ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮಾಜ ಸೇವೆಯ ಮೂಲಕ ಮಾದರಿಯಾದ ಶ್ರೀ ಸುರೇಶ ಮಂಗಳೂರು.

ಶಿಕ್ಷಣ ಪ್ರೇಮಿ, ಸಮಾಜಮುಖಿ, ಸುರೇಶ ಮಾಸ್ಟರ್, ಎಂದೇ ಖ್ಯಾತಿಯಾದ, ಸುರೇಶ ಮಂಗಳೂರು.

ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ, ಎಲ್ಲರಲ್ಲಿಯೂ ಪ್ರತಿಭೆ ಇದ್ದೇ ಇರುತ್ತದೆ, ಅದರ ಪ್ರದರ್ಶನವಾದಾಗ ಮಾತ್ರ ಆ ವ್ಯಕ್ತಿಯ, ವ್ಯಕ್ತಿತ್ವದ ಪರಿಚಯವಾಗುತ್ತದೆ, ಅಂತಹ ವ್ಯಕ್ತಿಯೊಬ್ಬರ ಪರಿಚಯ ಬರಹವೇ ಈ ಲೇಖನ.

ಸುರೇಶ ಮಂಗಳೂರು, ಮೂಲತಃ ಗಂಗಾವತಿ ತಾಲೂಕಿನ ಚಿಕ್ಕ ಬೆಣಕಲ್ ಗ್ರಾಮದ ಶ್ರೀ ವಿರುಪಾಕ್ಷಪ್ಪ, ಮತ್ತು ಶಕುಂತಲಮ್ಮ (ಗವಿಸಿದ್ದಮ್ಮ) ದಂಪತಿಗಳ ಮಗನಾಗಿ 01-06-1971ನೇ ಇಸ್ವಿಯಲ್ಲಿ ಜನಿಸಿದರು, ಪ್ರಾಥಮಿಕ ವಿದ್ಯಾಭ್ಯಾಸ ನಾಲ್ಕನೆಯ ತರಗತಿಯವರೆಗೆ ಹುಟ್ಟೂರಲ್ಲೇ ಪೂರೈಸಿದ ಅವರ ಒಂಬತ್ತನೇ ವಯಸ್ಸಿನಲ್ಲಿ ತಂದೆಯವರ ಅಕಾಲಿಕ ಸಾವು, ಬಾಲಕನ ಮೇಲೆ ಅಪಾರ ನೋವನ್ನು ಉಂಟು ಮಾಡಿತು. ಅವರ ತಾಯಿಯ ತವರು ಮನೆಯಾದ ಕೊಪ್ಪಳಕ್ಕೆ ಬಂದು ಮುಂದಿನ ಶಿಕ್ಷಣವನ್ನು ಪದವಿ ಹಂತದವರೆಗೂ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಪೂರೈಸಿದರು.
1997ರಿಂದ 1999 ರವರೆಗೆ ಕಾರಟಗಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿ, (ಸೇವೆ) ಗೆ ಸೇರಿದರು, ಕಾರಣಾಂತರಗಳಿಂದ, ಶಿಕ್ಷಣ ಸೇವೆಯನ್ನು ಬಿಟ್ಟು, 1999ರಿಂದ 2014ರವರಗೆ ಕಾರಟಗಿ, ನವಲಿ ಭಾಗದ ಸರಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ, ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಅಡುಗೆ ಸಿಲಿಂಡರ್ ವಿತರಿಸುವ ಹಾಗೂ ಎಲ್ಲಾ ತರಹದ ಗ್ಯಾಸ್, ಸ್ಟವ್, ರಿಪೇರಿ ಮಾಡುವ ಅಂಗಡಿಯೊಂದನ್ನು ತೆರೆದು ಕಡಿಮೆ ಹಣವನ್ನು ಪಡೆದು ಬಡವರ ಪಾಲಿಗೆ ಗ್ಯಾಸ್ ಮಾಸ್ಟರ್ ಸುರೇಶ ಎಂದೇ ಹೆಸರುವಾಸಿಯಾದರು.
ಸುರೇಶ ಮಂಗಳೂರು ಅವರ ಸಮಾಜ ಸೇವೆಯ ವಿವಿಧ ಆಯಾಮಗಳ ಬಗ್ಗೆ ಹೇಳಬೇಕೆಂದರೆ ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ರಕ್ತ ದಾನ ಮಾಡುವ ಅಭ್ಯಾಸ, ರೋಗಿಗಳಿಗೆ, ಉಚಿತವಾಗಿ, ಹಣ್ಣು-ಹಂಪಲು ಮತ್ತು ಅಗತ್ಯವಿರುವ ಔಷಧಿಗಳನ್ನು
ಸಕಾಲಕ್ಕೆ ಒದಗಿಸಿ ಕೊಡುವುದು, ಮಹಿಳೆಯರ, ಪುರುಷರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಿ, ಅವರನ್ನು ಆರೋಗ್ಯವಂತರನ್ನಾಗಿಸಿ ಖುಷಿ ಪಡುವ ಸುರೇಶ ಮಂಗಳೂರು ಅವರನ್ನು ಸಮಾಜ ಮುಖಿ,
ಸುರೇಶ ಎಂದರೆ ಅತಿಶಯೋಕ್ತಿಯ ಮಾತಾಗಲಾರದು.
