ಸಿರುಗುಪ್ಪ- ತಾಲೂಕಿನ ಸಿರಿಗೇರಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 2025- 26 ನೇ ಸಾಲಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ನಡೆಯಿತು. ಗ್ರಾಮ ಪಂಚಾಯತ್ ಸದಸ್ಯರು ಮಾತನಾಡಿ ಕಳೆದ 4-5 ತಿಂಗಳಿಂದ ಸದಸ್ಯರ ಗೌರವ ಧನ ನೀಡುವುದು ಬಾಕಿ ಉಳಿದಿದೆ ಕೆಲವೇ ದಿನಗಳಲ್ಲಿ ಅಧಿಕಾರವಧಿ ಮುಕ್ತಾಯಗೊಳ್ಳುತ್ತದೆ ಗೌರವಧನ ನೀಡಿ ಸಭೆ ನಡೆಸಿ ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಹುಸೇನ್ ಪೀರ ಸಾಬ್ ವಾರದೊಳಗೆ ಎಲ್ಲಾ ಸದಸ್ಯರ ಗೌರವ ಧನ ನೀಡಲಾಗುವುದು ಎಂಬ ಭರವಸೆ ನೀಡಿದರು. ಮುಂದುವರಿದು ಪಿಡಿಒ ಮಾತನಾಡಿ ತೇರು ನಿಲುಗಡೆ ಜಾಗ ಸ್ಥಳಾಂತರಿಸುವ ಬಗ್ಗೆ ಗ್ರಾಮದ ದ್ವಾರಕಾ ನಗರಕ್ಕೆ ಮೂಲ ರಸ್ತೆ ನೀಡುವುದರ ಬಗ್ಗೆ ದಾಸಪುರ ಕೆರೆಯಲ್ಲಿ ನೀರು ಸಂಗ್ರಹಣೆ ಬಗ್ಗೆ 7ನೇ ವಾರ್ಡಿನ ಮೌಲಾಲಿ ದರ್ಗಾ ಹತ್ತಿರ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಮೃತ ಸರೋವರ ಅಕ್ಕ ತಂಗಿ ಕೆರೆಗೆ ರಸ್ತೆ ಕಲ್ಪಿಸುವ ಬಗ್ಗೆ ಮುಖ್ಯ ಬಜಾರ ಗಣೇಶ ಗುಡಿ ಹತ್ತಿರ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ತಕರಾರು ಅರ್ಜಿ ಬಂದಿರುವ ಬಗ್ಗೆ ಸದಸ್ಯರ ಗಮನ ಸೆಳೆದರು. ಈ ಬಗ್ಗೆ ಚರ್ಚಿಸಿದ ಸದಸ್ಯರು ಯಾವುದೇ ಬೇಡಿಕೆಗಳನ್ನು ಕಾನೂನಾತ್ಮಕ ರೀತಿಯಲ್ಲಿ ಬಗೆಹರಿಸಿ ಕೊಡಿ ಎಂದು ಒಪ್ಪಿಗೆ ಸೂಚಿಸಿದರು ಪ್ರಮುಖವಾಗಿ ಬೇಸಿಗೆ ಹಂಗಾಮಿನ ಹಿನ್ನೆಲೆಯಲ್ಲಿ ಯಾವುದೇ ಕೆರೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಪೀಡಿಓ ಗೆ ತಿಳಿಸಿದರು ಗ್ರಾಮ ಪಂಚಾಯತ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿದ್ದರಾಮಪ್ಪ ಸದಸ್ಯರಾದ ಎಸ್ಎಂ ಅಡಿವೆಯ್ಯ ಸ್ವಾಮಿ ರಮೇಶ್ ಭಜಂತ್ರಿ ಗುಡಟ್ಟಿ ಈರಣ್ಣ ರಮೇಶ ಗೋಡೆ ಚಿನ್ನಪ್ಪ ಲಕ್ಷ್ಮಿ ಶಾಂತಮ್ಮ ಹನುಮೇಶ ಕರಿಬಸಪ್ಪ ಎರ್ರಿಪ್ಪ ದ್ಯಾವಮ್ಮ ಕೆ ನೀಲಮ್ಮ ಸ್ನೇಹಲತಾ ಕೆ ಶಿವಪ್ಪ ಪಾರ್ವತಿ ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















