ಬಳ್ಳಾರಿ / ಕಂಪ್ಲಿ : ಜೀವನದ ಒತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದು, ಇದರಿಂದ ರೋಗಗಳು ಮನುಷ್ಯನ ದೇಹಕ್ಕೆ ಸೇರುವಂತಾಗಿದ್ದು, ಆದ್ದರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ತಪಾಸಣೆ ಮಾಡಿಕೊಂಡು, ಆರೋಗ್ಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಪಿಡಿಒ ಹಾರ್ವಿ ಶೇಷಗಿರಿ ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ವಿನೂತನ ಪದವಿ ಕಾಲೇಜು ನೇತೃತ್ವದಲ್ಲಿ ಎನ್ಎಸ್ಎಸ್ ಶಿಬಿರದ ಹಿನ್ನಲೆ ಕಂಪ್ಲಿ ತಾಲೂಕು ಜೆಸಿಐ ಸೋನಾ ಘಟಕ, ವೀರಬ್ರಹ್ಮೇಂದ್ರ ಸ್ವಾಮಿ ಪಾಲಿಕ್ಲಿನಿಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ, ಬೇಸಿಗೆಯ ಕಾಲವಾಗಿರುವ ಕಾರಣ ಪ್ರತಿಯೊಬ್ಬರು ಆರೋಗ್ಯಕ್ಕೆ ಕಡೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಇಲ್ಲಿನ ಶಿಬಿರದಲ್ಲಿ ತಜ್ಞ ವೈದ್ಯರಾದ ಜೆಸಿ ಡಾ.ಭರತ್ ಪದ್ಮಶಾಲಿ, ಜೆಸಿ ಡಾ.ಶ್ರದ್ಧಾ ಭರತ್, ಮತ್ತು ಜೆಸಿ ಡಾ. ಪ್ರವೀಣ್ ಅವರು ಭಾಗವಹಿಸಿದ ವಯಸ್ಕರು ಮತ್ತು ಹಿರಿಯರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಆರೋಗ್ಯ ತಪಾಸಣೆ ನಡೆಸಿಕೊಟ್ಟರು.
ಈ ಶಿಬಿರದಲ್ಲಿ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಜನ ಫಲಾನುಭವಿಗಳು ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ಸಲಹೆ ಪಡೆದರು ಮತ್ತು ಎಲ್ಲಾ ಫಲಾನುಭವಿಗಳಿಗೆ ಉಚಿತ ಔಷಧಿಗಳನ್ನು ಪಡೆದುಕೊಂಡರು.
ವೈದ್ಯಾಧಿಕಾರಿ ಡಾ. ಫಾರೂಕ್, ಶಿಕ್ಷಕ ರಾಮುಲು, ಪ್ರಾಂಶುಪಾಲ ಮದ್ದಾನೆಪ್ಪ ಬಿಡನಾಳ, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ, ಎನ್.ಎಸ್.ಎಸ್ ಶಿಬಿರದ ಶಿಬಿರಾರ್ಥಿಗಳು ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















