ದಕ್ಷಿಣ ಕನ್ನಡ :ಉಳ್ಳಾಲ ತಾಲೂಕು ಇರ ಗ್ರಾಮದ ಬಂಗಾರು ಗುಡ್ಡೆಯಲ್ಲಿ ತ್ಯಾಜ್ಯ ಘಟಕಕ್ಕೆ ಆಯ್ಕೆ ಮಾಡಿದ ಸ್ಥಳ ಕಾನೂನು ಬಾಹಿರ ಆಗಿದೆ ,ಕೆಲವೇ ಅಡಿ ದೂರದಲ್ಲಿ ಪುರಾತನ ಗುಳಿಗಬನ, ಶ್ರೀ ಮಲರಾಯ ಧೂಮಾವತಿ, ಬಂಟ,ಪರಿವಾರ ಕ್ಷೇತ್ರ, ವಿವಿಧ ಶಕ್ತಿಗಳಿಗೆ ಕೆಸರು ಕಲ್ಲು ಹಾಕಿರುವ ಸ್ಥಳ, ಪುರಾತನ ಮಸೀದಿ,ಅನಾದಿಯಿಂದ ರೈತರಿಗೆ ಕೃಷಿಗೆ ನೀರು ಕೊಡುವ ಕನಡರೆ ಪಲ್ಲ ಎಲ್ಲವನ್ನೂ ಮರೆ ಮಾಚಿ,ಕಾನೂನು ಬಾಹಿರವಾಗಿ, ಯಾರಿಗೂ ನೋಟೀಸು ಕೊಡದೆ ಕೋಟಿಗಟ್ಟಲೆ ಹಣ ಖರ್ಚು ಮಾಡಲು ಅಧ್ಯಯನ ಮಾಡದೇ ಜನತೆಗೆ ಮೋಸ ವಂಚನೆ ಆಗುವ ವಿಚಾರ ಬೆಳಕಿಗೆ ಬಂದ ತಕ್ಷಣ ಇರ, ಬಾಳೆಪುಣಿ, ಗ್ರಾಮದ ಅನೇಕರು, ಜಿಲ್ಲೆಯ ವಿವಿಧ ಭಾಗದ ಭಕ್ತರು ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ಕುರಿತು ದಿನಾಂಕ ೬.೪.೨೦೨೬ ರಂದು ಬಂಗಾರು ಗುಡ್ಡೆಯಲ್ಲಿ ಸಭೆ ಜರುಗಿತು.
ಈ ಸಭೆಯಲ್ಲಿ ಅಧ್ಯಯನ ಮಾಡದೆ, ಸಮಾಜ ಘಾತಕ ಕಾಮಗಾರಿ ಕಾನೂನು ಬಾಹಿರ ಆಗದಂತೆ ರೂಪುರೇಷೆ ತಯಾರಿಸಿತು.
ಅನೇಕ ಮನೆಗಳು,ಕೃಷಿ ಭೂಮಿ ಎಲ್ಲವನ್ನೂ ಕಡೆಗಣಿಸಿ ಜನತೆಗೆ ಮೋಸ ಮಾಡುವ ವಿರುದ್ಧ ಜನತೆ ಕಾನೂನು ಹೋರಾಟ ಮಾಡಲು ಮುಂದಾಗಿದೆ.




















