ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕಿನ ಗೂಳೂರು ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಶ್ರೀ ಗಣೇಶ ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ಕಾಲೇಜು ಬಡ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುತ್ತಿದ್ದು ಸ್ವಾಮೀಜಿಯವರು ಒಳ್ಳೆಯ ಅವಕಾಶವನ್ನು ಕಲ್ಪಿಸಿದ್ದಾರೆ. ಇಲ್ಲಿ ಕಲಿಯಲಿಕ್ಕೆ ಒಳ್ಳೆಯ ಅವಕಾಶವಿದ್ದು ಬಂದಿರುವಂತಹ ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಪ್ರತಿ ವರ್ಷವೂ ಒಳ್ಳೆಯ ಅಂಕಗಳನ್ನು ತರುವುದರ ಮೂಲಕ ಇಲ್ಲಿ ಓದಿರುವಂತಹ ಮಕ್ಕಳು ಕಾಲೇಜಿಗೆ ಒಳ್ಳೆಯ ಹೆಸರು ತಂದಿರುತ್ತಾರೆ ಇದಕ್ಕೆ ಅಲ್ಲಿನ ಪ್ರಾಂಶುಪಾಲರಾದ ಸೋಮಸುಂದರ್ ರವರು ಮತ್ತು ಉಪನ್ಯಾಸಕರು, ಸಹ ಸಿಬ್ಬಂದಿ ವರ್ಗದವರ ಶ್ರಮ ಕೂಡಾ ಕಾರಣ. ಇಂತಹ ಬಡ ಪ್ರತಿಭೆಗಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಇನ್ನೂ ಒಳ್ಳೆಯ ಅವಕಾಶ ಸಿಗಲಿ ಎಂಬುದೇ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಆಶಯ. ಈ ಮಕ್ಕಳಿಗೆ ಶುಭ ಹಾರೈಸೋಣ.
ವರದಿ ಲಕ್ಷ್ಮಿ ತುಮಕೂರು




















