ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರೊ. ಕೆ. ತಾರನಾಥ ದಂಪತಿಗಳ ಪುಣ್ಯಸ್ಮರಣೆ

ಜೀವನದ ನಿಜ ಸಾರ ಕಾಯಕದಲ್ಲಿ ಅಡಗಿದೆ- ಗುರು ಮಹಾಂತ ಶ್ರೀಗಳು

ಬಾಗಲಕೋಟೆ/ ಹುನಗುಂದ- ಕಾಯಕದ ನಿಜವಾದ ಸಾರ ಅರಿತು ಕಾಯಕದಲ್ಲಿ ನಿರತರಾಗಬೇಕು, ಶರಣರ ಮಾರ್ಗದಲ್ಲಿ ನಡೆಯುವುದರಿಂದ ಮುಕ್ತಿ ಪಡೆಯಲು ಸಾಧ್ಯ. ೧೨ ನೇ ಶತಮಾನದ ಬಸವಾದಿ ಶರಣರು ನಡೆಸಿದ ಕಾಯಕ ಜೀವನದ ನಡೆ ನುಡಿಗಳು ಇಂದಿಗೂ ಪ್ರಸ್ತುತ. ಆದರ್ಶ ಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದ ಲಿಂ.ಪ್ರೊ. ಕೆ ತಾರಾನಾಥ ದಂಪತಿಗಳು ಸದಾ ಸ್ಮರಣೆಗೆ ಪಾತ್ರರು ಎಂದು ಇಳಕಲ್ಲ ಗುರು ಮಹಾಂತ ಶ್ರೀ ಹೇಳಿದರು.
ಪಟ್ಟಣದ ಪುರಸಭೆಮಂಗಲ ಮಂಟಪದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು , ಕದಳಿ ವೇದಿಕೆ, ವಚನ ಸಾಹಿತ್ಯ ಪರಿಷತ್ತು, ಜಿಲ್ಲಾ ಕರ್ನಾಟಕ ಲೇಖಕಿಯ ಸಂಘ, ಸಹಯೋಗದಲ್ಲಿ ಲಿಂ. ಪ್ರೊ. ಕೆ, ತಾರಾನಾಥ, ಲಿಂ, ಉಮಾದೇವಿ ತಾರಾನಾಥ ಶರಣ ದಂಪತಿಗಳ ೧೧ ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ೩೯ ನೇ ಮನೆ ಮನೆಗೆ ವಚನ ಸೌರಭ, ವಿಶ್ವ ಮಹಿಳಾ ದಿನಾಚರಣೆಯ ಮಹಿಳಾ ಕವಿಗೋಷ್ಠಿಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಜನ್ಮ ಕೊಟ್ಟ ತಂದೆ ತಾಯಿಗಳ ಪುಣ್ಯ ಸ್ಮರಣೆ ಮಾಡುವುದು ಸಹಜ. ಸೊಸೆಯಂದಿರು ತಮ್ಮ ಅತ್ತೆ ಮಾವಂದಿರ ಸ್ಮರಣೆ ಮಾಡಿಕೊಳ್ಳುವುದೆಂದರೆ, ಅತ್ತೆ ಮಾವಂದಿರು ಅತ್ತೆ ಮಾವಂದಿರಂತಿರದೇ ತಂದೆತಾಯಿಗಳಂತೆ ಅಂತಃ ಕರುಣೆಯನ್ನು ತೋರಿಸಿದ್ದರ ದ್ಯೋತಕ ಎಂದು ಹೇಳಿದರು.
