ಸಿರುಗುಪ್ಪ – ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಲೆಕ್ಕ ಶೀರ್ಷಿಕೆ 2025-26ನೇ ಸಾಲಿನ ಸಿಎಂ ಐಡಿಪಿ ಮುಖ್ಯಮಂತ್ರಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆ ಅಡಿಯಲ್ಲಿ 15 ಲಕ್ಷ ರೂ. ವೆಚ್ಚದ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಶ್ರೀ ಸುಂಕ್ಲಮ್ಮ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.
ಈ ವೇಳೆಯಲ್ಲಿ ಮುಖಂಡರಾದ ಕುಮಾರ್ ರಾಜೇಗೌಡ, ನಾಗರಾಜ, ಶರಣಗೌಡ, ಅಯ್ಯಪ್ಪ, ನೀಲಕಂಠಗೌಡ, ಅಕ್ಬರ್ ಸಾಬ್, ಇಸ್ಮಾಯಿಲ್ ಸಾಬ್, ಜೀಲಾನ್ ಸಾಬ್, ನಡವಿ ಶಂಕ್ರಪ್ಪ, ಹೊನ್ನೂರಪ್ಪ, ಎರೆಪ್ಪ ಗೌಡ, ತಿಪ್ಪೇರುದ್ರ, ಜಿಲ್ಲಾ ಪಂಚಾಯತ್ ರಾಜ್ ಎಇಇ ಇಂಜಿನಿಯರ್ ತಿಪ್ಪೇಸ್ವಾಮಿ ಶಾನವಾಸಪುರ ಗ್ರಾಮ ಪಂಚಾಯತ್ ಪಿಡಿಓ ವೀರೇಶ್, ಬಿ.ವೆಂಕಟೇಶ್, ಹೆಚ್.ಗಣೇಶ್, ಟಿ.ಸಿ. ಮೋಹನ್, ಬಿ ಎಂ ಮಣಿಕಂಠ ನಾಯಕ್, ಶಾನವಾಸಪುರ ಗ್ರಾಮಸ್ಥರು ,ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















