ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರದ್ಧಾ ಭಕ್ತಿಯಿಂದ ಗಾಯತ್ರಿದೇವಿ ಮೂರ್ತಿ ಪ್ರತಿಷ್ಠಾಪನೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ದೇವಾಂಗ ಸಮಾಜದ ಆನೆಮಠದಲ್ಲಿ ಶ್ರೀಗಾಯತ್ರಿದೇವಿಯ ಮೂರ್ತಿ ಪ್ರತಿಷ್ಠಾಪನೆ ಅತ್ಯಂತ ಶ್ರದ್ಧೆಯ ಜೊತೆಗೆ ಸಡಗರ ಸಂಭ್ರಮದಿಂದ ಮಂಗಳವಾರ ನೆರವೇರಿತು.
ಆನೆಮಠದಲ್ಲಿ ಮಹಾಗಣಪತಿ ಮತ್ತು ಗೋಪೂಜೆ, ವಾಸ್ತು, ಮಹಾರುದ್ರ, ನವಗ್ರಹ, ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನಗಳು ಜರುಗಿದವು. ಕಾರ್ಯಕ್ರಮದ ದಿವ್ಯಸಾನಿದ್ಯ ಆನೆಮಠ ದೇವಾಂಗ ಮಠ (ಆನೆಮಠ)ದ ಗುರು ಮಾತೆ ಶ್ರೀ ಸಾವಿತ್ರಮ್ಮ ತ್ರಿಪುರಾಂತ ಸ್ವಾಮಿ ಇವರು ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ನಂತರ ಆಶೀರ್ವಚನ ನೀಡಿದರು. ಪುರೋಹಿತ ಶಂಕ್ರಯ್ಯಸ್ವಾಮಿ ಹಾಗೂ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕಾರ್ಯಗಳು ಭಕ್ತಿ ಪೂರ್ವಕವಾಗಿ ನಡೆದವು. ನಂತರ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಗೌರವಾಧ್ಯಕ್ಷ ಶೀಲವಂತರ ವಿರೇಶ, ಉಪಾಧ್ಯಕ್ಷರಾಗಿ ಶೀಲವಂತರ ತುಳಿಸಿ ರಾಮಚಂದ್ರ, ಕಾರ್ಯದರ್ಶಿ ಮಾಗನೂರು ರಾಜೇಶವರ್ಮ, ಸಹಕಾರ್ಯದರ್ಶಿ ದೂಪದ ಪ್ರಶಾಂತಕುಮಾರ್, ಪುಟ್ಟಿ ರಾಘವೇಂದ್ರ, ಖಜಾಂಚಿ ಗದ್ಗಿ ವಿರುಪಾಕ್ಷಿ, ಸದಸ್ಯರಾದ ಡಿ.ದೂಪದ ಸುಭಾಷಚಂದ್ರ, ದೂಪದ ಮಂಜುನಾಥ, ವೀರೇಶ, ಸಜ್ಜೆ ರಮೇಶ, ಕಡೆಕಲ್ ವಿರುಪಣ್ಣ, ಕಾಕಂಡ್ಡಿ ಮಹೇಶ, ಸಜ್ಜೆ ವೆಂಕಟೇಶ, ಓದ ವಿರುಪಾಕ್ಷಿ, ಸಲಹಾ ಸಮಿತಿ ಸದಸ್ಯರಾದ ವನಕೆ ಶಂಕರಪ್ಪ, ಶೀಲವಂತರ ಸುಬ್ಬಣ್ಣ, ಪೋಡಿ ನಾರಾಯಣಪ್ಪ, ಓದ ಬಸವರಾಜ, ಹಂಪರಗುಂದಿ ನಾಗರಾಜ ಹಾಗೂ ಗದ್ದಿ ಚೌಡೇಶ್ವರಿದೇವಿ ಸೇವಾ ಸಮಿತಿ, ಶ್ರೀಬನಶಂಕರಿ ದೇವಾಂಗ ಮಹಿಳಾ ಸಮುದಾಯದವರು ಸೇರಿದಂತೆ ಸಮಾಜದ ಭಕ್ತರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!