ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪತ್ರಕರ್ತರ ಹಿತವನ್ನು ಕಾಪಾಡಿ : ಸಂಗಮೇಶ ಎನ್. ಜವಾದಿ

ಬೀದರ್ ನಗರದಲ್ಲಿ ೪೦ನೇ ಪತ್ರಕರ್ತರ ಸಮ್ಮೇಳನದ ಎರಡನೇ ದಿನವಾದ ಇಂದು ನಡೆಯುವ ಕೊನೆಯ ಸಮಾರೋಪ ಸಮಾರಂಭದಲ್ಲಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಪತ್ರಕರ್ತರ
ಶ್ರೇಯೋಭಿವೃದ್ಧಿಗಾಗಿ ಪತ್ರಕರ್ತರ ಸಂಘವು ಪ್ರೋತ್ಸಾಹಿಸಬೇಕೆಂದು ಆಶಿಸುತ್ತೇವೆ.

ನಿರ್ಣಯಗಳು:
೧. ರಾಜ್ಯ ಮಟ್ಟದಲ್ಲಿ ನಡೆಯುವ ಪತ್ರಕರ್ತ ಸಮ್ಮೇಳನ ವಿಭಾಗ ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ಕಡ್ಡಾಯವಾಗಿ ಪ್ರತಿ ವರ್ಷಕೊಮ್ಮೆ ಜರುಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
೨. ಪತ್ರಕರ್ತರ ಸಮ್ಮೇಳನದಲ್ಲಿ ಒಬ್ಬ ಹಿರಿಯ ಅನುಭವಿ ಪತ್ರಕರ್ತರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಅವರನ್ನು ಗೌರವಿಸುವ ಕೆಲಸ ಈ ಒಂದು ಸಮ್ಮೇಳನಗಳಲ್ಲಿ ಆಗಬೇಕಾಗಿದೆ ಈ ಬಗ್ಗೆ ಚರ್ಚೆ ಮತ್ತು ಸೂಕ್ತವಾದಂತ ನಿರ್ಣಯವನ್ನು ತಿಳಿದುಕೊಳ್ಳಬೇಕಾಗಿದೆ.
೩. ಪತ್ರಕರ್ತ, ಪತ್ರಕರ್ತರಿಗಾಗಿ, ಪತ್ರಕರ್ತರಿಗೋಸ್ಕರ ಇರುವ ಈ ಒಂದು ಸಂಘವು ಸಮಸ್ತ ಪತ್ರಕರ್ತರ ಹಕ್ಕುಗಳಿಗಾಗಿ ಕೆಲಸ ಮಾಡಲಿ.
೪. ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರಾಗಿ ಕವಿಗೋಷ್ಠಿ ಏರ್ಪಡಿಸುವುದು ಹಾಗೂ ಸಂವಾದ ಗೋಷ್ಠಿಗಳು ಆಯೋಜಿಸುವುದು ಸೂಕ್ತ ಮತ್ತು ಸಮಂಜಸವಾಗಿದೆ.
೫. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರ ಸಮ್ಮೇಳನಗಳನ್ನು ನಿರಂತರವಾಗಿ ಆಯೋಜಿಸಿ, ಪ್ರಶಸ್ತಿ ಪ್ರದಾನ ಮಾಡುವ ವ್ಯವಸ್ಥೆ ಮಾಡುವುದು.
ಹೀಗೆ ಅನೇಕ ವಿಚಾರಗಳು ಪತ್ರಕರ್ತರ ಶ್ರೇಯಸ್ಸಿಗಾಗಿ ಚಿಂತನೆ ಮತ್ತು ಈ ಸಮ್ಮೇಳನದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಪತ್ರಕರ್ತರ ಹಿತವನ್ನು ಕಾಪಾಡಬೇಕೆಂದು ಸಂಘದ ಎಲ್ಲಾ ಪದಾಧಿಕಾರಿಗಳಲ್ಲಿ ವಿನಂತಿಸಿಕೊಳ್ಳುತ್ತೇವೆ.

  • ನಿಮ್ಮವ
    ಸಂಗಮೇಶ ಎನ್. ಜವಾದಿ
    ಪತ್ರಕರ್ತರು, ಬೀದರ್ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!