ಬಳ್ಳಾರಿ / ಕಂಪ್ಲಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವದ ಹಿನ್ನಲೆ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ತೆರಳಿದ ಪರಿಣಾಮ ಪ್ರಯಾಸದ ಬಿಸಿ ಪ್ರಯಾಣಿಕರಿಗೆ ಶನಿವಾರ ತಟ್ಟಿತ್ತು.
ಹೌದು. ಕಂಪ್ಲಿ ಸೇರಿದಂತೆ ಜಿಲ್ಲೆಯಿಂದ ಬಸ್‌ಗಳು ಜನರನ್ನು ತುಂಬಿಕೊಂಡು ಚಿತ್ರದುರ್ಗಾಕ್ಕೆ ತೆರಳಿದ್ದವು. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಬಸ್‌ಗಳು ಇಲ್ಲದೇ ಖಾಸಗಿ ವಾಹನಗಳ ಮೊರೆ ಹೋಗುವ ಜೊತೆಗೆ ಕೆಲವೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಜೋತು ಬಿದ್ದು ಪ್ರಯಾಣಿಸುತ್ತಿರುವುದು ಕಂಡು ಬಂತು.
ಬಸ್‌ಗಳು ಇಲ್ಲದ ಹಿನ್ನಲೆ ಕಂಪ್ಲಿ ಹೊಸ್ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತಾದರೂ, ಬಸ್‌ಗಳಿಲ್ಲದೇ ಬಿಕೋ ಎನ್ನುವಂತಿತ್ತು. ಬಸ್ ಇಲ್ಲದ ಪರಿಣಾಮ ಆಟೋ, ಟಿಂಪೋ ಸೇರಿದಂತೆ ಖಾಸಗಿ ವಾಹನಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇತ್ತು. ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಗಂಗಾವತಿಗೆ ತೆರಳುತ್ತಿರುವ ಬಸ್ ಏರಲು ಪ್ರಯಾಣಿಕರು ಮುಗಿಬಿದ್ದಿದ್ದರು. ಒಟ್ಟಿನಲ್ಲಿ ಯಡಿಯೂರಪ್ಪ ಅಭಿಮಾನೋತ್ಸವದ ಹಿನ್ನಲೆ ಪ್ರಮಾಣಿಕರು ಬಸ್‌ಗಳಿಗಾಗಿ ತಾಸುಗಟ್ಟಲೇ ಕಾದು ಕಾದು ಸುಸ್ತಾಗಿದ್ದರು. ಕೆಲವರು ಖಾಸಗಿ ವಾಹನಗಳತ್ತಾ ಮೊರೆ ಹೋದರೆ, ಇನ್ನೂ ಕೆಲವರು ತಾಸಾನುಗಟ್ಟಲೇ ಕುಳಿತು, ಬಸ್‌ಗಳಿಗೆ ಸಂಚರಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















