ಸಿರುಗುಪ್ಪ- ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಲೆಕ್ಕಾ ಶೀರ್ಷಿಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕೆ ಕೆ ಆರ್ ಡಿ ಬಿ 2025-26 ನೇ ಯೋಜನೆಯಡಿ 30 ಲಕ್ಷ ರೂ, ವೆಚ್ಚದ ಸಿರುಗುಪ್ಪ ತಾಲೂಕಿನ ದಾಸಪುರ ಗ್ರಾಮದ ಸಿರಿಗೇರಿ ಮಲ್ಲಪ್ಪನ ಮನೆಯಿಂದ ತಳವಾರ ರೇಣುಕಮ್ಮನ ಮನೆಯವರೆಗೆ ಮತ್ತು ಟಿ. ದ್ಯಾವಣ್ಣ ಮನೆಯಿಂದ ತಳವಾರು ಮಲ್ಲಯ್ಯನ ಮನೆವರೆಗೆ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲನ್ನು ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೊಂಚಿಗೇರಿ ಸಿದ್ದನಗೌಡ,ದಾಸಪುರ ಶೇಖರಪ್ಪ,ಬಸವರಾಜ, ರುದ್ರಪ್ಪ, ಹನುಮಂತಪ್ಪ, ಬುಳ್ಳಪ್ಪ, ದೊಡ್ಡ ಮುದುಕನಗೌಡ, ವೀರಭದ್ರಗೌಡ, ಡಿ.ನಾಗಪ್ಪ, ಮುದ್ದು ವೀರಪ್ಪ, ಸಣ್ಣ ಮುದುಕನಗೌಡ, ಜಿಲ್ಲಾ ಪಂಚಾಯತ್ ರಾಜ್ ಎ ಇ ಇ ಇಂಜಿನಿಯರ್ ತಿಪ್ಪೇಸ್ವಾಮಿ, ಬಿ.ವೆಂಕಟೇಶ್, ಹೆಚ್.ಗಣೇಶ್, ಟಿ.ಸಿ. ಮೋಹನ್, ಬಿ ಎಂ ಮಣಿಕಂಠನಾಯಕ್, ದಾಸಾಪುರ ಗ್ರಾಮಸ್ಥರು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















