ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ: ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ರಕ್ಷಣೆಗೆ ಅರಣ್ಯ ಇಲಾಖೆ ಪಣ

ಸಿರುಗುಪ್ಪ – ಅಳಿವಿನಂಚಿನಲ್ಲಿರುವ ಹಾಗೂ ಅತ್ಯಂತ ಅಪರೂಪದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಜಿ ಐ ವಿ ಹಕ್ಕಿಯ ಪಕ್ಷಿ ಸಂರಕ್ಷಣೆಗಾಗಿ ಬಳ್ಳಾರಿ ಜಿಲ್ಲಾ ಅರಣ್ಯ ಇಲಾಖೆ ವಿನೂತನ ಹೆಜ್ಜೆ ಇರಿಸಿದೆ ಎಂದು ರಾಷ್ಟ್ರೀಯ ಸಾಕ್ಷರತಾ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತ ದೇಶದ ರಾಜಸ್ಥಾನ್, ಮಹಾರಾಷ್ಟ್ರ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಬೆರಳೆಣಿಕೆಯ ಹಕ್ಕಿಗಳಿವೆ ಎಂಬುದು ಗಮನಾರ್ಹ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹುಲ್ಲುಗಾವಲು ಪ್ರದೇಶದಲ್ಲಿ ಎರಡೂವರೆ ದಶಕಗಳ ಹಿಂದಿನಿಂದ ಪ್ರತ್ಯಕ್ಷವಾಗಿವೆ ಪಕ್ಷಿಯ ಸಂತತಿ ಅಭಿವೃದ್ಧಿ ಸಂರಕ್ಷಣೆ ಸೇರಿ ಉಳಿವಿಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಸಿರುಗುಪ್ಪ ತಾಲೂಕಿನ ರಾವಿಹಾಳ್ ಬೀರಳ್ಳಿ ಹಚ್ಚೋಳ್ಳಿ ಕುರುವಳ್ಳಿ ಬಿ ಎಂ ಸುಗೂರು ಅಗಸನೂರು ಸೇರಿ ವಿವಿಧ ಗ್ರಾಮಗಳ ಸರಕಾರಿ ಶಾಲೆಗಳ ಮಕ್ಕಳು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರನ್ನು ಬೊಮ್ಮಲಾಪುರ ಮಿಟ್ಟೆಸೂಗೂರು ಗ್ರಾಮಕ್ಕೆ ಕರೆದೊಯ್ಯುವ ಅರಣ್ಯ ಇಲಾಖೆಯ ಸಿಬ್ಬಂದಿ ಪಕ್ಷಿಯ ಚಲನವಲನ ಲಕ್ಷಣ ಆಹಾರ ಪದ್ಧತಿ ಜೀವನಶೈಲಿ ಕುರಿತು ನೀಡುತ್ತದೆ ಪಕ್ಷಿಯ ರಕ್ಷಣೆ ಬಗ್ಗೆ ವಿಶೇಷ ಅರಿವು ಮೂಡಿಸಲಾಗುತ್ತಿದೆ ಮುಟ್ಟೆಸೂಗೂರು ಬಳಿ ಇರುವ ವೀಕ್ಷಣ ಗೋಪುರದಲ್ಲಿ ಬೈನಾ ಕುಲಾರ್ ಮತ್ತು ಸ್ಪಾಟಿಂಗ್ ಸ್ಕೋಪ್ ಮೂಲಕ ಜಿಐಬಿ ಪಕ್ಷಿಯ ನೆಲೆಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಈ ಮೂಲಕ ಪಕ್ಷಿಯ ಸಂರಕ್ಷಣೆಗೆ ಸ್ಥಳಿಯ ಹೊಣೆ ಕುರಿತು ಮನವರಿಕೆ ಮಾಡಲಾಗುತ್ತಿದೆ ಅಪರೂಪದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಉಳಿವಿಗಾಗಿ ಪ್ರಯತ್ನ ಸರ್ಕಾರಿ ಶಾಲೆ ಗ್ರಾಮ ಪಂಚಾಯತ್ ಸದಸ್ಯರಲ್ಲಿ ಅರಿವು ಸಿರುಗುಪ್ಪ ಹುಲ್ಲುಗಾವಲಿನಲ್ಲಿ ಜಿಐಬಿ ನೆಲೆ ಜಿಐಬಿ ಪಕ್ಷಿಯನ್ನು ಸ್ಥಳೀಯವಾಗಿ ಕರ್ಲೆ ಹದ್ದು ಎಂದು ಕರೆಯಲಾಗುತ್ತದೆ ರಣ ಹದ್ದಿಗಿಂತ ದೊಡ್ಡ ಗಾತ್ರದ ಈ ಹಕ್ಕಿ ಕಡುಕಂದು ಬಿಳಿ ಮೈ ಬಣ್ಣದ್ದಾಗಿದೆ ನೀಳವಾದ ಕತ್ತು ಹೊಂದಿದೆ ಕರಿತಲೆ ಕಂದು ಬಣ್ಣದ ಮೊಂಡು ಬಾಲ ಕಂದು ರೆಕ್ಕೆಗಳ ಮೇಲೆ ಅಗಲವಾದ ಕಪ್ಪು ಪಟ್ಟಿಗಳಿವೆ ಹಳದಿ ವರ್ಣದ ಕೊಕ್ಕೆ ಬಲಿಷ್ಠವಾಗಿದೆ. ತಿಳಿ ಹಳದಿ ನೀಳ ಕಾಲುಗಳನ್ನು ಹೊಂದಿದೆ ಈ ಪಕ್ಷಿ ಹೆಚ್ಚಾಗಿ ಹುಲ್ಲುಗಾವಲು ಕೃಷಿ ಪ್ರದೇಶಗಳಲ್ಲಿ ಕಂಡು ಬರುತ್ತದೆ ಕಾಳು ಬೀಜ ಕೀಟ ಮಿಡತೆ ಹಲ್ಲಿ ಸರಿಸೃಪಗಳನ್ನು ತಿನ್ನುತ್ತದೆ ಮಾರ್ಚ್ ಸೆಪ್ಟೆಂಬರ್ ಈ ಹಕ್ಕಿಯ ಸಂತಾನೋತ್ಪತ್ತಿ ಕಾಲವಾಗಿದೆ ನೆನೆಗುದಿಗೆ ಬಿದ್ದ ಬ್ರೀಡಿಂಗ್ ಸೆಂಟರ್ ಅಳಿವಿನಂಚಿನಲ್ಲಿರುವ ಈ ಪಕ್ಷಿಯ ಸಂತತಿ ಹೆಚ್ಚಿಸಲು ಸಿರುಗುಪ್ಪ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸುಮಾರು 300 ಎಕರೆ ಸ್ಥಳವನ್ನು ಕಾಯ್ದಿರಿಸಲಾಗಿದೆ ರಾಜಸ್ಥಾನದ ಮಾದರಿಯಲ್ಲಿ ಬ್ರೀಡಿಂಗ್ ಸೆಂಟರ್ ಆರಂಭಿಸಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ ಇಲಾಖೆ ರಚಿಸಿದ ಸಮಿತಿ 2024 ರಲ್ಲಿ ರಾಜಸ್ಥಾನದ ಜೈಸಲ್ಮೇರ್ ನ್ಯಾಷನಲ್ ಪಾರ್ಕ್ ಗೆ ಅಧ್ಯಯನಕ್ಕಾಗಿ ಭೇಟಿ ನೀಡಿತ್ತು ಜಿಐಬಿ ಪಕ್ಷಿಯ ಪೋಷಣೆ ಸಂರಕ್ಷಣೆ ಸಂತತಿ ಮೊಟ್ಟೆ ಸಂರಕ್ಷಣೆ ಮರಿಗಳ ಬೆಳವಣಿಗೆ ಪೂರಕ ವಾತಾವರಣ ನಿರ್ಮಾಣ ಪಕ್ಷಿಯ ಚಲನವಲನ ಆಹಾರ ಪದ್ಧತಿ ಸೇರಿ ವಿವಿಧ ಮಾಹಿತಿಯನ್ನು ಅಲ್ಲಿನ ತಜ್ಞರಿಂದ ಪಡೆಯಲಾಗಿತ್ತು ಆದರೆ ಕಳೆದ ಎರಡು ವರ್ಷಗಳಿಂದ ಬ್ರೀಡಿಂಗ್ ಸೆಂಟರ್ ಸ್ಥಾಪನೆ ವಿಚಾರ ನೆನಗುದಿಗೆ ಬಿದ್ದಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಬಳ್ಳಾರಿ ವಲಯದ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆಎನ್ ಬಸವರಾಜ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಜಿಐಬಿ ಪಕ್ಷಿ ಕಂಡುಬರುವ ಪ್ರದೇಶದ ಸುತ್ತಲಿನ ಗ್ರಾಮಗಳ ಸರಕಾರಿ ಶಾಲಾ ಮಕ್ಕಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೆ ಅರಿವು ಮೂಡಿಸಲಾಗುತ್ತಿದೆ ಈ ಮೂಲಕ ಪಕ್ಷಿಯ ಲಕ್ಷಣ ಜೀವನ ಶೈಲಿ ರಕ್ಷಣೆ ಸೇರಿ ವಿವಿಧ ಮಾಹಿತಿಯನ್ನು ಸ್ಥಳಿಯರಿಗೆ ನೀಡಲಾಗುತ್ತಿದೆ ಪಕ್ಷಿಯ ಉಳಿವಿಗೆ ಸ್ಥಳಿಯರ ನೆರವನ್ನು ಬಳಸಿ ಕೊಳ್ಳಲಾಗುತ್ತಿದೆ ಎಂದು ಡಾ. ಕೆ ಎನ್ ಬಸವರಾಜ ಅವರು ವಿವರಿಸಿ ಸಾರ್ವಜನಿಕರಿಗೆ ಜಿಐವಿ ಪಾಠ ವಿವರಿಸಿದ್ದಾರೆ.

ವರದಿ : ಮಸೀದಿ.ಅಬ್ದುಲ್ ಗೌಸ್. ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!