ಮಡಿಕೇರಿ: ಗಾಂಧಿ ಮೈದಾನದಲ್ಲಿ ಆಯೋಜನೆಗೊಂಡ ಗೌಡ ಸ್ಪೋರ್ಟ್ಸ್ ಫೆಸ್ಟ್-2026ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ, ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಮಡಿಕೇರಿಯ ಪ್ರಸಿದ್ಧ ಗಾಂಧಿ ಮೈದಾನದಲ್ಲಿ, ಮಡಿಕೇರಿ ಅರೆಭಾಷೆ ಗೌಡ ಕ್ರೀಡಾ ಅಕಾಡೆಮಿ ವತಿಯಿಂದ ಈ ಕ್ರೀಡಾಕೂಟವು ಆಯೋಜನೆಗೊಂಡಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದ ಮಾನ್ಯ ಶಾಸಕರು, ಕೊಡಗಿನ ಪ್ರಮುಖ ಸಮದಾಯಗಳಲ್ಲಿ ಒಂದಾಗಿರುವ ಅರೆ ಭಾಷೆ ಗೌಡ ಸಮುದಾಯದವರು ಕ್ರೀಡೆಯಲ್ಲಿ ಸಹ ಉತ್ತಮ ಹೆಸರನ್ನು ಗಳಿಸಿದವರಾಗಿದ್ದಾರೆ. ಸಮಾಜವನ್ನು ಒಗ್ಗೂಡಿಸುವಲ್ಲಿ ಹಾಗೂ ಸಮಾಜದ ಸ್ವಾಸ್ತ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಲು ಕ್ರೀಡಾಕೂಟಗಳು ಅತ್ಯಂತ ಸಹಕಾರಿಯಾಗಲಿದೆ. ಮಡಿಕೇರಿ ಅರೇ ಭಾಷೆ ಗೌಡ ಕ್ರೀಡಾ ಅಕಾಡೆಮಿಯ ಈ ಪ್ರಯತ್ನವು, ಕ್ರೀಡೆಗೆ ಮಾತ್ರವಲ್ಲದೆ ಸಮಾಜದ ಸಹಬಾಳ್ವೆಗೂ ಒಂದು ಉತ್ತಮ ವೇದಿಕೆಯಾಗಿ ಲಭಿಸಿದೆ. ಸಮಾಜದ ಬಾಂಧವರು ಉತ್ತಮ ರೀತಿಯಲ್ಲಿ ಆಟ ಆಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಕ್ರೀಡೆಯಿಂದ ಕಲಿಯುವ ಉತ್ತಮ ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಏಳಿಗೆ ಸಾಧ್ಯ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಸೂರಜ್ ಹೊಸೂರು, ಆಪ್ರು ರವೀಂದ್ರ, ಮುತ್ತು ರಾಜು, ದಂಬೆಕೊಡಿ ಕವನ ಭೀಷ್ಮ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ




















