ಬೆಂಗಳೂರು: ತಮ್ಮ ಎಂದಿನ ಕಾರ್ಯಕ್ರಮಗಳಂತೆ ಬೆಂಗಳೂರಿನ ಆನಂದರಾವ್ ಸರ್ಕಲ್ ಬಳಿ ಇರುವ ಕೆಪಿಟಿಸಿಎಲ್ ಭವನದಲ್ಲಿರುವ ಲೆಕ್ಕಾಧಿಕಾರಿಗಳ ಸಭಾಂಗಣದಲ್ಲಿ ಪ್ರತೀ ಎರಡನೇ ಶನಿವಾರ ಆಯೋಜಿಸಲಾಗುತ್ತಿರುವ ವಿವಿಧ ಕಾರ್ಯಕ್ರಮದಂತೆ ದಿನಾಂಕ 09.05.2026 ಶನಿವಾರ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ,ಸಂಸ್ಕೃತ ವಿದ್ವಾಂಸರಿಂದ ಯಕ್ಷಪ್ರಶ್ನೆ ಪ್ರವಚನ ಜೊತೆ ಸಾಹಿತಿ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ಅವರಿಂದ ಚಿತ್ರ ನಟ ಶ್ರೀ ನೀರ್ನಳ್ಳಿ ರಾಮಕೃಷ್ಣ ಹಾಗೂ ಸಾಹಿತಿ, ಅಂಕಣಕಾರ ಶ್ರೀ ವಾಸುದೇವ ಶಾನಭಾಗ ಅವರ ಉಪಸ್ಥಿತಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದ್ದು ಶ್ರೀಮತಿ ಸೌಮ್ಯ ಪ್ರದೀಪ ಹೆಗಡೆ ಹಾಗೂ ಕೆಪಿಟಿಸಿಎಲ್ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ದಂಪತಿಗಳಾದ ಶ್ರೀ ಮತ್ತು ಶ್ರೀಮತಿ ದಾಮೋದರ ಭಂಡಾರಿ- ಸಂಧ್ಯಾ ಭಂಡಾರಿ ಅವರ ಮಗಳಾದ ಮನಸ್ವಿ ಭಂಡಾರಿ ಅವರಿಂದ ಭರತನಾಟ್ಯ ಕಾರ್ಯಕ್ರಮವು ಜರುಗುವುದು ಎಂದು ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















