ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಧರ್ಮದ ದಾರಿ ದೀಪ ಬಸವಣ್ಣ

ಬಸವಣ್ಣನು ಬೆಳಕಾದ ಭಕ್ತಿ ಮಾರ್ಗದ ದೀಪ,
ಮನದ ಮಲಿನ ತೊಡೆದನು ಮೃದು ಮಾತಿನ ತಾಪ।

ಕಾಯಕವೇ ಕೈಲಾಸವೆಂ ಕೃಷಿದು ಕರೆದ ಮಹಾತ್ಮ,
ಸತ್ಯದ ಸಾಗರದಲ್ಲಿ ಸಾಗಿದ ಸದಾತ್ಮ।

ವಚನಗಳ ಮೂಲಕ ಬೋಧಿಸಿದನು ಜೀವನ ಪಾಠ,
ಸಮಾನತೆ ಸಾರುತ್ತಾ ಸುಧಾರತೆಯ ಗಾಢ ಮಾತ।

ಜಾತಿ ಮತ ಬೇಧವಿಲ್ಲವೆಂದು ಹೇಳಿದ ಧೀರ,
ನ್ಯಾಯದ ನಿಲುವಿನಲ್ಲಿ ನಿಂತ ಮಹಾ ವೀರ।

ಅನ್ನದಾಸೋಹದ ದಾರಿಯಲ್ಲಿ ತೋರಿದನು ಬೆಳಕು,
ದೀನರ ದುರಿತ ನೀಗಿಸಿದನು ದಯೆಯ ಹೊಳಪು।

ಅಹಂಕಾರ ಅಳಿಸಿ ಆತ್ಮಜ್ಞಾನಕ್ಕೆ ತೋರಿದ ದಾರಿ,
ಸರಳತೆಯ ಸಾರವಿದು ಬಸವಣ್ಣನವರ ಹೊಗಳಿ ಹಾಡಿರಿ।

ಶರಣರ ಸಂಗದಲ್ಲಿ ಬೆಳಗಿದ ಆತ್ಮ ತೇಜ,
ಧರ್ಮದ ದೀಪವಿದು ಅವನ ಪಾವನ ಸೇವೆ।

ಮನದೊಳಗೆ ಮಿಂಚುವ ಮೌಲ್ಯಗಳ ನಕ್ಷತ್ರ,
ಬಸವಣ್ಣನ ಬೋಧನೆ ನಿತ್ಯವೂ ಅಮೃತ।

ಜೀವನಕ್ಕೆ ಜ್ಯೋತಿ ತುಂಬಿದ ಮಹಾನ್ ದಾರಿ,
ಬಸವಣ್ಣನೆಂದರೆ ಭಕ್ತಿಯ ಅಮೂಲ್ಯ ಸಿರಿ।

ನಮ್ಮೊಳಗೆ ನೆಲೆಸಲಿ ಅವನ ಮಹಾ ತತ್ತ್ವ,
ಬಸವಣ್ಣನ ಮಾರ್ಗವೇ ನಿಜವಾದ ಸತ್ವ।

  • ಸುಜಾತಾ ಮಣ್ಣಿಕೇರಿ (ಸುಮ)
    ನಾಗಪುರ. ಮಹಾರಾಷ್ಟ್ರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!