯ ಹಿರೇಮಠ. ಯಲ್ಲಟ್ಟಿಯ ಕಲ್ಲಪ್ಪ ತಿಪ್ಪಣ್ಣವರ್. ಮೆಳ್ಳಿಗೇರಿಯ ಮಲ್ಲಪ್ಪ ಪೂಜಾರಿ. ಮುಗಳಖೋಡದ ರಾಮಕೃಷ್ಣೇಗೌಡ ಮಂಟೂರ . ಯಲ್ಲಟ್ಟಿಯ ಲಕ್ಷ್ಮಣ ಮಾಳಗೊಂಡ ಅವರನ್ನು ಗೌರವ ಪೂರಕ ಸತ್ಕರಿಸಲಾಯಿತು. ಲೋಕನಾಯಕಿ ನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ ಅವರು ಮಾತನಾಡಿದರು. ನಾವಲಗಿಯ ಶ್ರೀಶೈಲ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.
ಎಲ್ ಶ್ರೀ ನಿವಾಸ ಪ್ರಸಾದ್ ಸ್ವಾಗತಿಸಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















