ಸಿರುಗುಪ್ಪ- ಒಳ್ಳೆಯ ನಿರ್ಧಾರ ನಮ್ಮನ್ನು ಅರ್ಧ ಗೆಲ್ಲಿಸಿದರೆ ಪ್ರಯತ್ನ ಮತ್ತು ಪರಿಶ್ರಮ ಇನ್ನರ್ಧ ಗೆಲ್ಲಿಸುತ್ತದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಾಷ್ಟ್ರೀಯ ಸಾಕ್ಷರತಾ ಶಾಂತಿ ಸಭೆ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ಅವರು ಹೇಳಿದರು.
ಸಿರುಗುಪ್ಪ ನಗರದ ಇಬ್ರಾಹಿಂ ಮಂಜಿಲ್ ನಲ್ಲಿ 62ನೇ ಅಂತರರಾಷ್ಟ್ರೀಯ ದಾದಿಯರ ದಿನವನ್ನು ಗೌರವಿಸಿ ಸ್ಮರಿಸಿ ನೆನಪಿಸಿ ಮಾತನಾಡುತ್ತಾ ಆಧುನಿಕ ಮತ್ತು ವೃತ್ತಿಪರ ನರ್ಸಿಂಗ್ ಗೆ ಭಾಷ್ಯ ಬರೆದವರು ಸ್ವತಃ ದಾದಿಯಾಗಿದ್ದ ಸಮಾಜ ಸುಧಾರಕಿ ಇಟಲಿಯ ಫ್ಲಾರೆನ್ಸ್ ನೈಟಿಂಗೆಲ್ 1860 ರಲ್ಲಿಯೇ ಅವರು ಲಂಡನ್ ನ ಸಂತ ಥಾಮಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಕೂಲ್ ಆರಂಭಿಸಿದ್ದರು ನೈಟಿಂಗೆಲ್ ಸಂಖ್ಯಾಶಾಸ್ತ್ರದಲ್ಲಿಯೂ ಪರಿಣತಿ ಪಡೆದಿದ್ದರು. ದಾದಿಯರ ಸೇವೆಯನ್ನು ಸ್ಮರಿಸುವ ಸಲುವಾಗಿ 1965 ರಿಂದ ಪ್ರತಿ ವರ್ಷ ಮೇ 12 ಅನ್ನು ಅಂತರಾಷ್ಟ್ರೀಯ ದಾದಿಯರ ದಿನ ಎಂದು ಆಚರಿಸಲಾಗುತ್ತದೆ ಎಂದು ಸಮಾಜ ಕಾರ್ಯಕರ್ತ ಅಬ್ದುಲ್ ನಬಿ ಅವರು ವಿವರಿಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















