ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಮತ್ತು ಆಡಳಿತ ವರ್ಗದಿಂದ ಅಂಬೇಡ್ಕರ್ ಭವನದಲ್ಲಿ
ಡಾ. ಬಿ. ಆರ್.ಅಂಬೇಡ್ಕರ್ ಅವರ 135 ನೇ ಜಯಂತಿ ಜರುಗಿತು. ” ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ನೈತಿಕ ಮತ್ತು ಸಾಂವಿಧಾನಿಕ ಆತ್ಮವನ್ನು ನೀಡಿದ ದಾರ್ಶನಿಕರು ಅವರಿಗೆ ನಾವು ಗೌರವದಿಂದ ನಮಸ್ಕರಿಸಬೇಕು, ಅವರು ಭಾರತದ ಸಂವಿಧಾನದ ಶಿಲ್ಪಿ ಮಾತ್ರವಲ್ಲ ಸ್ವಾತಂತ್ರ್ಯ ಸಮಾನತೆ ಭಾವೈಕ್ಯತೆ ಮತ್ತು ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟ ಮಾಡಿದ ಯೋಧರಾಗಿದ್ದರು. ಭಾರತದ ವ್ಯಾಖ್ಯಾನಿಸುವ ಮೌಲ್ಯಗಳು ಅವರು ಪ್ರತಿಧ್ವನಿಯಾಗಿ ತತ್ವಗಳನ್ನು ಪ್ರತಿಪಾದಿಸಿದ ಮಹಾನ್ ಶಕ್ತಿಯಾದ ಜ್ಞಾನ ಭಂಡಾರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಹಶೀಲ್ದಾರ್ ಮಂಜುನಾಥ್ ಕೆ. ರವರು ಪೂಜೆ ಸಲ್ಲಿಸಿ ಹೇಳಿದರು.
ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಸಾಮಾಜಿಕ ಸಮಾನತೆ ಅಸ್ಪೃಶ್ಯತೆಯ ನಿವಾರಣೆಗೆ ಹೋರಾಡಿದ ಮಹಾನ್ ನಾಯಕ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರಿಗೆ 135 ನೇ ಜನ್ಮದಿನದ ಜಯಂತಿಯ ಶುಭಾಶಯಗಳು.
ಅವರು ಅಸ್ಪೃಶ್ಯತೆ ವಿರುದ್ಧ ಹೋರಾಟ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಕಲ್ಪನೆ ಹಾಗೂ ವಿಚಾರವಂತಿಕೆಯು ಪ್ರಜಾಪ್ರಭುತ್ವದ ಆಡಳಿತ ವಿಧಾನವಲ್ಲ ಅದೊಂದು ಜೊತೆಯಾಗಿ ಬಾಳುವ ವಿಧಾನ ಸಮಗ್ರ ಬದುಕಿನ ಅನುಭವ ಜೊತೆಯಲ್ಲಿರುವ ಮನುಷ್ಯರಿಗೆ ಘನತೆ ಗೌರವ ನೀಡುವ ಕ್ರಮವೆಂದು ಭಾರತದ ಸಂವಿಧಾನದಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ರವರು ಹೇಳಿದ್ದಾರೆ. ಸಮಾಜದಲ್ಲಿ ವ್ಯಕ್ತಿಗೆ ವ್ಯಕ್ತಿತ್ವಕ್ಕೆ ಬೆಲೆ ಬರಲು ದೇವಸ್ಥಾನಗಳ ಮುಂದೆ ಸಾಲುಗಟ್ಟಿ ನಿಲ್ಲುವುದಕ್ಕಿಂತ ಗ್ರಂಥಾಲಯಗಳ ಮುಂದೆ ಸಾಲುಗಟ್ಟಿ ನಿಂತರೆ ಮನುಷ್ಯನ ಜ್ಞಾನ ಮತ್ತು ಸಮಾಜವನ್ನು ಎದುರಿಸುವ ಧೈರ್ಯ ಹೆಚ್ಚುತ್ತದೆ ಎಂದು ಸಮಾಜದಲ್ಲಿ ಧೈರ್ಯದಿಂದ ಹುಲಿಗಳಂತೆ ಬದುಕಬೇಕು ಎಂದು ತಿಳಿಸಿದರು. ನಾವು ಮೊದಲು ಮಾನವ ಜಾತಿಯಾಗಬೇಕು ಯಾವ ಧರ್ಮ ಅಥವಾ ದೇವರು ನಮ್ಮನ್ನು ಉದ್ದಾರ ಮಾಡುವುದಿಲ್ಲ ನಮ್ಮನ್ನು ಉದ್ದಾರ ಮಾಡುವುದು ನಮ್ಮ ಶಿಕ್ಷಣ ಮಾತ್ರ ಅದುವೇ ನಮ್ಮ ಶಕ್ತಿಯಾಗುತ್ತದೆ ಎಂದು ಸಮಾಜಕ್ಕೆ ಸಾರಿ ಸಾರಿ ಹೇಳಿದರು. ನಾವು ಅವರನ್ನು ಕೆಲವು ಸಮಯದಲ್ಲಿ ಮಾತ್ರ ನೆನಪಿಸಿಕೊಳ್ಳುವುದಲ್ಲ ಅವರು ಪ್ರತಿಪಾದಿಸಿದ ಪ್ರತಿಯೊಂದು ತತ್ವವನ್ನು ರಕ್ಷಿಸಿ ಹಕ್ಕನ್ನು ಮೌಲ್ಯವನ್ನು ಎತ್ತಿ ಹಿಡಿದು ನಾವು ಎದ್ದು ನಿಲ್ಲಬೇಕು ಧೈರ್ಯದಿಂದ ಹೇಳಬೇಕು ಆಗ ಅಂಬೇಡ್ಕರ್ ರವರಿಗೆ ನಾವು ಸಲ್ಲಿಸುವ ಗೌರವ ಎಂದರು.
ಈ ಸಂದರ್ಭದಲ್ಲಿ ರಾಮ್ ಪ್ರಸಾದ್ ಗ್ರೇಡ್ 2, ಅಪೂರ್ವ ಸಿ ಅನಂತರಾಮು, ಯಮುನಾ , ಫೈರೋಜ್ ಬೇಗಂ, ಉಮೇಶ್ ಕೆ ಎಸ್.,ಪ್ರಸನ್ನ ಕುಮಾರ್ ಎಂ ಇ ಇ, ಅನಿಲ್, ತೀರ್ಥೇಶ್, ಕಾಂತರಾಜು, ಇನ್ನು ಆಡಳಿತ ಅಧಿಕಾರಿಗಳು, ಆಡಳಿತ ವರ್ಗದವರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ.ಪ್ರಸನ್ನ ಕುಮಾರ್ ಎಸ್, ಕೊರಟಗೆರೆ




















