ಕಲಾವಿದರು ಮುಖ್ಯವಾಹಿನಿಗೆ ಬರಬೇಕು-ಶರಣಬಸವ ಶಾಸ್ತ್ರಿಗಳು.
ಬಾಗಲಕೋಟೆ/ಮುಧೋಳ : ತಮಿಳಗ ವೆಟ್ರಿ ಕಳಗಂ [T.V.K.] ಪಕ್ಷದ ನಾಯಕರಾಗಿ ಆಯ್ಕೆಗೊಂಡಿರುವ ಕಲಾವಿದ ದಳಪತಿ ವಿಜಯ್ ಅವರಿಗೆ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯಗಳನ್ನು ಕೋರಿದರು. ಪತ್ರಿಕೆಯೊಂದಿಗೆ ಮಾತನಾಡಿದ ರಾಜ್ಯ ಸರ್ವ ಕಲಾವಿದರ ಒಕೂಟದ ಅಧ್ಯಕ್ಷ ಶರಣಬಸವಶಾಸ್ತ್ರಿಗಳು ಚೊಚ್ಚಲ ಯತ್ನದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಜನನಾಯಕ ದಳಪತಿ ವಿಜಯ ಅವರು ಒಂದು ಶಕ್ತಿಯಾಗಿ ಹೊರಹೊಮಿದ್ದಾರೆ.
ತಮಿಳುನಾಡಿನ ಮತದಾರರ ಮನಗೆದ್ದ “ದಳಪತಿ ವಿಜಯ” ರಾಜ್ಯದ ಸಾರಥಿಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಮುಖ್ಯವಾಹಿನಿಗೆ ಬಂದ “ವಿಜಯ” ಮತದಾರರ ಆಶೋತ್ತರಗಳನ್ನು ಈಡೇರಿಸುವಂತಾಗಲಿ ಎಂದು ಹೇಳಿದ ಅವರು ಕಲಾವಿದರು ಮುಖ್ಯ ವಾಹಿನಿಗೆ ಬರಬೇಕೆಂದು ಆಶಯ ವ್ಯಕ್ತಪಡಿಸಿದರು.
ಮುಖಂಡರಾದ ಶಂಕರೆಪ್ಪ ತಂಬಾಕದ.ಈಶ್ವರ ಹೊರಟ್ಟಿ. ಚಿನ್ನಪ್ಪ ಗೌಡ್ರ ಜಲಗೇರಿ.ಪವಿತ್ರ ಜಕ್ಕಪ್ಪನವರ ಸೇರಿದಂತೆ ಮುಂತಾದವರಿದ್ದರು.
- ಕರುನಾಡ ಕಂದ ಪತ್ರಿಕೆ




















