ಮಧುಗಿರಿ ತಾಲೂಕು, ಐ, ಡಿ, ಹಳ್ಳಿ ಹೋಬಳಿ, ತಿಪ್ಪಾಪುರ ಗ್ರಾಮದಲ್ಲಿ ಏಪ್ರಿಲ್, 20ರಂದು ಆಂಜನೇಯ ಸ್ವಾಮಿಗೆ ಆರತಿಯೊಂದಿಗೆ ಬೆಳಿಗ್ಗೆ 9:00ಗಂಟೆಗೆ ಶುರುವಾದ ಕಾರ್ಯಕ್ರಮ 21, 22 ಕ್ಕೂ ಮುಂದುವರೆಯುತ್ತದೆ.
ಸೋಮವಾರ ರಾತ್ರಿ ಹೂವಿನ ರಥೊತ್ಸವ ಅದ್ದೂರಿಯಾಗಿ ನೆರವೇರಿತು. ಕುಡುಕರ ಹಾವಳಿಯಿಂದ ಸ್ವಲ್ಪ ಸಮಯ ಮನರಂಜನ ಕಾರ್ಯಕ್ರಮದ ಕಡೆಗೆ ಕಿಡಿಗೇಡಿಗಳು ಕಲ್ಲು ತೂರಿದ ಪರಿಣಾಮ ಉದ್ವಿಗ್ನ ವಾತಾವರಣ ನಿರ್ಮಾಣ ಆಯಿತು. ಪೋಲೀಸ್ ಇಲಾಖೆಯ ಸಮಯ ಪ್ರಜ್ಞೆ ಯಿಂದ ಬಿಗುವಿನ ವಾತಾವರಣ ತಿಳಿಗೊಳಿಸಿದರು. ಮುಂದಿನ ಜಾತ್ರೆಯ ಎರಡು ದಿನಗಳು ತಿಪ್ಪಾಪುರ ಗ್ರಾಮದಲ್ಲಿ ಪೋಲೀಸ್ ಇಲಾಖೆಯ ವತಿಯಿಂದ ನೆಮ್ಮದಿಯ ವಾತಾವರಣ ಸೃಷ್ಠಿಸಬೇಕೆಂದು ಮತ್ತು ಯಾವುದೇ ಅವಗಡ ಸಂಭವಿಸದಂತೆ ಶೂಷಿತರ ಭೂಮಿ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಟಿ, ಹೆಚ್ ಮೈಲಾರಪ್ಪ ರವರು ಕೋರಿರುತ್ತಾರೆ.
ವರದಿ ರಂಗರಾಜು ಎಂ ಗರಣಿ




















