ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಡಾ. ಅಬ್ದುಲ್ ಕಲಾಂ ಎಸ್ಪಿ ಚಾರಿಟಬಲ್ ಫೌಂಡೇಶನ ವತಿಯಿಂದ ಮಕ್ಕಳಿಗೆ ಉಚಿತ ಕರಾಟೆಯ ಸಮವಸ್ತ್ರ ವಿತರಿಸಲಾಯಿತು. ಈ ವೇಳೆ ಫೌಂಡೇಶನ್ನ ಕಾರ್ಯದರ್ಶಿ ಎಚ್.ಪೀರಾವಲಿ ಮಾತನಾಡಿ, ”ನಮ್ಮ ಆಶಯದಂತೆ ತಂದೆ ತಾಯಿ ಇಲ್ಲದ ಅನಾಥ ಹೆಣ್ಣು ಮಕ್ಕಳಿಗೆ ಹಾಗೂ ವಿಶೇಷಚೇತನ ಕುಟುಂಬರ ಹೆಣ್ಣು ಮಕ್ಕಳಿಗೆ ಉಚಿತ ಕರಾಟೆ ತರಬೇತಿ ನೀಡುವುದರ ಜತೆಗೆ ಮಕ್ಕಳಿಗೆ ಕರಾಟೆಯ ಸಮವಸ್ತ್ರ ವಿತರಿಸಲಾಗಿದೆ ಎಂದರು. ಈ ವೇಳೆ ರೈತ ಮುಖಂಡ ಜಿ. ನಾಗರೇಡ್ಡಿ ಮಾತನಾಡಿ, “ಪ್ರಸ್ತುತ ದಿನಮಾನಗಳಲ್ಲಿ ಯುವಕ, ಯುವತಿಯರು ತಮ್ಮ ಆತ್ಮ ರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯ ಎಂದರು. ಈ ಸಂದರ್ಭದಲ್ಲಿ ವಡ್ಡರ ವೀರೇಶ್, ರಾಜಪಪ್ಪ ಜಡೇಶ್ವರಡ್ಡಿ, ನಾರಾಯಣ, ಬಿ. ರಾಜ, ಎಸ್. ರಾಮಪ್ಪ, ಸಾಧಿಕ್ ಅಲಿ ಸಾಬ್, ಪರಶುರಾಮ್ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















