ಕಲಬುರ್ಗಿ: ಜಿಲ್ಲೆಯ ಕಾಳಗಿ ತಾಲೂಕಿನ ಗೋಣಗಿ ಗ್ರಾಮದ ಶ್ರೀ ಮತಿ ಶೀಲಾದೇವಿ ಗಂಡ ಶಿವರಾಜ್ ಪಾಟೀಲ್ ರವರ 2023/24ಸಾಲಿನಲ್ಲಿ ಸಂಪೂರ್ಣ ತೊಗರಿ ಬೇಳೆ ಹಾಳಾಗಿದೆ.
ಅವರು ಬೆಳೆ ವಿಮೆ ಮಾಡಿಸಿದರು. ಆದರೆ ಬೆಳೆ ವಿಮೆ ಬಂದಿಲ್ಲ.ಹಾಗಾಗಿ ಮಾನ್ಯ ಗ್ರಾಹಕರ ನ್ಯಾಯಾಲಯ ಕಲಬುರ್ಗಿಯಲ್ಲಿ ದಾವೆ ಹೂಡಿದ್ದರು.ಶೀಲಾದೇವಿ ರವರ ಪರವಾಗಿ ಶ್ರೀ ವಿಜಯ್ ಕುಮಾರ್ ರಾಠೋಡ್ ರವರ ವಾದ ಮಂಡಿಸಿದರು.
ಮಾನ್ಯ ನ್ಯಾಯಾಲಯವು ಆದೇಶ ಮಾಡಿ ದಿನಾಂಕ 28 /4/2026ರಂದು ನ್ಯಾಯಾಧೀಶರಾದ ಶ್ರೀಮತಿ ಮಾಲತಿ ಗುರಣ ರವರು ಚೆಕ್ ಮಂಜೂರು ಮಾಡಿದರು.
ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ ರೈತ ಸೇನೆ ತಾಲೂಕ ಅಧ್ಯಕ್ಷರು ಕಾಳಗಿ,ಶಿವರಾಜ್ ಪಾಟೀಲ್ ಗೋಣಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ರೈತ ಸಂಘ ಕಲ್ಬುರ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















