ವಿಜಯನಗರ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.) ಚನ್ನರಾಯಪಟ್ಟಣ, ವಿಜಯನಗರ ಜಿಲ್ಲಾ ಘಟಕದ ಮಾಧ್ಯಮ ವಕ್ತಾರರಾಗಿ ಶಿಕ್ಷಕರು ಮತ್ತು ಸಾಹಿತಿಗಳಾದ ಡಾ. ಪ್ರಸನ್ನ ದೇವರ ಮಠ ಅನಿಲ್ ಕುಮಾರ್, ಮಾಗಳ ಇವರನ್ನು ಆಯ್ಕೆಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ಬಡಿಗೇರ ತಿಳಿಸಿದ್ದಾರೆ.
ಅಲ್ಲದೆ ಅನಿಲ್ ಕುಮಾರ್ ಇವರನ್ನು ಹೂವಿನ ಹಡಗಲಿ ತಾಲೂಕು ಘಟಕದ ಸಂಚಾಲಕರನ್ನಾಗಿ ಸಹ ಆಯ್ಕೆ ಮಾಡಿದ್ದು ತಾಲೂಕು ಅಧ್ಯಕ್ಷರಾದ ಶ್ರೀ ಚನ್ನವೀರಸ್ವಾಮಿ ಅವರೊಡನೆ ಸೇರಿ
ಮಕ್ಕಳಲ್ಲಿನ ಸಾಹಿತ್ಯ ಅಭಿರುಚಿ, ಸೃಜನಶೀಲ ಬರವಣಿಗೆ ಪರಿಸರ ಸಂರಕ್ಷಣೆ, ದೇಶಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸೂಚಿಸಿದ್ದಾರೆ.
ಡಾ. ಅನಿಲಕುಮಾರ್ ಇವರು ಬಳ್ಳಾರಿ ಜಿಲ್ಲಾ ಘಟಕದ ಸಂಸ್ಥಾಪಕ ಮತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ನಮ್ಮ ಮಕ್ಕಳ ಸಾಹಿತ್ಯ ಪರಿಷತ್ತಿನ ಏಳಿಗೆಗೆ ಶ್ರಮಿಸಿದ್ದಾರೆ.
ಇದೀಗ ವಿಜಯನಗರ ಜಿಲ್ಲಾ ಘಟಕದಲ್ಲಿ ಮಾಧ್ಯಮ ವಕ್ತಾರರಾಗಿ ಕಾರ್ಯ ನಿರ್ವಹಿಸುವ ಮೂಲಕ
ಮಕ್ಕಳ ಸರ್ವತೋಮುಖ ಬೆಳವಣಿಗೆ ಸದಾ ಮಿಡಿಯುತ್ತಿರುವ ಮಕ್ಕಳ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗಾಗಿ ಪ್ರಯತ್ನಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಬಡಿಗೇರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಡಾ. ಧರ್ಮನ ಗೌಡ. ಹೊಸಪೇಟೆ ತಾಲೂಕು ಗೌರವಾಧ್ಯಕ್ಷರಾದ ಶ್ರೀ ಎಂ ವಿರುಪಾಕ್ಷಯ್ಯ ಸ್ವಾಮಿ. ಹೊಸಪೇಟೆ ತಾಲೂಕು ಅಧ್ಯಕ್ಷರಾದ ಶಿವರಾಜ್ ವಿ ಹಗರಿಬೊಮ್ಮನಹಳ್ಳಿ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರಾದ ಡಾ. ನಾಗರಾಜ್ ತಂಬ್ರಹಳ್ಳಿ.ಮತ್ತು ಸಂಘಟನಾ ಕಾರ್ಯದರ್ಶಿಗಳು ಪ್ರಧಾನ ಕಾರ್ಯದರ್ಶಿಗಳು ಶ್ರೀ ರವಿ ಕುಂಬಾರ್ ಡಾ. ದಯಾನಂದ ಕಿನ್ನಾಳ . ಶ್ರೀ ಬಸವರಾಜ್ ಎಮ್ಮಿಗನೂರು ಪ್ರಾಂಶುಪಾಲರು, ಉಮಾಮಹೇಶ್ವರ ಸೋಧ ವಿರೂಪಾಕ್ಷಗೌಡ . ಬಸವರಾಜ್ ಶಿವನಗೌಡ ಸಾತನೂರು ಶ್ರೀ ಜಗದೀಶ್ ಬೆನ್ನೂರ್.ಡಾ. ಸುಲೋಚನ. ಗೀತಾ ಸುರೇಶ್.ಡಾ. ಕೆ.ವೀಣಾ. ಡಾ.ಸುರೇಂದ್ರ ಮಾನೇಮಿ. ಡಾ. ಷಣ್ಮುಖಪ್ಪ ಸ್ವಾಮಿ ಕಡ್ಡಿಪುಡಿ ವಕೀಲರು ಶ್ರೀ ಗುಜ್ಜಲಗಣೇಶ್. ತಾರಿಹಳ್ಳಿ ಹನುಮಂತಪ್ಪ. ಶ್ರೀರಾಮಪ್ಪ ವಕೀಲರು. ಚಂದ್ರಶೇಖರ್ ರೋಣದ ಮಠ ಕೆ ಎನ್ ಬಸವರಾಜ್. ಹಾಗೂ ಹೂವಿನ ಹಡಗಲಿ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಶ್ರೀ ಚನ್ನವೀರಸ್ವಾಮಿ ಎಚ್ ಎಂ ಇನ್ನೂ ಮುಂತಾದವರು ಶುಭ ಹಾರೈಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















