ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಾ || ಬಿ. ಆರ್. ಅಂಬೇಡ್ಕರ್ ಜಯಂತ್ಯುತ್ಸವ : ಬಹಿರಂಗ ಸಭೆ : ಡಾ || ಶಿಲಾಸೂ ಗೋಗಿ ರಚಿತ” ಅರಳಿ ಬಾ ಮರಳಿ ” ಲೋಕಾರ್ಪಣೆ.

ಕಲಬುರಗಿ : ದಿನಾಂಕ : 10.05.2026 ರಂದು ಕಲಬುರಗಿ ನಗರದ ಪ್ರಬುದ್ದ ನಗರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರ್ ಅವರ 135 ನೇ ಜಯಂತ್ಯುತ್ಸವದ ಬಹಿರಂಗ ಸಭೆ ಆಚರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಭೀಮ ಕ್ರಾಂತಿ ಗಾಯಕರಾದ ಶ್ರೀ ಸಿದ್ದಾರ್ಥ ಚಿಮ್ಮಾ ಇದ್ಲಾಯಿ ಅವರ ತಂಡದಿಂದ ಭೀಮ ಗೀತೆ ಹಾಡುವುದರ ಮೂಲಕ ಕಾರ್ಯಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾ|| ವಿಜಯಕುಮಾರ ಸಾಲಿಮನಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,
ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಮೂಲಕ ಸಕಲ ಸೌಲಭ್ಯ ಮತ್ತು ಸಮಾನತೆಯನ್ನು ಒದಗಿಸಿಕೊಟ್ಟಂತಹ ಮಹಾನ್ ಚೇತನ ಡಾ|| ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಜಯಂತಿ ಉತ್ಸವ ಬರೀ ಆಚರಣೆಯಾಗದೇ ಅನುಕರಣೆಯಾಗಬೇಕು ಮತ್ತು ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವತ್ತಿನ ಪೀಳಿಗೆ ಥ್ರೀಡಿಯಲ್ಲಿ ಮಗ್ನರಾಗಿದ್ದಾರೆ. ಡೀಜೆ-ಡ್ರಿಂಕ್- ಡ್ಯಾನ್ಸ್ ಈ ಮೂರು ಡಿಗಳಿಂದ ಯುವ ಪೀಳಿಗೆಗಳು ಹೊರ ಬರುವುದರ ಮುಖಾಂತರ ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಮೋಜು ಮಸ್ತಿ ಇಲ್ಲದೆ ಹತ್ತು ವರ್ಷಗಳಿಂದ ಪ್ರಬುದ್ದನಗರದಲ್ಲಿ ಡಾ || ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಬುದ್ದನಗರದಲ್ಲಿ ಜರುಗುವ ಜಯಂತಿ ಇಡೀ ಕಲಬುರಗಿ ನಗರದ ಜಯಂತಿಗಳಿಗೆ ಒಂದು ಉತ್ತಮ ಮಾದರಿಯಾಗಿದೆ ಎಂದು ಜಯಂತಿ ಉತ್ಸವ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ಅವರ ಕುರಿತು ಯುವ ಸಾಹಿತಿ ಡಾ|| ಶಿವಕುಮಾರ ಗೋಗಿ ರಚಿಸಿರುವ “ಅರಳಿ ಬಾ ಮರಳಿ” ಕೃತಿಯನ್ನು ಶ್ರೀ ಬಸವರಾಜ ಮತ್ತಿಮಡು ಶಾಸಕರು, ಗ್ರಾಮೀಣ ಮತಕ್ಷೇತ್ರ ಕಲಬುರಗಿ, ಪೂಜ್ಯ ಭಂತೆ ಸಂಘಾನಂದ, ಡಾ|| ಡಿ.