ಆಯುರ್ವೇದ ಉತ್ಪನ್ನಗಳ ಮಾಹಿತಿ ಪಡೆದು
ಆರೋಗ್ಯ ಸಮಸ್ಯೆಗಳಾದ ಬಿ.ಪಿ, ಶುಗರ್, ಮೂಲವ್ಯಾಧಿ, ಕಿಡ್ನಿಗಳಲ್ಲಿ ಹರಳು ಮಲಬದ್ಧತೆ ಮುಂತಾದವುಗಳ ಬಗ್ಗೆ ಸೂಕ್ತ ಚಿಕಿತ್ಸೆ ಒದಗಿಸಿ ಬಡವರ ಪಾಲಿನ ಆಪತ್ಬಾಂಧವನಾಗಿ ಕಾಣಿಸುವ ಇವರ ಸಾಮಾಜಿಕ ಸೇವೆ ಇಷ್ಟಕ್ಕೇ ನಿಲ್ಲುವುದಿಲ್ಲ,
ಪ್ರತೀ ವರ್ಷ ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ದೀನ ದಲಿತರ,
ಹಿರಿಯ ನಾಗರಿಕರ ಕಣ್ಣಿನ ತಪಾಸಣೆ ಕಾರ್ಯ, ಅವರ ನೇತ್ರ ಶಸ್ತ್ರ ಚಿಕಿತ್ಸೆ ) ಯಂತಹ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇದು ತಮ್ಮ ಕರ್ತವ್ಯವೆಂಬಂತೆ, ಶ್ರದ್ಧೆ, ನಿಷ್ಠೆಗಳಿಂದ ಅನುಸರಿಸಿಕೊಂಡು ಬಂದಿದ್ದಾರೆ. ಈ ಕಾರ್ಯ ಸುಮಾರು ಇಪ್ಪತ್ತೆರಡು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಇವರ ಈ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ಸಹಕರಿಸುತ್ತಿರುವ ಸುರೇಶ ಅವರ ಧರ್ಮಪತ್ನಿ ನಿವೇದಿತಾ ಅವರನ್ನು ಕೂಡಾ
ನೆನೆಯಲೇಬೇಕು.
ಸುರೇಶ ಮಂಗಳೂರು ಇವರಿಗೆ ಇಬ್ಬರು ಗಂಡುಮಕ್ಕಳು ಆದರ್ಶ ಮತ್ತು ಅಮೋಘ.
ಇಬ್ಬರೂ ವಿದ್ಯಾವಂತರು, ತಂದೆಯಂತೆ ಮಕ್ಕಳು ಎನ್ನುವಂತೆ ಇವರೂ ಕೂಡಾ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಬಡವರಿಗೆ ನೆರವಾಗುವ, ಅವರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಅಷ್ಟೇ ಆಗಿರದೇ ಸಮಾಜಕ್ಕೆ ಮಾದರಿಯೂ ಆಗಿದೆ ಎಂದರೆ ತಪ್ಪಾಗಲಾರದು.
ಸುರೇಶ ಮಂಗಳೂರು ಅವರು ಎಲ್ಐಸಿ ಆಫ್ ಇಂಡಿಯಾ ಗಂಗಾವತಿ ಶಾಖೆ (ಬ್ರಾಂಚ್)ಯಲ್ಲಿ ಎಲ್ ಐಸಿ ಅಡ್ವೈಸರ್ ಆಗಿ ಕಾರ್ಯ ನಿರ್ವಹಿಸಿ ಹಲವಾರು ಎಂಎಲ್ಎಂ ಕಂಪನಿಗಳಲ್ಲಿ ಡೈರೆಕ್ಟರ್, ಗೋಲ್ಡ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಇವರ ಸಮಾಜ ಮುಖಿ ಕೆಲಸಗಳನ್ನು ಗುರುತಿಸಿ ಇತ್ತೀಚೆಗೆ ಇವರಿಗೆ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ದಾವಣಗೆರೆ ಇವರು ” ಸರಸ್ವತಿ ಕನ್ನಡ ರತ್ನ ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸುರೇಶ ಮಂಗಳೂರ ಅವರ ಸಮಾಜಮುಖಿ ಕಾರ್ಯಗಳು, ಹೀಗೆಯೇ ಮುಂದುವರಿಯಲಿ, ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತಾ ನನ್ನ
ಈ ಬರಹಕ್ಕೆ ವಿರಾಮ ನೀಡುವೆ.

  • ಶಿವಪ್ರಸಾದ್ ಹಾದಿಮನಿ.
    ಕನ್ನಡ ಉಪನ್ಯಾಸಕರು. ಸ. ಪ್ರ. ದರ್ಜೆ ಮಹಿಳಾ ಕಾಲೇಜು, ಕೊಪ್ಪಳ.
    ಮೊಬೈಲ್ ಸಂಖ್ಯೆ : 7996790189
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!