ಸರೋವರದಿಂದ ವಿಹಾರ ಮುಗಿಸಿ ಹೊರಬಂದಿದ್ದೆ
ದಣಿವಾಗಿ ಬಸವಳಿದು ರಸ್ತೆ ದಾಟಲು ಕಾದಿದ್ದೆ
ಅಕ್ಕಾ ಎಂಬ ಕರೆ ಕಿವಿಗಪ್ಪಳಿಸಿ ತಿರುಗಿದ್ದೆ
ನಗುಮುಖದಿ ಒಬ್ಬಾತ ಎಳನೀರಿಗಾಗಿ ಕರೆದಿದ್ದ
ಅತ್ತ ಸಾಗಿ ನೀರು ಕುಡಿವಾಗ ಕಂಡೆ ಎಳನೀರ ತಲೆ ಚಿಪ್ಪು
ಹೆಕ್ಕಿ ತಂದು ಜೋಡಿಸಲು ಅಲ್ಲೆ ಮೂಡಿತೊಂದು ಪುಷ್ಪ
ಕಿತ್ತಳೆ ಸಿಪ್ಪೆ ಕತ್ತರಿಸಿ ಸುತ್ತಲೂ ಜೋಡಿಸಿ
ನಡು ನಡುವೆ ಬೀಜಗಳಿಂದ ಅಲಂಕರಿಸಿಹ
ಸುಲಲಿತ ಚಿತ್ತಾರಕೊಂದು
ಆತ್ಮೀಯ ಕಾವ್ಯೋದಯದ ಶುಭ ಮುಂಜಾವು
- ಲಲಿತಾ ಕೆ ಆಚಾರ್, ಬೆಂಗಳೂರು




