ಜಿ.ಸಾಗರ್, ಶ್ರೀ ಭೀಮಪುತ್ರ ಸಂತೋಷ ಚಿಕ್ಕೋಡಿ, ಅಂಬೇಡ್ಕರ್ ವಾದಿಗಳು ಶ್ರೀ ಸುರೇಶ ವರ್ಮಾ, ಮಾನ್ಯ ತಹಶೀಲ್ದಾರರು ರಾಯಚೂರು ಶ್ರೀ ಮಹಾಂತಪ್ಪ ಸಂಗಾವಿ, ಶ್ರೀ ಭೀಮರಾವ ಟಿಟಿ, ಶ್ರೀ ಶಂಭುಲಿಂಗ ಗುಂಡಗುರ್ತಿ, ಧಮ್ಮ ಜಾಗೃತಿ ಸೇವಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಶಿವಕೇರಿ ಹಾಗೂ ಇತರೆ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಪುಸ್ತಕ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಡಾ|| ರವೀಂದ್ರಕುಮಾರ ಭಂಡಾರಿ ” ಡಾ|| ಬಿ. ಆರ್. ಅಂಬೇಡ್ಕರ್ ಅವರನ್ನು ನಾವೆಲ್ಲಾ ಮೆರವಣಿಗೆಯಲ್ಲಿ ನೋಡುವ ಬದಲು ಬರವಣಿಗೆಯಲ್ಲಿ ನೋಡಬೇಕಾಗಿದೆ. ಅಂಬೇಡ್ಕರ್ ಅವರನ್ನು ಪುತ್ತಳಿಯಲ್ಲಿ ಕಾಣುವ ಬದಲು ಪುಸ್ತಕದಲ್ಲಿ ಕಾಣಬೇಕಾಗಿದೆ. ಈ ನಿಟ್ಟಿನಲ್ಲಿ ಡಾ || ಶಿವಕುಮಾರ.ಎಲ್. ಸೂರ್ಯವಂಶ, ಗೋಗಿ ಯುವ ಬರಹಗಾರರಾಗಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ಕುರಿತು ರಚಿಸಿರುವ “ಅರಳಿ ಬಾ ಮರಳಿ” ಕೃತಿ ರಚಿಸುವುದರ ಮೂಲಕ ಅಂಬೇಡ್ಕರ್ ಅವರನ್ನು ತಮ್ಮ ಬರವಣಿಗೆಯಲ್ಲಿ ಕಂಡು, ಪುಸ್ತಕದಲ್ಲಿ ಆರಾಧಿಸಿದ್ದಾರೆ. ಈಗಿನ ಯುವ ಪೀಳಿಗೆಗೆ ಇವರು ಉತ್ತಮ ಮಾದರಿಯಾಗಿದ್ದಾರೆ ಇವರ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇವರ ಸಾಹಿತ್ಯದ ಪ್ರತೀಕವಾಗಿ ಇಂದು ಕೃತಿ ಲೋಕಾರ್ಪಣೆಗೊಂಡಿದೆ ” ಎಂದು ಹೇಳಿದರು. ಇವರ ಸಾಹಿತ್ಯ ಸೇವೆಯನ್ನು ಗುರ್ತಿಸಿ ಮುಖ್ಯ ವೇದಿಕೆಯಲ್ಲಿ ಶ್ರೀ, ಬಸವರಾಜ ಮತ್ತಿಮಡು ಮಾನ್ಯ ಶಾಸಕರು ಇವರಿಂದ ಡಾ|| ಶಿವಕುಮಾರ. ಲಾ. ಸೂರ್ಯವಂಶ, ಗೋಗಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಶ್ರೀ ಭೀಮಪುತ್ರ ಸಂತೋಷ, ಚಿಕ್ಕೋಡಿ ಸುದೀರ್ಘವಾಗಿ ಮಾತನಾಡುತ್ತಾ ಡಾ || ಬಿ. ಆರ್. ಅಂಬೇಡ್ಕರ್ ಅವರನ್ನು ಜಾತಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಬೇರೆ ದೇಶಗಳಲ್ಲಿ ಅಂಬೇಡ್ಕರ್ ಅವರನ್ನು ಮಹಾನ್ ಜ್ಞಾನಿಯಂತ ಗುರ್ತಿಸಿದರೆ, ಭಾರತದಲ್ಲಿ ದಲಿತರ ದಮನಿ ಎಂದು ಬಣ್ಣಿಸಲಾಗಿದೆ. ಅಂಬೇಡ್ಕರ್ ಅವರು ಬರೀ ದಲಿತರಿಗಾಗಿ ಜೀವನ ಮುಡುಪಾಗಿಡದೇ ಇಡೀ ಭಾರತೀಯರಿಗಾಗಿ ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ಅವರನ್ನು ನೋಡುವ ಮತ್ತು ಅನುಕರಣೆ ಮಾಡುವ ದೃಷ್ಟಿ ಬದಲಾಗಬೇಕಿದೆ. ಅಂದು ಅಂಬೇಡ್ಕರ್ ಅವರು ಕಾಳೇರಾಂ ದೇಗುಲ ಪ್ರವೇಶ ಮತ್ತು ಚೌಡಾರ್ ಕೆರೆ ಮುಟ್ಟುವ ಕ್ರಾಂತಿಗಳನ್ನು ಮಾಡದಿದ್ದರೆ ಇಂದಿನ ಜನರಿಗೆ ಕುಡಿಯಲು ನೀರು ಸಹ ಸಿಗುತ್ತಿರಲಿಲ್ಲವೇನೋ..! ಇದು ಎಲ್ಲರೂ ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಮಹಿಳೆಯರಿಗೆ ಹಿಂದ ಕೋಡ್ ಬಿಲ್ ಜಾರಿಗೆ ತರದೇ ಹೋದರೆ ಮಹಿಳೆಯರ ಸ್ಥಿತಿಗತಿ ಇಂದು ಏನಾಗುತ್ತಿತ್ತು. ಇದನ್ನು ಈಗಲಾದರೂ ತಾಯಂದಿರು ಅರ್ಥಮಾಡಿಕೊಂಡು ಮೌಢ್ಯ ಆಚರಣೆಗಳನ್ನು ಬದಿಗೊತ್ತಿ ಬುದ್ದ, ಬಸವ, ಅಂಬೇಡ್ಕರ, ರಮಾಬಾಯಿಯವರಂಥ ಮಹಾನ್ ಮೇಧಾವಿಗಳನ್ನು ಅನುಸರಿಸಬೇಕು. ಯುವ ಪೀಳಿಗೆ ಥ್ರೀಡಿಯಿಂದ ಹೊರಬರಬೇಕು. ಗಣೇಶ ಲಕ್ಷ್ಮಿಯನ್ನು ಪೂಜಿಸಿದರೆ ಧನ ದುಪ್ಪಟ್ಟುವಾಗುತ್ತೆ ಎಂಬ ಮೂಢನಂಬಿಕೆ ಬಿಟ್ಟು ಪ್ರಬುದ್ದರಾಗಿ ಬದುಕಬೇಕೆಂದು ಸಂದೇಶ ಸಾರಿದರು. ಅದೇ ರೀತಿ ಶ್ರೀ ಸುರೇಶ ವರ್ಮಾ ತಹಶಿಲ್ದಾರ ರಾಯಚೂರು ಮಾತನಾಡುತ್ತಾ, ಹಿಂದೆ ದೈಹಿಕವಾಗಿ ಜಾತಿಪದ್ದತಿ ರೂಢಿಯಲ್ಲಿತ್ತು. ಆದರೆ, ಪ್ರಸ್ತುತ ಮಾನಸಿಕವಾಗಿ ಜಾತಿ ಪದ್ದತಿ ಸದ್ದಿಲ್ಲದೆ ತನ್ನ ಕ್ರೌರ್ಯ ಮೆರೆಯುತ್ತಿದೆ. ಜನರಲ್ಲಿ ಸಮಾನತೆ, ಸಹೋದರೆ ಮತ್ತು ಭಾತೃತ್ವ ಭಾವನೆ ಮೂಡಿಸಬೇಕಿದೆ. ಜನ ಜಾಗೃತರಾಗಬೇಕಿದೆ ಎಂದರು.
ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಕು. ಉಮಾ ಧರ್ಗಿ ಕಲಾ ತಂಡದಿಂದ ಜರುಗಿದ ಪುಟಾಣಿ ಮಕ್ಕಳಿಂದ ಭರತ ನಾಟ್ಯ, ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು. ಶ್ರೀ ಬಸವರಾಜ ಮತ್ತಿಮೂಡ, ಶಾಸಕರು ಕಲಬುರಗಿ ಗ್ರಾಮೀಣ ಮತಕ್ಷೇತ್ರ ಮಾತನಾಡಿ, ಪ್ರಬುದ್ದನಗರದ ಸಮುದಾಯ ಭವನದ ನೂತನ ಕಟ್ಟಡಕ್ಕಾಗಿ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿದರು. ಮತ್ತು ಶ್ರೀ ಜಗದೇವ ಗುತ್ತೇದಾರ, ವಿಧಾನ ಪರಿಷತ್ ಸದಸ್ಯರು, ಕಲಬುರಗಿ ಇವರು ಮಾತನಾಡಿ ಪ್ರಬುದ್ದನಗರ,‌ ಕೃಷ್ಣನಗರ, ಸರಸ್ವತಿಪುರ ಹಾಗೂ ಮಹಾತ್ಮ ಜ್ಯೋತಿಬಾ ಫುಲೆ ನಗರಗಳ ನೂತನ ಸಾಂಚಿ ದ್ವಾರ ಬಾಗಿಲು ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.
ಇದೇ ವೇದಿಕೆಯಲ್ಲಿ ಪ್ರಸ್ತಾವನೆ ಸಹ ಸಲ್ಲಿಸಲಾಯಿತು‌

ಕಾರ್ಯಕ್ರಮದಲ್ಲಿ ಧಮ್ಮ ಜಾಗೃತಿ ಸೇವಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಶಿವಕೇರಿ, ಕಾರ್ಯದರ್ಶಿಯವರಾದ ಶ್ರೀ ಸೂರ್ಯಕಾಂತ ಶೃಂಗೇರಿ, ಡಾ|| ರವೀಂದ್ರಕುಮಾರ ಭಂಡಾರಿ, ಡಾ|| ಅಶೋಕ ಬಬಲಾದ, ಡಾ|| ಎಸ್.ಎನ್.ಗಾಯಕವಾಡ, ಪ್ರೋ. ಬಾಬಣ್ಣ ಹೂವಿನಬಾವಿ, ಪ್ರೊ. ಆನಂದ ಸೌಂಧಾಣಿ, ಶ್ರೀ ಶಾಂತಪ್ಪ ಮಳ್ಳಿ, ಡಾ|| ರಾಜಕುಮಾರ ಕುರಣೆ, ಶ್ರೀ ಅಣ್ಣಪ್ಪ ಶಿಂಧೆ, ಶ್ರೀ, ಶಿವಪುತ್ರ ಕಲಕೋರಾ, ಶ್ರೀ ಸುಭಾಶ ದೇವರ, ಶ್ರೀ ನಾಗೇಂದ್ರಪ್ಪ ಪ್ರಸನ್ನ, ಶ್ರೀ ಭಗವಾನ ಕುರ್ಣಿ, ಶ್ರೀ ಪರಮೇಶ್ವರ ಪೆಂಚನಕರ್, ಶ್ರೀ ಅಂಬಾರಾಯ ವಾಡೇಕರ್, ಶ್ರೀ ಸೋಮಶೇಖರ್ ರಾಮಬಾಣ, ಶ್ರೀ ವಿಠ್ಠಲ್ ಹಾದಿಮನಿ, ಶ್ರೀ ದಿಲೀಪ್ ಕಾಂಬಳೆ, ಶ್ರೀ ವಿಕಾಸ್ ಕಾಂಬಳೆ, ಶ್ರೀ ಯಾದವ್ ಗಾಯಕವಾಡ್, ಶ್ರೀ ಶರಣಕುಮಾರ.ಬಿ. ಹುಗ್ಗಿ ಕಮಲಾಪೂರ, ಶ್ರೀ ಕಮಲಾಕರ.ಎಸ್. ಶ್ರೀ ದುರ್ಯೋಧನ, ಶ್ರೀ ಗಂಗಾರಮ ಚಿಂಚನಸೂರ, ಶ್ರೀ ಗೌತಮ್ ದೊಡ್ಡಮನಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!