ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ 604ನೇ ಜಯಂತಿ ಇಂದಿನ ಮಹಿಳೆಯರು ಮಾತುಗಳು ಸ್ಪೂರ್ತಿಯಾಗಿಸಿಕೊಳ್ಳಿ : ಬಿಸಿಎಂ ಅಧಿಕಾರಿ ಮಲ್ಲಿಕಾರ್ಜುನ

ಸಿರುಗುಪ್ಪ- ಕ್ಷಮೆ ದುಃಖ ಮತ್ತು ಶಕ್ತಿಯ ಬಗ್ಗೆ ಹೇಮರೆಡ್ಡಿ ಮಲ್ಲಮ್ಮನ ಮಾತುಗಳನ್ನು ನೋಡುವುದಾದರೆ ನೋಯಿಸುವವರು ಶಿವನ ಮಕ್ಕಳು ಅವರನ್ನು ಆಶೀರ್ವದಿಸಿ ಮಲ್ಲಮ್ಮನ ಮಾತುಗಳನ್ನು ಇಂದಿನ ಮಹಿಳೆಯರು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಹಿಂದುಳಿದ ವರ್ಗಗಳ ತಾಲೂಕ ಕಲ್ಯಾಣ ಅಧಿಕಾರಿ ಕೆ ಮಲ್ಲಿಕಾರ್ಜುನ ಅವರು ಹೇಳಿದರು. ಸಿರುಗುಪ್ಪ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಗರಸಭೆ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ 604ನೇ ಜಯಂತಿ ಆಚರಣೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಗಣ್ಯ ಮಾನ್ಯರಿಂದ ಮಾಲಾರ್ಪಣೆ ಗೌರವದೊಂದಿಗೆ ಪುಷ್ಪ ಅರ್ಪಿಸಿ ಸ್ಮರಿಸಿ ನಮನ ಸಲ್ಲಿಸಿ ಅವರು ಮಾತನಾಡುತ್ತಾ ಶ್ರೀಶೈಲ ಸಮೀಪದ ರಾಮಪುರ ಗ್ರಾಮದ ಆಗರ್ಭ ಶ್ರೀಮಂತ ಧರ್ಮ ನಿಷ್ಠ ದಂಪತಿಗಳಾದ ನಾಗಿ ರೆಡ್ಡಿ ಗೌರಮ್ಮ ಅವರಿಗೆ ಸಂತಾನ ಭಾಗ್ಯವಿರಲಿಲ್ಲ ಮಕ್ಕಳಿಲ್ಲದ ಇವರು ಮಹಾಶಿವರಾತ್ರಿ ದಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿದ ಫಲವಾಗಿ ಸಾಕ್ಷಾತ್ ಶಿವನು ನಾಗರೆಡ್ಡಿ ಕನಸಿನಲ್ಲಿ ಕಾಣಿಸಿಕೊಂಡು ಸಂತಾನ ಪ್ರಾಪ್ತಿವಾಗಿ ವರ ನೀಡುತ್ತಾನೆ ಆ ಶಿವನ ವರದಿಂದಲೇ ಜನಿಸಿದ ಈ ಹೆಣ್ಣು ಮಗುವಿಗೆ ಮಲ್ಲಮ್ಮ ಎಂದು ನಾಮಕರಣ ಮಾಡುತ್ತಾರೆ ಎಂದು ಅವರು ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಚರಿತ್ರೆ ವಿವರಿಸಿ ಉಪನ್ಯಾಸ ನೀಡುತ್ತಿದ್ದರು ವೀರಶೈವ ರೆಡ್ಡಿ ಲಿಂಗಾಯತ ತಾಲೂಕ ಅಧ್ಯಕ್ಷರು ಕೆ ಮರೆ ಗೌಡ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರು ಎಂ ಗೋಪಾಲ ರೆಡ್ಡಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಎಂ ಮಾರುತಿ ವರ ಪ್ರಸಾದ ರೆಡ್ಡಿ ಭೋವಿ ಸಂಘದ ಅಧ್ಯಕ್ಷರು ಗಾಳೆಪ್ಪ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಲೋಕ ಶಿಕ್ಷಣ ಸಾಕ್ಷರತಾ ಶಾಂತಿ ಸಭೆ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ತಹಶೀಲ್ದಾರ್ ಕಚೇರಿಯ ಮಹಾಂತೇಶ್ ತಾಲೂಕು ಪಂಚಾಯತ್ ಪೊಲೀಸ್ ಇಲಾಖೆ ನಗರಸಭೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮಾಜದ ಮುಖಂಡರು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!