ಚಾಮರಾಜನಗರ : ದಿ. 20 5 2026 ರಂದು ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿವೃತ್ತ ಯೋಧರಾದ ಕೆ ಆರ್ ಶಿವಣ್ಣ ಹಾಗೂ ಗೋಪಾಲಪುರ ಕೆ ಸಿ ನಾಗಪ್ಪ ರವರಿಗೆ ಸಂಘಟನೆ ವತಿಯಿಂದ ಗೌರವ ಸಮರ್ಪಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಪುಟ್ಟಮ್ಮರವರು ಮಾತನಾಡಿ ನಿವೃತ್ತ ಯೋಧರಿಗೆ ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳಿಗೆ ಕೈಜೋಡಿಸಿ ಸಹಕರಿಸಲು ಬದ್ಧರಾಗಿರುತ್ತೇವೆ ಎಂದು ತಿಳಿಸಿ ಯೋಧರ ಬಗ್ಗೆ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷರಾದ ಈಶ್ವರ್ ಮಾತನಾಡಿ ಯೋಧರ 25 ವರ್ಷದ ಸುದೀರ್ಘ ಸೇವೆಯನ್ನು ಪರಿಗಣಿಸಿ ಗೌರವ ಸಮರ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಗವಿಘರ್ಜನೆಯ ಸಂಪಾದಕರಾದ ಗವಿಸ್ವಾಮಿ ರವರು ಯೋಧ ವೃತ್ತಿಯನ್ನು ಶ್ಲಾಘಿಸಿದರು. ಸಾಹಿತಿಗಳಾದ ಕಾಳಿಂಗ ಸ್ವಾಮಿ ಸಿದ್ದಾರ್ಥ್ ರವರು ಯೋಧರನ್ನು ದೇಶದ ಬೆನ್ನೆಲುಬು ಎಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಘ ಸಂಸ್ಥೆಗಳ ಪ್ರತಿನಿಧಿ ಎಸ್ ಮುಬಾರಕ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ಸೈಯದ್ ಅನ್ಸರ್, ಜಿಲ್ಲಾ ಉಪಾಧ್ಯಕ್ಷರಾದ ಬೆಳವಾಡಿ ರಾಜಪ್ಪ,, ಜಿಲ್ಲಾ ಕಾರ್ಯದರ್ಶಿಯಾದ ಬೊಮ್ಮನಹಳ್ಳಿ ಮಂಜುನಾಥ್, ಯುವ ಘಟಕದ ಅಧ್ಯಕ್ಷರಾದ ಮಲ್ಲು ಗಜ, ತಾಲೂಕು ಉಪಾಧ್ಯಕ್ಷರಾದ ಪ್ರಸಾದ್ ಚಾಮರಾಜನಗರ, ತಾಲೂಕು ಅಧ್ಯಕ್ಷರಾದ ಸವಿತಾ, ತಾಲೂಕು ಉಪಾಧ್ಯಕ್ಷರಾದ ಉತ್ತರಾಜಮ್ಮ, ಟೌನ್ ಅಧ್ಯಕ್ಷರಾದ ಅಜಿತ್ ಕುಮಾರ್, ಉಪಾಧ್ಯಕ್ಷರಾದ ಗುರು ಪ್ರಸಾದ್, ಕಾವಲು ಪಡೆ ಗೌರವಾಧ್ಯಕ್ಷರಾದ ರಾಮೇಗೌಡರು,, ರಾಜೂರವರು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ದೇವರಾಜು, ಪತ್ರಕರ್ತರಾದ ಕಾಂತರಾಜ್ ಮೌರ್ಯ ಕನ್ನೇಗಾಲ ಮನಸ್ಸು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್




















