ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಭೀಮಾಂಬಿಕಾ ದೇವಿಯ ಪುರಾಣ ಕಾರ್ಯಕ್ರಮ ಧಾರ್ಮಿಕ ಕ್ಷೇತ್ರವಾಗಿ ಬೆಳೆಯಲಿ : ಪಾಟೀಲ್

ಕೊಪ್ಪಳ/ ಕುಕನೂರ : ನಮ್ಮ ಊರು ಮಾದರಿ ಗ್ರಾಮವಾಗಿ ,ಧಾರ್ಮಿಕ ಕೇತ್ರವಾಗಿ ಬೆಳೆಯಲಿ ,ನಾವೆಲ್ಲರೂ ಧರ್ಮದ ಹಾದಿಯಲ್ಲಿ ಸಾಗಿ ಭಯ ಭಕ್ತಿಯಿಂದ ಜಾತ್ರೆಯನ್ನು ಯಶಸ್ವಿಗೋಳಿಸೋಣ ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಎಚ್.ಡಿ ಪಾಟೀಲ್ ಅವರು ಮಾತನಾಡಿ ಸರ್ವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೋಳಿಸಲು ಸಾಧ್ಯ ಎಂದರು. ಕುಕನೂರಿನ ಅನ್ನದಾನೇಶ್ವರ ಮಠದ ಮಹಾದೇವ ಸ್ವಾಮೀಜಿ ಅವರು ಸಾನಿದ್ಯ ವಹಿಸಿ ಮಾತನಾಡಿ ಭಟಪನಳ್ಳಿಯ ಭಕ್ತರ ಸೇವೆ ಅಪಾರವಾದದು ತಾವೆಲ್ಲರೂ ನೂತನ ತೇರನ್ನು ಒಂದು ವರ್ಷದಲ್ಲಿ ನಿರ್ಮಾಣ ಮಾಡಿ ತಾವು ಭಕ್ತಿಯಿಂದ ತೇರು ಎಳೆಯುವುದಕ್ಕೆ ಕಂಕಣ ಬದ್ದರಾಗಿ ಶ್ರಮಿಸಿದ್ದೀರಿ ತಮ್ಮ ಕಾರ್ಯ ಶ್ಯಾಘನೀಯವಾದದು ಎಂದು ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕಾ ದೇವಿಯ ಮಠದಲ್ಲಿ 29 ನೇಯ ಜಾತ್ರಾ ಹಾಗೂ ಪುರಾಣ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ನೂತನ ಮಹಾರಥೋತ್ಸವದಂಗವಾಗಿ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಾಣದಲ್ಲಿ ಶ್ರೀ ಭೀಮಾಂಬಿಕಾದೇವಿಯ ನಾಮಕರಣದ ತೊಟ್ಟಿಲು ಕಾರ್ಯಕ್ರಮ, ಶ್ರೀ ಭೀಮಾಂಬಿಕಾ ದೇವಿಯ ಮದುವೆ ಸಮಾರಂಭ, ಸೀಮಂತ ಕಾರ್ಯಕ್ರಮ ಹಾಗೂ ಉಡಿ ತುಂಬುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಾಗಿಬಂದವು, ಕಲ್ಲೂರಿನ ಕಲ್ಲಯ್ಯ ಶಾಸ್ತ್ರೀ ಅವರು ಅಮ್ಮನ ಜೀವನ ಚರಿತ್ರೆಯ ಬಗ್ಗೆ ಪ್ರವಚನ ನೀಡಿದರು.
ಸಂಗೀತಾ ಬಳಗದ ಹಾಲಕೇರಿಯ ಬಡಿಗೇರ ದ್ಯಾಮಣ್ಣ ಗವಾಯಿ, ಸಿದ್ನೇಕೊಪ್ಪದ ಖಾದರಸಾಬ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ವೇಳೆ ಹಿರಿಯರಾದ ವೀರಯ್ಯಸ್ವಾಮಿ ಭದ್ರಾಪೂರಮಠ, ಹಂಚ್ಯಾಳಪ್ಪ ಕಲ್ಲಗೋಡಿ, ಮಲ್ಲಿಕಾರ್ಜುನ ರಡ್ಡೇರ, ಮಲ್ಲಪ್ಪ ಗುಡಿಹಿಂದಲ, ರಾಜಶೇಖರ ಕರಮುಡಿ, ಮಹೇಶ ದೊಡ್ಡಮನಿ, ಯಲ್ಲಪ್ಪ ದೇವರಳ್ಳಿ, ಶರಣಬಸಪ್ಪ ದಾನಕೈ, ಯಲ್ಲಪ್ಪ ಡೋಳ್ಳಿನ, ಮುದಿಯಪ್ಪ ಪೂಜಾರ, ಶರಣಪ್ಪ ಹಾದಿಮನಿ, ಕೆಂಚಪ್ಪ ಹರಿಜನ, ಚೆನ್ನಪ್ಪ ತಳವಾರ , ಬಸಪ್ಪ ಕುಡಗುಂಟಿ, ಉಮೇಶ ಗೂಳರಡ್ಡಿ, ಕಿರಣ ಗುದ್ಯಾಡಿ,ಯಲ್ಲಪ್ಪ ಶಿ.ಪೋತುಂಡಿ, ಬಸವರಾಜ ಭಾವಿಕಟ್ಟಿ, ಹನುಮಪ್ಪ ಗಾಳಿ, ಫಕೀರಪ್ಪ ಪೋತುಂಡಿ, ಹರೀಶ್ ಕುಡಗುಂಟಿ, ಯಮನೂರಪ್ಪ ಹರಿಜನ, ಹೇಮಲತಾ ಪಾಟೀಲ್, ಪ್ರೀಯಾ ರವಿಕಿರಣ್ , ಜ್ಯೋತಿ ದೊಡ್ಡಮನಿ , ದೇವಮ್ಮ ಭಾವಿಕಟ್ಟಿ, ವಿದ್ಯಾ ಹೊಸಮನಿ,ಶೃತಿ ಗುರಿಕಾರ, ವಿಜಯಲಕ್ಷ್ಮಿ ದಾನಕೈ, ಶೋಭಾ ಉದ್ದಾರ, ಲಕ್ಷ್ಮೀ ಭದ್ರಾಪೂರ, ಕಾವ್ಯ ಗಾಳಿ, ಅನ್ನಪೂರ್ಣ ಕುಡಗುಂಟಿ, ಗುದ್ಯಾಡಿ, ಸುನೀತಾ ದೊಡ್ಡಮನಿ, ಲಕ್ಷ್ಮೀ ಭಾವಿಕಟ್ಟಿ ,ಗಾಯತ್ರಿ ಗುರಿಕಾರ, ಯಶೋಧಾ ಗುದ್ಯಾಡಿ,ಶಾಂತ ಗುಡಿಹಿಂದಲ , ಜಯಮ್ಮ,ಸಂಜನಾ ಹೊಸಳ್ಳಿ, ಲಕ್ಷ್ಮೀ ಕುಡಗುಂಟಿ ಸೇರಿದಂತೆ ಇತರರು ಇದ್ದರು.
ಈ ವೇಳೆ ಪ್ರಸಾದ ಸೇವೆಮಾಡಿದವರಿಗೆ ಹಾಗೂ ನೂತನ ರಥೋತ್ಸವಕ್ಕೆ ದೇಣಿಗೆ ಸಲ್ಲಿಸಿರುವ ಸಕಲ ಸದ್ಭಕ್ತರಿಗೆ ಸನ್ಮಾನಿಸಲಾಯಿತು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!