ಲಿಂ. ಪ್ರೊ. ಕೆ ತಾರಾನಾಥರು ಪಂಚ ಭಾಷೆಯ ಪಾಂಡಿತ್ಯ ಹೊಂದಿದವರಾಗಿದ್ದರು. ಮತ್ತು ಶಿಷ್ಯರನ್ನು ಎತ್ತರಕ್ಕೆ ಬೆಳೆಸುವಲ್ಲಿ ಸದಾ ಮಾರ್ಗದರ್ಶನ ನೀಡುತ್ತಾ ಬಂದರು. ಪರೋಪಕಾರ ಗುಣ, ಸನ್ನಡತೆ, ಸಮಯ ಪಾಲನೆ , ಶಿಸ್ತು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದರು. ಸಾಹಿತ್ಯ ಕಲೆ ಸಂಗೀತಲ್ಲಿಯೂ ಅವರಿಗೆ ಅಪಾರ ಒಲವಿತ್ತು ಅವರ ಚುಟುಕಗಳನ್ನು ಮೆಚ್ಚಿ ದಿನಕರ ದೇಸಾಯಿ ಅವರು ಪ್ರಶಂಸಿದ್ದರು. ವಿದ್ವತ್ತಿನಿಂದಾಗಿ ಹೆಸರಾದರು. ಸಹಾಯ ಕೇಳಿ ಬಂದವರಿಗೆ ನಿರಂತರ ಸ್ಪಂದಿಸಿ ಎಲ್ಲರೊಂದಿಗೆ ಒಂದಾಗಿ ಇರುತ್ತಿದ್ದರು ಎಂದು ದತ್ತಿ ಉಪನ್ಯಾಸದಲ್ಲಿ ಡಾ.ಎಂಬಿ. ಒಂಟಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪಾಚಾರ್ಯ ಎಸ್‌ ಕೆ ಕುಲಕರ್ಣಿ ಅವರು ತಾರಾನಾಥ ಅವರ ಸ್ನೇಹ, ಒಡನಾಟ ಮತ್ತು ಅವರ ಕಾರ್ಯ ಕ್ಷಮತೆಯ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎ. ಎಸ್‌ ಪಾವಟೆಯವರು ಮಾತನಾಡುತ್ತಾ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅನುಸರಿಸಿ ನಡೆದಲ್ಲಿ ನಿತ್ಯದ ಜೀವನವು ಪಾವನವಾಗುತ್ತದೆ ಎಂದರು.
, ಕವಿಗೋಷ್ಠಿಯಲ್ಲಿ ಮಮತಾ ಮುದಗಲ್‌,ಜಯಶ್ರೀ ಆಲೂರ್‌, ಸವಿತಾ ಶಿವಪ್ಪಯ್ಯನಮಠ, ಮಲ್ಲಮ್ಮ ತೇಲಿ, ಈರಮ್ಮ ಹಂಪಿಹೊಳಿ , ಶೀಲಾ ಗೌಡರ, ಶಿವಲೀಲಾ ಸೊಂಬಣ್ಣವರ, ಗೀತಾ ತಾರಿವಾಳ, ನಿಂಗಮ್ಮ ಭಾವಿಕಟ್ಟಿ, ಚೆನ್ನವ್ವ ಕಬಾಡೆ ಅವರು ಕವನ ವಾಚನ ಮಾಡಿದರು. ಮಹಾಂತೇಶ ಮುದಗಲ್‌ ಇವರು ತಾರಾನಾಥರ ಬದುಕು ಬರಹ ಕುರಿತ ಕವನ ವಾಚಿಸಿದರು.
ಸುತಗುಂಡಾರದ ಹನುಮವ್ವ ಮುಲಂಗಿ ಹಾಗೂ ಸಂಗಡಿಗರು ಬೀಸುಕಲ್ಲಿನ ಪದಗಳನ್ನು ಹಾಡಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಲಲಿತಾ ಹೊಸಪ್ಯಾಟಿ, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು,ಪ್ರೊ. ಎಸ್‌ ಎನ್‌ ಹಾದಿಮನಿ ಸ್ವಾಗತಿಸಿದರು. ಗೀತಾ ತಾರಿವಾಳ ವಚನಗಾನ, ಸುಧೀದ್ರ ತಾಡಪತ್ರಿ ಪ್ರಾರ್ಥನೆ, ಪ್ರಭು ಮಾಲಗತ್ತಿ ಅವರು ನಿರೂಪಣೆ, ಅಂದಯ್ಯ ವಸ್ತ್ರದ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!