ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ 4
1937ರಲ್ಲಿ ನಮ್ಮ ತಂದೆಯವರು ಗೋಡಿಹಾಳದಲ್ಲಿ ಒಂದು ನಿದ್ರಾರಹಿತ ರಾತ್ರಿಯನ್ನು ಕಳೆದು ವಾಪಸ್ ಚಡಚಣಕ್ಕೆ ಬಂದರು.

ಅವರದೇ ಮಾತುಗಳಲ್ಲಿ “ ನನ್ನ ತಾಯಿಯವರು ನನಗಾಗಿ ಕಾತರದಿಂದ ಕಾಯುತ್ತಿದ್ದರು. ಅವರು ನನ್ನ ಕಳೆಗುಂದಿದ ಮುಖ ಹಾಗೂ ಕಾಲಲ್ಲಿಯ ರಕ್ತ ಭರಿತ ಗುಳ್ಳೆಗಳನ್ನು ಗಮನಿಸಿದರು. ನನಗೆ ಯಾವುದೇ ಶೂಸ್ ಗಳು ಇರಲಿಲ್ಲ ಹಾಗೂ ನಾನು ಬರಿಗಾಲಿನಿಂದ ನಡೆದಿದ್ದೆ . ಚಳಿಯಿಂದ ರಕ್ಷಿಸಲು ನನಗೆ ಸರಿಯಾದ ಹೊದಿಕೆಗಳು ಇರಲಿಲ್ಲ. ನನ್ನ ದೇಹವು ಈ ಎಲ್ಲಾ ಅಡಚಣೆಗಳನ್ನು ತಾಳಿಕೊಳ್ಳುವಷ್ಟು ಗಟ್ಟಿಯಾಗಿರಲಿಲ್ಲ ಹಾಗೂ ರಾತ್ರಿಗೆ ನನಗೆ ಜ್ವರ ಬರಲು ಆರಂಭಿಸಿತು. ನನ್ನ ತಾಯಿ ಇವೆಲ್ಲವುಗಳನ್ನು ನೋಡಿ ಅಳಲು ಆರಂಭಿಸಿದರು. ಆದರೆ ಅವರ ಆರೈಕೆ ಹಾಗೂ ಕಾಳಜಿ ಯಿಂದ ನಾನು ಬೇಗ ಗುಣಮುಖನಾದೆ.

ಆದರೆ ನನ್ನ ತಾಯಿಯದು ಒಂದೇ ಪ್ರಶ್ನೆ
” 16 ವರ್ಷದ ಎಳೆಯ ಬಾಲಕ ದುಡ್ಡು ಗಳಿಸುವುದಕ್ಕಾಗಿ ತನ್ನ ಅಮೂಲ್ಯವಾದ ಆರೋಗ್ಯವನ್ನು ಪಣಕ್ಕಿಟ್ಟು ಇಂತಹ ಕಠಿಣ ಕೆಲಸಗಳನ್ನು ಮಾಡಬೇಕೇ ಎಂಬುದಾಗಿತ್ತು. ಬಾಳಿನಲ್ಲಿ ಸಂತೋಷವೇ ಇರದಿದ್ದ ಮೇಲೆ ಕೆಲಸ ಯಾತಕ್ಕಾಗಿ. “ ಅವಳು ಕೂಡಲೇ ನಾನು ಕೆಲಸವನ್ನು ಬಿಟ್ಟು ತಿಕೋಟಕ್ಕೆ ಬರಲು ಸೂಚಿಸಿದಳು. ಹಳ್ಳಿಹಳ್ಳಿಗೆ ಓಡಾಡುವುದಕ್ಕಿಂತ ಮತ್ತು ಹಳ್ಳಿಗರನ್ನು ಆಶ್ರಯ ಹಾಗೂ ಆಹಾರ ಕೊಡಲು ಕೇಳುವುದಕ್ಕಿಂತ ಒಂದೇ ಹೊತ್ತಿನ ಊಟ ಮಾಡಿ ಇರುವುದು ಒಳ್ಳೆಯದು.’ ಆದರೆ ನನ್ನ ತಂದೆಯವರು ಎಳೆಯ ವಯಸ್ಸಿನಲ್ಲಿ ನಾನು ಕೆಲಸಕ್ಕೆ ಹೆದರಿದರೆ ಮುಂದೆ ನಾನು ಜೀವನವನ್ನು ಹೇಗೆ ಎದುರಿಸಿಯೇನು ಎಂದು ಅವರ ತಾಯಿಯನ್ನು ಸಂತೈಸಿದರು.

