ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನುಷ್ಠಾನಕ್ಕೆ ಬಾರದ ಆಚರಣೆಗಳು ವ್ಯರ್ಥ- ಪ.ಪೂ.ಶರಣಬಸವ ಶಾಸ್ತ್ರಿಗಳು.

ಮುಧೋಳ : ಸಮಾನತೆಯ ಪರಿಕಲ್ಪನೆ ಮೂಡಿಸಿದ ವಿಶ್ವಮಾನ್ಯ ಪುರುಷ. ಲಿಂಗವಂತ ಧರ್ಮ ಸಂಸ್ಥಾಪಕ. ಸಮಾಜವಾದಿ ಚಿಂತಕ. ಬಸವಣ್ಣನ ನಾಡಿನಲ್ಲಿ ಇಂದು ಜಾತೀಯತೆ ತಾಂಡವವಾಡುತ್ತಿದೆ. ರಾಗ.ದ್ವೇಷಗಳಿಂದ ತುಂಬಿದ ಇಂದಿನ ಸಮಾಜವು ಅಧಃಪತನದತ್ತ ಸಾಗುತ್ತಿದೆ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು. ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಜರುಗಿದ ಭಕ್ತಿ ಭಂಡಾರಿ ಬಸವಣ್ಣವರ ಜಯಂತೋತ್ಸವ ಸಮಾರಂಭದ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ. ಬಸವಣ್ಣವರ ತತ್ವಗಳು ಅನುಷ್ಠಾನಕ್ಕೆ ಬಾರದೆ ಕೇವಲ ಆಚರಣೆಗಳ ಆದರೆ ಅವುಗಳೆಲ್ಲವು ವ್ಯರ್ಥ ಎಂದ ಅವರು ಸರ್ವರನ್ನು ಸಮಾನತೆಯಿಂದ ಕಂಡು ಸರ್ವರನ್ನು ಪ್ರೀತಿಸುವ ಗುಣ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಸಮಾಜ ಸುಧಾರಣೆಯಾಗದು ಎಂದರು. ಬಸವ ತತ್ವದ ಅನುಯಾಯಿ ಮಲ್ಲು ಮುಚ್ಚಂಡಿ ಮಾತನಾಡಿ ನಾವುಗಳೆಲ್ಲ ಬದುಕಿರುವಷ್ಟು ದಿನ ಬಸವ ತತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ ಎಂದರು. ಹಿರಿಯ ಜನಪದ ಕಲಾವಿದೆ ಶ್ರೀಮತಿ ಶಿವಲಿಂಗವ್ವ ಪೋಲಿಸ್ ಹಾಗೂ ಶ್ರೀ ಮತಿ ನಿಂಗವ್ವ ಕನ್ನೊಳ್ಳಿ ಸಂಗಡಿಗರಿಂದ ತತ್ವಪದಗಳ ಕಾರ್ಯಕ್ರಮ ನಡೆಯಿತು. ಶರಣಶ್ರೀ ಶ್ರೀಶೈಲ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ.ಭೌರಮ್ಮ ಹಿರೇಮಠ ಉಪ‌ಸ್ಥಿತರಿದ್ಧರು.
ಸೇರಿದ ಬಸವ ಬಳಗದಿಂದ ಬಸವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜರುಗಿತು.‌ ನಾವಲಗಿಯ ಕೃಷ್ಣಾ ಭಜಂತ್ರಿ ಸಂಗಡಿಗರು ತಾಸೆವಾದನ ನುಡಿಸಿದರು. ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡ ಎಲ್ ಶ್ರೀನಿವಾಸ್ ಪ್ರಸಾದ್ ಸ್ವಾಗತಿಸಿದರು.‌ ಎಲ್ ಲಕ್ಷ್ಮೀಪ್ರಸಾದ್ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!