ಧಾರವಾಡ : ಕಲಘಟಗಿ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ದಿ. 02/05/2026 ರಂದು ಹುಬ್ಬಳ್ಳಿಯ ಗುರುಸಿದ್ದಪ್ಪ ಕೊತಂಬರಿ ಕಾನೂನು ಮಹಾವಿದ್ಯಾಲಯ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ಕಾನೂನು ಅರಿವು ಹಾಗೂ ಹಕ್ಕುಗಳ ರಕ್ಷಣೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಕೀಲರಾದ ಗುರುನಾಥ ಮೂಗಣ್ಣವರ ಮತ್ತು ತಾಲೂಕು ಕ ರ ವೆ ಅಧ್ಯಕ್ಷರಾದ ಶಂಕರಗೌಡ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡರಾದ ಬಸಯ್ಯ ಹಿರೇಮಠ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ವಿಶೇಷ ಉಪನ್ಯಾಸವನ್ನು ಕಾನೂನು ಸ್ವಯಂ ಸೇವಕರಾದ ನಾಗರಾಜ ಸಿ ಹಂಡಿ ಮತ್ತು ಅನ್ನದಾನೇಶ ವಿ ವಸ್ತ್ರದ ಅವರು ವಿವರವಾಗಿ ಕಾನೂನು ಜಾಗೃತಿಯನ್ನು ಮೂಡಿಸಿದರು. ಅಲ್ಲದೆ ಗ್ರಾಮದ ಸಾಮಾನ್ಯ ಸರ್ವೇ ಮಾಡಿದಾಗ ಕಂಡು ಬಂದ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಾದ ರಾಜಶೇಖರ ಜಂತ್ಲಿ , ಅಭಿಷೇಕ ಗುಂಜಾಳ ಮತ್ತು ಪೂಜಾ ಗೋಕಾಕ್ ಅವರು ಮಾತನಾಡಿ ಅವುಗಳ ಪರಿಹಾರೋಪಾಯಗಳ ಕುರಿತು ತಿಳಿಹೇಳಿಕೊಟ್ಟರು. ಅಲ್ಲದೆ ಈ ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು ಸರ್ವ ಸದಸ್ಯರು ಅಂಗನವಾಡಿ ಸಿಬ್ಬಂದಿ ಮತ್ತು ಯುವಕ ಮಂಡಳಿಯವರು ಹಾಗೂ ಇತರರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಕೊನೆಗೆ ಅತಿಥಿಗಳಿಗೆ ಸನ್ಮಾನವನ್ನು ಮಾಡುವುದರ ಮೂಲಕ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
- ಕರುನಾಡ ಕಂದ ಪತ್ರಿಕೆ




















