”ಮಾನವ ಜನ್ಮವಿತ್ತನಿಂದಲೂ “ಹೆಣ್ಣು”ಮಕ್ಕಳಿಗೆ ಅಡುಗೆ ಮನೆಯನ್ನು ಬಿಟ್ಟು ಬೇರೆ ಪ್ರಪಂಚವಿರಲಿಲ್ಲ ಆದರೆ ಈಗಿನ ಕಾಲದಲ್ಲಿ ಅವರಿಗೆ ಎಲ್ಲದರಲ್ಲೂ “ಸ್ಥಾನಮಾನ” ಸಿಗುತ್ತಿದೆ ಆದರೂ ಎಲ್ಲೋ ಒಂದಿಷ್ಟು ಪ್ರಮಾಣದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ದೊರೆಯುತ್ತಿಲ್ಲ ಎನ್ನುವುದು ಕಂಡುಬಂದಿದೆ.
ಹೆಣ್ಣು ಮಗುವಿಗೆ ಸಮಾಜದಲ್ಲಿ ಸಿಗುವ ಸ್ಥಾನಮಾನ ಮತ್ತು ಗಂಡಿಗೆ ಸಮಾನರು ಎನ್ನುವ ಹಾಗೆ ಮಾಡುವ ಕಾರ್ಯ ನಮ್ಮ ಸಮಾಜದ ಪಾತ್ರ ಮುಖ್ಯವಾಗಿರುತ್ತದೆ.
ಸಾಮಾಜಿಕ ಕ್ಷೇತ್ರದಲ್ಲಿ, “ಶಿಕ್ಷಣಕ್ಷೇತ್ರ”ದಲ್ಲಿ, ಭಾಗಿಯಾಗುವಂತೆ ಮಾಡಬೇಕು,
ಎಷ್ಟೋ ದಿನಗಳಿಂದಲೂ ಹೆಣ್ಣಿನ ಮೇಲೆ “ದೈಹಿಕ, ಮಾನಸಿಕ, ಸಾಮಾಜಿಕ, ಮತ್ತು ಆರ್ಥಿಕ ಕ್ಷೇತ್ರದಲ್ಲಿ ಕೂಡ ರಕ್ಷಣೆಯಿಲ್ಲ”
ಹೆಣ್ಣಿನ ವಿರುದ್ಧವಾಗಿ ನಡೆಯುತ್ತಿರುವ ತಾರತಮ್ಯ, ಅತ್ಯಾಚಾರ ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಅವಮಾನ, ಅಗೌರವ, ಮೊದಲಾದ ಅನ್ಯಾಯಗಳನ್ನು ಸಮಾಜ ಎದುರಿಸಬೇಕು.
ಇಂತಹ ಸಂದರ್ಭದಲ್ಲಿ “ಸಮಾಜ ಅಂದರೇ ನಾವು ನಾವೇ ಅಂದರೆ ಸಮಾಜ” ಎನ್ನುವ ಮಾತು ಸತ್ಯವಾಗಿರಬೇಕು.
ಪ್ರತಿಯೊಂದು ಹೆಣ್ಣು ಮಗುವಿಗೆ ಶಿಕ್ಷಣ ಹಾಗೂ ಅವಳು ಒಂದು ಗಂಡು ಮಗುವಿನಂತೆ ಬೆಳೆಯಲು ಬಿಡಬೇಕು ಹೆಣ್ಣುಮಕ್ಕಳನ್ನು ಸಮಾಜದಲ್ಲಿ ನಡೆಯುವ “ರಾಜಕೀಯ ಕ್ಷೇತ್ರಕ್ಕೆ” ಕಾಲಿಡುವಂತೆ ಮಾಡಬೇಕು.
ಪ್ರತಿಯೊಬ್ಬ ಗಂಡನು ತನ್ನ ಹೆಂಡತಿಯನ್ನು ಬಿಟ್ಟು ಬೇರೆ ಹೆಣ್ಣನ್ನು ತನ್ನ ಸಹೋದರಿಯರಂತೆ ಕಾಣಬೇಕು,
ಹೆಣ್ಣನ್ನು ಕಂಡರೆ ದೇವತೆ ತರ ಕಾಣಬೇಕು ಒಂಟಿಯಾಗಿರುವುದನ್ನು ಕಲಿಸಿದರೆ
ಹೆಣ್ಣುರಕ್ಷಣೆಯಾಗಿ ಉಳಿಯುವುದು,
ರಕ್ಷಣೆಯೂ ಕೂಡ ಸಮಾಜದ ದೃಷ್ಟಿಯಿಂದ ಸಮಾಜದವರದೆ ಆಗಿರುತ್ತದೆ.
✍️ಮಂಜುನಾಥ ಜನವಾಡ
(ಗಣಿ) ಕೊಲ್ಹಾರ,ವಿಜಯಪುರ
8095652569.




