ಭಾರತದಲ್ಲಿ ಸ್ತ್ರೀಗೆ ಒಂದು ಆದರ್ಶವಾದ ಸ್ಥಾನವಿದೆ, ಅದೇ ಮಾತೃತ್ವ, ಬೆರಗುಗೊಳಿಸುವ, ಯಾವುದೇ ಸ್ವಾರ್ಥವಿಲ್ಲದ, ಸದಾ ದುಡಿಯುತ್ತಿರುವ ಯಾವಾಗಲೂ ಕ್ಷಮಿಸುವ ಮಾತೃತ್ವ. ತಾಯಿ ಸದಾ ಮಮತೆ ಹರಿಸುವ ಆದರ್ಶ ಜೀವಿ. ಅವಳ ಮಮತೆ ಯಾವತ್ತೂ ಬತ್ತದು. ನನ್ನ ತಂದೆ ಮುಂದೆ ಹೀಗೆ ಬರೆಯುತ್ತಾರೆ” ನನ್ನ ತಾಯಿ ನನ್ನನ್ನು ಈ ಜಗತ್ತಿಗೆ ತಂದ ಸಂತಳು. ಅವಳು ತನ್ನ ದೇಹವನ್ನು, ಮನಸ್ಸನ್ನು, ಆಹಾರವನ್ನು, ಬಟ್ಟೆಯನ್ನು, ಅವಳ ಆಚಾರ-ವಿಚಾರವನ್ನು ಶುದ್ಧವಾಗಿಟ್ಟುಕೊಂಡಿದ್ದಳು . ಅದಕ್ಕಾಗಿಯೇ ಅವಳು ಪೂಜಿಸಲ್ಪಡುವಳು. ನಮ್ಮ ಅಜ್ಜಿಯಂತಹ (ಅಷ್ಟು ಪರಿಶುದ್ಧ) ಮಹಾನ್ ನೈತಿಕ ಆಸ್ತಿಯನ್ನು ಹೊಂದಿದ್ದಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ.

