ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೆವಿನ್ ಕಾರ್ಟರ್

ಕಾರ್ಟರ್ ವಿಶ್ವ ಪ್ರಸಿದ್ಧ ಛಾಯಪತ್ರಕರ್ತ (Photojournalist). ಅವರು ಒಂದು ಭಯಾನಕ ಮತ್ತು ಮನಸ್ಸು ಕಲುಕುವ ಛಾಯ ಚಿತ್ರವನ್ನು ತೆಗೆದು ವಿಶ್ವದ ಗಮನ ಸೆಳೆದರು.ಕಾರ್ಟರ್ 13 ಸೆಪ್ಟೆಂಬರ್ 1960 ದಕ್ಷಿಣ ಆಫ್ರಿಕಾ ಜೊಹಾನ್ಸ್‌ಬರ್ಗ್,
ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು, ಫೋಟೋ ಪತ್ರಕರ್ತ, ಕಾರ್ಟರ್ ರ
ಬಡತನ ಮತ್ತು ಹಸಿವಿನಂತಹ ಸಮಸ್ಯೆಗಳ ಕುರಿತು ಛಾಯಚಿತ್ರಗಳು ಮನ ಕಲಕುವಂತಿತ್ತು,
ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧವಾಗಿ ಪತ್ರಿಕೆಯಲ್ಲಿ ಜಾಗೃತಿ ಮೂಡಿಸಿದರು,
1993ರಲ್ಲಿ ಸೂಡನ್ ದೇಶದಲ್ಲಿ ಭೀಕರ ಬರ ಮತ್ತು ಹಸಿವಿನಿಂದ ಸಾವಿರಾರು ಜನರು ಅನ್ನ ಆಹಾರವಿಲ್ಲದೆ ನರಳುತ್ತಿದ್ದರು.ಅಲ್ಲಿನ ಸಮಸ್ಯೆಗಳ ಬಗ್ಗೆ ವರದಿ ಮಾಡಲು ಕೆವಿನ್ ಕಾರ್ಟರ್ ತೆರಳಿದ್ದರು. ಸೂಡನ್ ದೇಶದ ಭೀಕರತೆ ಮನಕಲಕುವ ದೃಶ್ಯವೊಂದು ಅವರ ಕಣ್ಣಿಗೆ ಬಿತ್ತು ಅಲ್ಲೂಂದು ಮಗುವಿನ ನರಳಾಟ…
ಮಗುವಿನ ಸಮೀಪವೇ ಹದ್ದೊಂದು(ಗಿಡುಗ) ತನ್ನ ಆಹಾರಕ್ಕಾಗಿ ಮಗುವಿನ ಪ್ರಾಣ ಪಕ್ಷಿ ಹಾರುವುದನ್ನು ಎದುರು ನೋಡುತ್ತಾ ಭಕಪಕ್ಷಿಯಂತೆ ಕಣ್ಣ ಮಿಟಿಕಿಸಿ ರಾಚುವ ನೋಟದ ಸನ್ನಿವೇಶದ ದೃಶ್ಯವನ್ನು ಕೆವಿನ್ ರು ಸೆರೆ ಇಡಿದ ಈ ಛಾಯಚಿತ್ರವು ಆಫ್ರಿಕಾದಲ್ಲಿ ಇರುವ ಹಸಿವು ಮತ್ತು ಮಾನವೀಯ ಸಂಕಟ ವನ್ನು ಜಗತ್ತಿಗೆ ತೋರಿಸಿತು.ಛಾಯಚಿತ್ರವನ್ನು The New York Times ಪತ್ರಿಕೆ ಪ್ರಕಟಿಸಿತು.
ಇದು ಪತ್ರಿಕೋದ್ಯಮದಲ್ಲಿ ಬಹಳ ಪ್ರಭಾವ ಬೀರಿತು.ಆ ಸಂದರ್ಭ ದಲ್ಲಿ ಈ ಛಾಯಚಿತ್ರ ವು ವಿಶ್ವದ ಗಮನ ಸೆಳೆದಿತ್ತು. ಈ ಚಿತ್ರಕ್ಕೆ 1994ರಲ್ಲಿ Pulitzer Prize ಕೂಡ ಲಭಿಸಿತು, ಆದರೆ ಕಾರ್ಟರ್ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾದರು, ಛಾಯಾಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಿಸುವ ಬದಲು ಹಸಿವಿನ ಸಂಕಟದಲ್ಲಿ ನರಳುತ್ತಿದ್ದ ಆ ಮಗು ವಿಗೆ ಒಂದು ಪೀಸ್ ಬ್ರೆಡ್ ಆದ್ರು ಕೊಡ ಬಹುತ್ತಿಲ್ಲ ಎಂದೂ ಟೀಕಿಸಿದರು, ಇದರಿಂದ ಮಾನಸಿಕ ವಾಗಿ ಖಿನ್ನತೆಗೆ ಒಳಗಾದ ಕೆವಿನ್ ಕಾರ್ಟರ್ 27 ಜುಲೈ 1994 ರಂದು 33ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡರು.
ಅದೊಂದು ಛಾಯಾಚಿತ್ರ ಕೆವಿನ್ ಕಾರ್ಟರ್ ನ ಪ್ರಾಣವನ್ನೆ ಕಸಿದುಕೊಂಡಿತು.

ಸಂಗ್ರಹ: ಡಾ.ಸುರೇಶ್ ಎಸ್ , ವಡಗಲಪುರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!