ಸಿರುಗುಪ್ಪ/ ಮುದ್ದಟನೂರು : ಸಿರುಗುಪ್ಪ ತಾಲೂಕಿನ ಮುದ್ದಟನೂರು ಗ್ರಾಮದ ಜಾಮಿಯಾ ಸುನ್ನಿ ಮಸೀದಿಯಲ್ಲಿ ಖುರ್ರತ್ತುಸ್ಸಾದಾತ್ ಸುನ್ನೀ ಮಖ್ತಬ
ಪ್ರಾರಂಭಗೊಂಡಿತು. ಸಮಾರಂಭವನ್ನು ಮಸೀದಿಯ ಖತೀಬ್ ಆಮಿರ್ ಅಶ್ಅರೀ ಬನ್ನೂರು ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ನೀಡಬೇಕು. ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳಿಗಿರುವ ಶಿಕ್ಷಣದ ದಾಹವನ್ನು ನೀಗಿಸಲಾಗುವುದು. ಎಲ್ಲಾ ಧರ್ಮದ ಪ್ರತಿಯೊಬ್ಬನಿಗೂ ಧಾರ್ಮಿಕ ಶಿಕ್ಷಣವು ಅಗತ್ಯವಾಗಿದೆ. ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ಕೊಡುವ ಜವಾಬ್ದಾರಿ ಪೋಷಕರ ಮೇಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವು ಮನುಷ್ಯನಿಗೆ ಸೂಕ್ಷ್ಮ ಬದುಕನ್ನು ಕಲಿಸಿಕೊಡುತ್ತದೆ. ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನು ಪಡೆಯುವುದಕ್ಕೆ ಇಸ್ಲಾಂ ಧರ್ಮದಲ್ಲಿ ವಿಶೇಷವಾದ ಮಹತ್ವವನ್ನು ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸ್ಸಲ್ಲಮರು ಕಲ್ಪಿಸಿರುತ್ತಾರೆ. ಗ್ರಾಮದಲ್ಲಿ ಕರಾವಳಿ ಕರ್ನಾಟಕದ ಆಧ್ಯಾತ್ಮಿಕ ಗುರು, ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸ್ಸಲ್ಲಮರ ಪರಂಪರೆಗೆ ಸೇರುವ ಹಝ್ರತ್ ಖುರ್ರತ್ತುಸ್ಸಾದಾತ್ ಕೂರ ತಂಙಲ್ ಉಸ್ತಾದರ ನಾಮಧೇಯದಲ್ಲಿ ಪ್ರಸ್ತುತ ಮಖ್ತಬ ಕಾರ್ಯಚರಿಸಲಿದೆ. ಇಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಊರಿನ ಮುತವಲ್ಲಿ ಹುಸೈನ್ ಸಾಬ್ ಸೇರಿದಂತೆ ಮಕ್ಕಳು, ಪೋಷಕರು ಹಾಗೂ ಯುವಕರು ಪಾಲ್ಗೊಂಡರು.
ವರದಿ : ಜಿಲಾನಸಾಬ್ ಬಡಿಗೇರ್




















