ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ : ಬಳ್ಳಾರಿ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನ

ಬಳ್ಳಾರಿ/ ಸಿರುಗುಪ್ಪ – ಮಾನವ ದಿನಗಳ ಸೃಜನೆಯಲ್ಲಿ ಬಳ್ಳಾರಿ ಜಿಲ್ಲೆಗೆ ಮೇ ಅಂತ್ಯದವರೆಗೆ ನಿಗದಿಯಾಗಿದ್ದ 18.45 ಲಕ್ಷ ಸೃಜನೆ ಗುರಿಯಲ್ಲಿ ಈವರೆಗೆ 2,52,011 ಮಾನವ ದಿನಗಳನ್ನು ಸೃಜಿಸುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ರಾಯಚೂರು ಜಿಲ್ಲೆ ಮೊದಲನೇ ಸ್ಥಾನ, ವಿಜಯನಗರ ಜಿಲ್ಲೆ 3ನೇ ಸ್ಥಾನದಲ್ಲಿದೆ.
ಉದ್ಯೋಗದಲ್ಲಿ ಪಾಲ್ಗೊಳ್ಳುವ ಕಾರ್ಮಿಕರ ಪೈಕಿ ಜಿಲ್ಲೆಯಲ್ಲಿ ಶೇ. 59.29 ರಷ್ಟು ಮಹಿಳಾ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹಾವಾಗಿದೆ ಎಂದು ಲೋಕ ಶಿಕ್ಷಣ ಸಾಕ್ಷರತಾ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿಯವರು ತಿಳಿಸಿದರು.
ಬಳ್ಳಾರಿ ಜಿಲ್ಲೆಯ 100 ಗ್ರಾಮ ಪಂಚಾಯಿತಿಗಳಲ್ಲಿ 2.50 ಲಕ್ಷ ಮಾನವ ದಿನ ಸೃಜನೆ ಮನರೇಗಾ ಕೆಲಸದಲ್ಲಿ 25,169 ಕುಟುಂಬಗಳು ಸಕ್ರಿಯ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1.85 ಲಕ್ಷ ಉದ್ಯೋಗ ಚೀಟಿಗಳು ವಿಕಸಿತ ಭಾರತ ರೋಜ್ ಗಾರ್ ಮತ್ತು ಆಜೀವಿಕಾ ಮಿಷನ್ ( ವಿಬಿ- ಜಿ ರಾಮ್ ಜಿ ) ಯೋಜನೆ ಅಡಿ ಪ್ರಸಕ್ತ ಸಾಲಿನಲ್ಲಿ ಆರಂಭಗೊಂಡಿರುವ ಕಾಮಗಾರಿಗಳಲ್ಲಿ ಮಾನವ ದಿನಗಳ ಸೃಜನೆಯಲ್ಲಿ ಗಣಿ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯನ್ನು ಮರು ರೂಪಿಸಿ ಜಾರಿಗೆ ತರಲಾದ ವಿ ಬಿ ಐ ರಾಮ್ ಜಿ ಹೊಸ ಕಾಯಿದೆಯಡಿ ಪ್ರಸಕ್ತ ಸಾಲಿನಿಂದ ಜಿಲ್ಲೆಯಲ್ಲಿ ಬದಲಾದ ಹೊಸ ರೂಪದೊಂದಿಗೆ ಚಾಲನೆ ನೀಡಲಾಗಿದೆ.
ಜಿಲ್ಲೆಯ ಬಳ್ಳಾರಿ, ಸಂಡೂರು ,ಕಂಪ್ಲಿ, ಕುರುಗೋಡು, ಸಿರುಗುಪ್ಪ ಒಟ್ಟು ಐದು ತಾಲೂಕುಗಳಲ್ಲಿ 100 ಗ್ರಾಮ ಪಂಚಾಯಿತಿಗಳಿದ್ದು ಪ್ರಸಕ್ತ 2026-27 ನೇ ಸಾಲಿನಲ್ಲಿ ವಿಬಿ- ಜಿ ರಾಮ್ ಜಿ ಅಡಿ ಮೇ ಅಂತ್ಯದವರೆಗೆ 18.45 ಲಕ್ಷ ಮಾನವ ದಿನಗಳ ಸೃಜನೆ ಗುರಿ ಹೊಂದಿದ್ದು ಸಾಧನೆಗಾಗಿ ಜಿಲ್ಲೆಯಲ್ಲಿ ಏಪ್ರಿಲ್ ನಿಂದ ಕಾಮಗಾರಿ ಭರದಿಂದ ಪ್ರಾರಂಭಗೊಳಿಸಲಾಗಿದೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1,85,797 ಉದ್ಯೋಗ ಚೀಟಿಗಳು ನೋಂದಣಿಯಾಗಿವೆ ಅದರಲ್ಲಿ 22,387 ಕುಟುಂಬಗಳ ಕಾರ್ಮಿಕರು ಸಕ್ರಿಯವಾಗಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ ಪ್ರಸಕ್ತ ಸಾಲಿನಲ್ಲಿ ಮಾನವ ದಿನಗಳ ಗುರಿ ತಲುಪಲು ತಾಲೂಕುವಾರು ನಿಗದಿಪಡಿಸಿದ ಗುರಿಯನ್ನು ಬೆನ್ನತ್ತುವ ಮೂಲಕ ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲಿಯೇ ಗಮನ ಸೆಳೆದಿದೆ. ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಪ್ರಕಟಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಬಳ್ಳಾರಿ ಸಿರುಗುಪ್ಪ ಸಂಡೂರು ಕುರುಗೋಡು ಕಂಪ್ಲಿ 5 ತಾಲೂಕುಗಳಿಗೆ ನಿಗದಿಪಡಿಸಿದ 18.45 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಸಾಧಿಸಲು ಗ್ರಾಮಗಳಿಗೆ ಜಿಲ್ಲಾ ಪಂಚಾಯತ್ ಬೆನ್ನು ಬಿದ್ದಿದೆ ಪ್ರಸಕ್ತ ಸಾಲಿನಲ್ಲಿ ಹೊಸ ಕಾಯಿದೆ ಅಡಿ ಜಾರಿಗೊಂಡಿರುವ ವಿವಿಜಿ ರಾಮ್ ಜಿ ಅಡಿ ಮಾನವ ದಿನಗಳ ಸೃಜನೆಗೆ ವಿವಿಧ ಗೊಂದಲಗಳು ಸ್ಥಳೀಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾಡುವಂತಾಗಿದೆ ಇದರಿಂದಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಗುರಿ ನಿಗದಿಯಾಗಿದ್ದರೂ ಸಾಧನೆಗೆ ಯೋಜನೆಯ ಅನುಷ್ಠಾನಾಧಿಕಾರಿಗಳು ಹರ ಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಅದರ ನಡುವೆಯೂ ಮಾನವ ದಿನಗಳ ಸೃಜನೆಯೆಲ್ಲಿ ರಾಜ್ಯದಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಳ್ಳಾರಿ ಜಿಲ್ಲೆ ಗಮನ ಸೆಳೆದಿದೆ ಬಳ್ಳಾರಿ ಜಿಲ್ಲೆಯಲ್ಲಿ ಮನರೇಗಾದಡಿ ತಾಲೂಕುವಾರು ಮಾನವ ದಿನ ಗುರಿ ಹಾಗೂ ಕೈಗೊಂಡ ಕಾಮಗಾರಿಗಳ ಅಂಕಿ ಅಂಶ ಬಳ್ಳಾರಿ 25 ಗ್ರಾಮ ಪಂಚಾಯತ್ ಕೈಗೊಡ ಕಾಮಗಾರಿ 402 ಗುರಿ 4,44,398, ಕಂಪ್ಲಿ 10 ಗ್ರಾಮ ಪಂಚಾಯಿತ್ 203 ಕೈಗೊಂಡ ಕಾಮಗಾರಿ 2,66,288 ಗುರಿ, ಕುರುಗೋಡು 12 ಗ್ರಾಮ ಪಂಚಾಯತ್ 241 ಕೈಗೊಡ ಕಾಮಗಾರಿ 3,15,426 ಗುರಿ, ಸಂಡೂರು 26 ಗ್ರಾಮ ಪಂಚಾಯತ್ 543 ಕೈಗೊಡ ಕಾಮಗಾರಿ 3,71,324 ಗುರಿ, ಸಿರುಗುಪ್ಪ 27 ಗ್ರಾಮ ಪಂಚಾಯತ್ 754 ಕೈಗೊಡ ಕಾಮಗಾರಿ 4,47,569 ಗುರಿ ಬಳ್ಳಾರಿ ಜಿಲ್ಲೆಯಲ್ಲಿ ಮನರೇಗಾದಡಿ ಕೈಗೊಳ್ಳುವ ಕಾಮಗಾರಿಗಳಿಗೆ ಮಾನವ ದಿನಗಳ ಸೃಜನೆಗೆ ಸಂಬಂಧಿಸಿದಂತೆ ಸಕಾಲಕ್ಕೆ ಅನುದಾನ ಪಾವತಿಸಲಾಗುತ್ತಿದೆ ಆದರೆ ಸಾಮಗ್ರಿ ವೆಚ್ಚ ಅನುದಾನಕ್ಕಾಗಿ ವರ್ಷಾನುಗಟ್ಟಲೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಕಳೆದ 2024-25 ನೇ ಸಾಲಿನಲ್ಲಿ 16.46 ಕೋಟಿ ರೂ. ಹಾಗೂ ಪ್ರಸಕ್ತ 2026-27 ನೇ ಸಾಲಿನಲ್ಲಿ 1.4 ಕೋಟಿ ರೂ. ಸೇರಿ ಒಟ್ಟು 22.84 ಕೋಟಿ ರೂ ಅನುದಾನ ಸರ್ಕಾರದಿಂದ ಬಿಡುಗಡೆ ಬಾಕಿಯಿದೆ ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್ ಅವರು ಮಾತನಾಡಿ ಮನರೇಗಾ ಮಾನವ ದಿನಗಳ ಸೃಜನೆಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 18.45 ಲಕ್ಷ ಸೃಜನ ಗುರಿ ನೀಡಿದ್ದು ಅದರಲ್ಲಿ ಈಗಾಗಲೇ 2.22 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ನಿತ್ಯ 1 ಲಕ್ಷ ಕಾರ್ಮಿಕರು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿ ಹೇಳಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ತಿಳಿಸಿದ್ದಾರೆ.

ವರದಿ : ಮಸೀದಿ, ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!