
ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರದ ಯಲ್ಲಮ್ಮಕ್ಯಾಂಪಿನ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ ಕರವೇ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ ಜೊತೆಗೆ ಕುಡಿಯುವ ನೀರಿನ ಅರವಟ್ಟಿಗೆಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು.
ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಚಾಲನೆ ನೀಡಿ ಮಾತನಾಡಿ, ನಾಡಿಗೆ ಬಸವಣ್ಣನ ಕೊಡುಗೆ ಅಪಾರವಾಗಿದೆ. ವಚನ ಕಾಯಕ ತತ್ವ ಸರ್ವಕಾಲಕ್ಕೂ ಅನ್ವಯವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಅವರ ಆದರ್ಶ, ವಚನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದತೆಯಿಂದ ಬದುಕು ರೂಪಿಸಿಕೊಳ್ಳಬೇಕು. ಜಯಂತಿ ನಿಮಿತ್ಯ ಕರವೇ ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ ಇವರು ಕುಡಿಯುವ ನೀರಿನ ಅರವಟ್ಟಿಗೆ ಆರಂಭಿಸುವ ಮೂಲಕ ಸಾರ್ವಜನಿಕರಿಗೆ ನೀರಿನ ದಾಹ ನೀಗಿಸುವದೊಂದಿಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಮಲ್ಲಿಕಾರ್ಜುನ ಇವರು ಇನ್ನಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ, ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದರು.
ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಸತತ ಆರು ವರ್ಷಗಳಿಂದ ನೀರಿನ ಅರವಟ್ಟಿಗೆ ಸ್ಥಾಪಿಸುವ ಮೂಲಕ ಇಲ್ಲಿನ ಕೂಲಿ ಕಾರ್ಮಿಕರು, ಹಮಾಲರು ಸೇರಿದಂತೆ ಜನತೆಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಉರಿಬಿಸಿಲಿನ ತಾಪಕ್ಕೆ ಜನರು ಬಸವಳಿದಿದ್ದು, ಕುಡಿಲಿಕ್ಕೆ ನೀರು ಕೊಟ್ಟರೆ, ತಂಪಾಗಿರುತ್ತಾರೇ ಎಂಬ ಅಭಿಲಾಸೆಯೊಂದಿಗೆ ಅರವಟ್ಟಿಗೆ ನಿರ್ಮಿಸುತ್ತಾ ಬರಲಾಗಿದೆ. ಬವಣ್ಣನವರು ಹಾಕಿಕೊಟ್ಟಂತಹ ದಾರಿಯಲ್ಲಿ ನಡೆಯೋಣ ಎಂದರು. ನಂತರ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿ.ಬಿ.ನಾಗರಾಜ, ಗೌರವಾಧ್ಯಕ್ಷ ಶ್ರೀನಿವಾಸ, ಮುಖಂಡರಾದ ಹೊನ್ನಳ್ಳಿ ಗಂಗಾಧರಗೌಡ, ಬಿ.ನಾರಾಯಣಪ್ಪ, ಎಂ.ಸುದೀರ್, ಜೀರ್ ದೇವರಾಜ, ಗೌಳೇರು ಬಸವರಾಜ, ಹೂಗಾರ ರಮೇಶ, ಆರ್.ರಾಜಶೇಖರಗೌಡ, ಅಕ್ಕಿ ಜಿಲಾನ್, ಲಿಂಗೇಶ, ಶ್ರೀಕಾಂತ, ವಿನಯ, ಲಬೇದ್ ವಿರೇಶ, ಕಟ್ಟೆ ಅಂಬರೇಶ, ಕಟ್ಟೆ ವಿನಯ, ಬಿ.ಮಣಿಕಂಠ, ಬಿ.ವಿನಾಯಕ, ಕಂಚಿ ಮಾಳಪ್ಪ, ಸಂತೋಷ, ಜಿ.ತಿಪ್ಪಾರೆಡ್ಡಿ, ಹೆಚ್.ಉಮೇಶ, ಅವಲಕ್ಕಿ ರಾಮೂರ್ತಿ, ಭೋವಿ ಗಂಗಾಧರ, ಕೆ.ಶ್ರೀನಿವಾಸ, ಪತ್ತಾರ ಕರಿಸಿದ್ದ, ಹಂಪಾರೆಡ್ಡಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















