ಕತ್ತರಿಸಿದ ಆಪಲ್ ಕವಚ ಚೀಲದ ನಡುವಿನಲಿ
ಅಲ್ಲಲ್ಲಿ ಪುಟ್ಟ ಶ್ವೇತ ತುಂಬೆಹೂವನು ಇರಿಸುತಲಿ
ನಿತ್ಯಪುಷ್ಪದ ಬೊಟ್ಟನು ನೆತ್ತಿಯ ಮೇಲಿರಿಸುತಲಿ
ಸಿಂಗಾರಗೊಂಡಿದೆ ಸುಗಂಧರಾಜದ ತೊಟ್ಟುಗಳಲಿ
ನಿತ್ಯ ಕಟ್ಟೆಯ ಸುಲಲಿತ ಕಾವ್ಯ ಚಿತ್ತಾರದಲ್ಲಿ
ಮೂಡಿರುವುದೊಂದು ಚಂದದ ಪದಕವಾಗಿ ಇಲ್ಲಿ
ಹೇಗಿದೆ ಎಂಬುದ ಅರಿವ ಕೂತೂಹಲದಲ್ಲಿ
ಕೇಳ ಬಯಸುತಿದೆ ಎನ್ನಮನ ಶುಭೋದಯದಲ್ಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















