
ಬಳ್ಳಾರಿ / ಕಂಪ್ಲಿ : ಶಾಸಕ ಜೆ.ಎನ್. ಗಣೇಶ್ ಅವರು ಅಸ್ತವ್ಯಸ್ತಗೊಂಡ ರೈತರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಿದ್ದಾರೆ. ರೈತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಅವರು ಪಟ್ಟಣದ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅಸ್ತವ್ಯಸ್ತಗೊಂಡ ರೈತರಿಗೆ ಉಪಹಾರವನ್ನು ತಿನ್ನಿಸಿ ಸಾಂತ್ವನ ತಿಳಿಸಿ ಮಾತನಾಡಿ, ನಾನು ರೈತನ ಮಗನಾಗಿದ್ದು ರೈತರ ಸಮಸ್ಯೆ ನನ್ನ ಸಮಸ್ಯೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿಯ ಅಧ್ಯಕ್ಷ ಎನ್. ಹಬೀಬಿ ರೆಹಮಾನ್ ಪ್ರಮುಖರಾದ ಬಿ. ಜಾಫರ್ ಸಾಧಿಕ್, ರೈತ ಮುಖಂಡರು, ವೈಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