Asset 4
Rrbagewadi ತಂದೆ ತಾಯಿ ಬಿಟ್ಟು ಹೋದ ಆಸ್ತಿ ತುಂಬಾ ಮನ ಮುಟ್ಟುವಂತಿದೆ
ನಿಮ್ಮ ಕೃತಜ್ಞತಾ ಭಾವಾಭಿವ್ಯಕ್ತ ರೀತಿ ಅನುಪಮ, ಅನುಕರಣೀಯ, ಒಂದು role model.mr T B Chavan ನಿಮ್ಮ ಭಾಷೆ ಮತ್ತು ನಿರೂಪಣೆಯ ರೀತಿ ಅರ್ಥಪೂರ್ಣವಾಗಿವೆ. ಮುಂದುವರೆಸಿರಿ Dr.Basavaraj Sadar
Mahendra kurdi ಈ ವಿಷಯದಲ್ಲಿ ತಮ್ಮ ನೋವುಗಳನ್ನ ಸಹಿಸುವ ಶಕ್ತಿ ಜೊತೆಗೆ ತಾಯಿಯ ಕಾಳಜಿ ಮತ್ತು ಮಮತೆ ತುಂಬುವ ಪರಿಯನ್ನು ತಿಳಿಸಿದ್ದಾರೆ. ತಾಯಿ ಎನ್ನುವವಳು ಯಾವತ್ತೂ ಮಕ್ಕಳ ಆರೋಗ್ಯ ಆರೈಕೆಗೆ ಹೆಚ್ಚಿನ ಒತ್ತು ನೀಡುತ್ತಾಳೆ ಹೊರತು ಹಣಕ್ಕಾಗಿ ಅಲ್ಲ ಎಂದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಆದರೂ ಬದುಕಿಗೆ ಹಣ ಅವಶ್ಯಕತೆ ಇದೆ ಹಾಗಾಗಿ ತಾಳ್ಮೆಯಿಂದ ತಾಯಿಯ ಮನವೊಲಿಸಲು ಮಾಡಿದ ಪ್ರಯತ್ನ ಅವರ ಆತ್ಮ ವಿಶ್ವಾಸ ಮೆಚ್ಚುವಂಥದ್ದು. ಹಾಗಾಗಿ ಇದರಿಂದ ನಾವು ಸಂಯಮ ತಾಳ್ಮೆ ಮತ್ತು ಮಾತೃ ವಾತ್ಸಲ್ಯತೆ ಹೇಗೆ ಎಂದು ಕಲಿಯಬಹುದು . ಆ ನಿಟ್ಟಿನಲ್ಲಿ ಅವರು ಹಾಕಿಕೊಟ್ಟ ಮಾರ್ಗ ಮಾದರಿ ಬದುಕಾಗಿದೆ. ತಂದೆ ತಾಯಿ ಬಿಟ್ಟು ಹೋದ ಆಸ್ತಿ ತುಂಬಾ ಮನ ಮುಟ್ಟುವಂತಿದೆ R R Bagewadi : ಇವತ್ತಿಗೂ ತಂದೆ ತಾಯಿ ಅವರ ನೆನಪಲ್ಲಿ ನೀವು ಜೀವನ ಸಾಗಿಸುತ್ತಿರುವದು ಅತಿ ಹೆಮ್ಮೆಯ ವಿಷಯ. ನಿಮ್ಮ ತಂದೆ ತಾಯಿ ನಿಜಕ್ಕೂ ಧನ್ಯರು ಸರ್
ಅಪ್ಪ- ಅವ್ವ ಇಬ್ಬರನ್ನೂ ಕಳೆದುಕೊಂಡಿದ್ದೇನೆ ಸರ್. ಅನಾಥತೆ ಇದೆಯಲ್ಲವೆ? Dr Basavaraj Sadar ನಿಜ ಅಲ್ವಾ ನಮ್ಮ ಅಪ್ಪಂದಿರು ನಮ್ಮಿಂದ ಹೆಮ್ಮೆ ಪಡುವಂತಾದರೆ ನಮಗೆ ತಾನೆ ಇನ್ನೇನು ಬೇಕು. ನಮ್ಮ ಏಳಿಗೆಯಿಂದ ಆತ ಎದೆಯುಬ್ಬಿಸಿದರೆ ನಮ್ಮನ್ನು ಭೂಮಿಗೆ ತಂದಿದಕ್ಕೆ ಸಣ್ಣ ಧನ್ಯವಾದಗಳನ್ನು ತನ್ಮೂಲಕ ಹೇಳಿದಾಗುತ್ತದೆ.
ಶ್ರೀಯುತರ ಬರವಣಿಗೆಯು ಓದಿಸಿಕೊಂಡು ಹೋಗುವುದಲ್ಲದೆ ಅಪ್ಪ ಎಂಬ ಹೆಮ್ಮರಕ್ಕೆ ತಲೆ ಬಾಗಿ ನಮಿಸುವಂತೆ ಮಾಡುತ್ತದೆ. ಲೇಖನವನ್ನು‌ ಓದುತ್ತಾ ಹೋದಂತೆ ಕಣ್ಣಂಚಿನ ನೀರಿನೊಂದಿಗೆ ಅಪ್ಪ ಕಾಣಿಸಿಕೊಳ್ಳುವುದಂತೂ ಸತ್ಯ. ಶ್ರೀಯುತರು ಅಪ್ಪನನ್ನು ಬರವಣಿಗೆಗೆ ಇಳಿಸಿ ಅಪ್ಪನ ನೆನಪನ್ನು ಉಳಿಸಿದ್ದಾರೆ. ಅವರ ಲೇಖವವು ವಿಖ್ಯಾತಿ ಎಂದು ಹಾರೈಸುತ್ತಾ…. ಸಿ ಕೆ ಯೋಗಾನಂದ.

  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!