
ಮಡಿಕೇರಿ : ಮಕ್ಕಂದೂರು ಕೊಡವ ಸಮಾಜದ ಮೈದಾನದಲ್ಲಿ ನೂತನ ಆಸ್ಟೋ ಲೆದರ್ ಬಾಲ್ ಕ್ರಿಕೆಟ್ ಟರ್ಫ್ ಮತ್ತು ಬೌಲಿಂಗ್ ಘಟಕವನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಉದ್ಘಾಟಿಸಿದರು. ಮಕ್ಕಂದೂರು ಕೊಡವ ಸಮಾಜದ ಯೂತ್ ಕೌನ್‌ಸಿಲ್‌ನ ಪ್ರಯತ್ನದ ಫಲವಾಗಿ ಸ್ಥಾಪಿಸಲ್ಪಟ್ಟ ಟರ್ಫ್‌ನ ಸದುಪಯೋಗ ಪಡಿಸಿಕೊಳ್ಳಲು ಶಾಸಕರು ಈ ಸಂದರ್ಭ ಕರೆ ನೀಡಿದರು.
ಟರ್ಫ್ ಉದ್ಘಾಟಿಸಿದ ನಂತರ ಮಾತನಾಡಿದ ಮಂತರ್ ಮಕ್ಕಂದೂರು ಕೊಡವ ಸಮಾಜದ ಕಟ್ಟಡದ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ ರೂ.5 ಲಕ್ಷ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಮಕ್ಕಂದೂರು ಕೊಡವ ಯೂತ್ ಕೌನ್ಸಿಲ್‌ನ ಯುವಕರ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಜಿಲ್ಲೆಯಾದ್ಯಂತ ವೃತ್ತಿಪರ ಕ್ರಿಕೆಟ್ ತರಬೇತಿಯನ್ನು ಉತ್ತೇಜಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಬೇಸಿಗೆ ಶಿಬಿರವನ್ನು ಪ್ರಾರಂಭಿಸಲು ಮತ್ತು ಮಕ್ಕಳಲ್ಲಿ ವೃತ್ತಿಪರ ಕ್ರಿಕೆಟ್ ತರಬೇತಿಯನ್ನು ಉತ್ತೇಜಿಸಲು ಮಂಡಳಿಗೆ ಸಲಹೆ ನೀಡಿದರು. ಡಾ.ಮಂತರ್ ಗೌಡ. ಮಾನ್ಯ ಶಾಸಕರು,ಮಡಿಕೇರಿ ವಿಧಾನಸಭಾ ಕ್ಷೇತ್ರ.
ವರದಿ: ಪ್ರಿತುನ್ ಪೂವಣ್ಣ




















