ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ಶ್ರೀರಾಮರಂಗಾಪುರ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಗುರುವಾರ ಜರುಗಿತು. 80ಕ್ಕೂ ಹೆಚ್ಚು ರೋಗಿಗಳ ರಕ್ತಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ನಡೆಸಿ ಔಷಧ ವಿತರಿಸಲಾಯಿತು.
ಪ್ರಭಾರ ವೈದ್ಯಾಧಿಕಾರಿ ಡಾ. ಗುರುಮುರುಗೇಶ್ ಮಾತನಾಡಿ, ‘ಆಯುರ್ವೇದ ಅನಾದಿ ಕಾಲದಿಂದಲೂ ಜಾಲ್ತಿಯಲ್ಲಿರುವ ಉತ್ತಮ ಚಿಕಿತ್ಸಾ ಪದ್ಧತಿಯಾಗಿದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ತಡವಾದರೂ ಶಾಶ್ವತ ಉಪಶಮನ ನೀಡುವ ಶಕ್ತಿ ಆಯುರ್ವೇದಕ್ಕಿದೆ’ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ, ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಕಿಶೋರಿಯರಿಗೆ ಎಚ್ಪಿವಿ ಲಸಿಕೆ ಹಾಕಿಸುವಲ್ಲಿ ಪಾಲಕರು ನಿಗಾ ವಹಿಸಬೇಕು ಎಂದರು.
ಆಸ್ಪತ್ರೆ ಸಿಬ್ಬಂದಿ ಗೌರಿ ಶಂಕರ, ಮಲ್ಲಿಕಾರ್ಜುನ, ಮಮತಾ, ಆಶಾ ಕಾರ್ಯಕರ್ತೆ ಅನಿತಾ, ಜ್ಯೋತಿ, ಮಹೇಶ್ವರಮ್ಮ, ಆಯುಷ್ ಇಲಾಖೆ ಸಿಬ್ಬಂದಿ ಆಲ್ತಾಫ್, ರಾಜ ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















