ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ 5 : ಸಮಯ ಪರಿಪಾಲನೆ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

1938 ರ ಕೊನೆಗೆ ನನ್ನ ತಂದೆಯವರಿಗೆ ಸಿಂದಗಿಗೆ ವರ್ಗವಾಯಿತು ಹಾಗೂ ಎಂದಿನಂತೆ ಅವರು ಹಳ್ಳಿಗಳಿಗೆ ಅಂಚೆ ಬಟವಾಡೆ ಹಾಗೂ ಇತರೆ ಕೆಲಸಗಳಿಗಾಗಿ ಹೋಗಬೇಕಾಗುತ್ತಿತ್ತು. ಅವರಿಗೆ ಆಗ 18 ವರ್ಷ. ಅವರು ಹೇಳುವಂತೆ “ ಪೋಸ್ಟ್ ಮಾಸ್ಟರ್ ಮಾಡುವ ಎಲ್ಲ ಕೆಲಸಗಳನ್ನು ಅರಿಯುವದು ನನ್ನ ಸಹಜ ಸ್ವಭಾವವಾಗಿತ್ತು. ಹಳ್ಳಿಯ ಪೋಸ್ಟ್ ಮನ್ ಆಗಿ ನಾನು ಕಲಿಯುವದು ಏನು ಇರಲಿಲ್ಲ. ಅದನ್ನು ನಾನು ಶ್ರದ್ಧೆಯಿಂದ ಮಾಡುತ್ತಿದ್ದೆ. ನಾನು ಯಾವತ್ತೂ ನನ್ನ ಕೆಲಸವನ್ನು ಉಪೇಕ್ಷಿಸಿದವನಲ್ಲ . ನನಗೆ ಯಾವುದೇ ರಿಸ್ಟ್ ವಾಚ್ ಇರಲಿಲ್ಲ. ನಾನು ಹಳ್ಳಿಗಳಿಗೆ ಹೋಗಿ ಅಂಚೆ ಬಟವಾಡೆ ಮಾಡುವ ಕೆಲಸವನ್ನು ಎಷ್ಟು ನಿಯಮಿತವಾಗಿ ಮಾಡುತ್ತಿದ್ದೇ ಎಂದರೆ ಕೆಲವು ಚಾವಡಿಯ ಜನರು ನಾನು ಹಳ್ಳಿಗೆ ಬರುವ ಸಮಯದಿಂದ ತಮ್ಮ ಗಡಿಯಾರಗಳನ್ನು ಸರಿ ಮಾಡಿಕೊಳ್ಳುತ್ತಿದ್ದರು. ಇದು ಉತ್ಪ್ರೇಕ್ಷೆ ಅಲ್ಲ. ನಾನು ಗೋಲಗೇರಿ ಹಳ್ಳಿಯನ್ನು ಪ್ರತಿ ಬುಧವಾರ ಸರಿಯಾಗಿ ಬೆಳಗಿನ ಒಂಬತ್ತು ಗಂಟೆಗೆ ತಲುಪುತ್ತಿದ್ದೆ . ಆ ಹಳ್ಳಿಯ ಸರಪಂಚ ( ಹಳ್ಳಿಯ ಮುಖ್ಯಸ್ಥ) ನನಗಾಗಿ ಚಾವಡಿಯಲ್ಲಿ ಆ ಸಮಯಕ್ಕೆ ಕಾಯುತ್ತಿದ್ದರು. ನಾನು ಅಲ್ಲಿಗೆ ಹೋಗುತ್ತಲೇ ಅವರು ತಮ್ಮ ಗೋಡೆ ಗಡಿಯಾರವನ್ನು ಒಂಬತ್ತು ಗಂಟೆಗೆ ಸರಿಪಡಿಸಿ ಇಡುತ್ತಿದ್ದರು. ಹೀಗೆ ನಾನು ನನ್ನ ಬೀಟ್ ನ್ನು ಅತ್ಯಂತ ಕರಾರುವಾಕ್ಕಾಗಿ ಅದೇ ಸಮಯಕ್ಕೆ ಅದೇ ಹಳ್ಳಿಗೆ ಹೋಗುವಂತೆ ಆಯೋಜಿಸಿದ್ದೆ.”
ಹೀಗೆ ಅವರು ತಮ್ಮ 18ನೇ ವಯಸ್ಸಿಗೆ ಸಮಯ ಪರಿಪಾಲನೆ ಯನ್ನು ಸಾಧಿಸಿದ್ದರು ಹಾಗೂ ಅದನ್ನು ತಮ್ಮ ಜೀವಿತದುದ್ದಕ್ಕೂ ಪಾಲಿಸಿಕೊಂಡು ಬಂದರು.

ಈ ಸಮಯ ಪರಿಪಾಲನೆ ಹಾಗೂ ಕರ್ತವ್ಯನಿಷ್ಠೆ ಅವರು ಮುಂದಿನ ಪೀಳೆಗೆಗೆ ಬಿಟ್ಟು ಹೋದ ಅಮೂಲ್ಯ ಆಸ್ತಿ.

  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!