
ಬಳ್ಳಾರಿ / ಕಂಪ್ಲಿ : ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ಪಟ್ಟಣದ ಶ್ರೀ ತುಂಗಾಭದ್ರಾ ಪಕ್ಷದ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು.
ಪಕ್ಷದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಕ್ಷದವು ‘ರಾಷ್ಟ್ರೀಯ ಚಿಂತನೆಗಳ ಮೂಲಕ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ಪಕ್ಷದ ಹಿರಿಯರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಿದೆ. ತಳ ಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮವನ್ನು ಗೌರವಿಸಬೇಕು’ ಎಂದರು.
ನಮ್ಮ ಪಕ್ಷದ ಬೆನ್ನೆಲುಬಾಗಿರುವ ನಮ್ಮ ಎಲ್ಲಾ ಶ್ರಮಶೀಲ ಕಾರ್ಯಕರ್ತರಿಗೆ ನನ್ನ ಶುಭಾಶಯಗಳು, ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಂಪ್ಲಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಭಾಗದಲ್ಲೂ ಹಗಲಿರುಳು ದುಡಿಯುತ್ತಿದ್ದಾರೆ. ಬಡವರು, ದೀನದಲಿತರು ಸೇವೆ ಮಾಡುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಕಾರ್ಯಕರ್ತರ ಶಕ್ತಿ ಮತ್ತು ಉತ್ಸಾಹ ನಿಜವಾಗಿಯೂ ಪ್ರೇರೇಪಿಸುತ್ತದೆ.
ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರಿಂದ ದೇಶದ ಜನತೆ ಇಂದು ಉತ್ತಮ ಆಡಳಿತವನ್ನು ನೋಡುತ್ತಿದ್ದಾರೆ, ಕಾರ್ಯಕರ್ತ ಶ್ರಮ ಕಳೆದ ವರ್ಷದಲ್ಲಿ ಲೋಕಸಭೆ ಚುನಾವಣೆ, ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮತ್ತು ರಾಷ್ಟ್ರದಾದ್ಯಂತ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷಕ್ಕೆ ಸಿಕ್ಕ ಗೆಲುವುಗಳಿಂದ ತಿಳಿದುಬರುತ್ತದೆ. ನಮ್ಮ ಸರ್ಕಾರ ಸಮಾಜಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರೆಸಲಿದ್ದು, ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ, ಮುಂಬರುವ 2028ಕ್ಕೆ ಮತ್ತೆ ನಮ್ಮ ಗೆಲವು ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಯರಂಗಳ್ಳಿ ತಿಮ್ಮಾರೆಡ್ಡಿ, ಅಳ್ಳಳಿ ವೀರೇಶ್, ಸಿಡಿ ಮಹಾದೇವ, ಎನ್. ರಾಮಾಂಜಿನಯ್ಯಲು, ಟಿವಿ ಸುದರ್ಶನ್ ರೆಡ್ಡಿ, ಭಾಸ್ಕರ, ವಿರೇಶ್, ಕರಿ ಬಸಯ್ಯ್ ಸ್ವಾಮಿ, ಪ್ರಶಾಂತ್, ಮಂಜುಳಾ, ಎಮ್ಮಿಗನೂರು ಪದ್ಮಾವತಿ, ಬಸವ ಪ್ರಭು, ಕಟ್ಟೆ ವಿಶ್ವನಾಥ, ಗೊರ್ತಿ ಶ್ರೀನಿವಾಸ್, ರಿಯಾಜ್, ಹೊನ್ನಳ್ಳಿ ಈರಣ್ಣ,ಜಿನೂರ್ ಜಡೆಪ್ಪ, ಶ್ರೀನಿವಾಸ್, ಚಂದ್ರಶೇಖರ್ ಗೌಡ, ಮನೋಜ್ ಗೌಡ, ಸಿಎ ಚೆನ್ನಪ್ಪ, ರಾಮು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್x




















