ಶಿರಸಿ: ಜಸ್ಟೀಸ್ ಜಿ.ಎನ್.ಸಭಾಹಿತ ಹಾಗೂ ಜಸ್ಟೀಸ್ ವಿಷ್ಣು ಸಭಾಹಿತ ಅವರ ಸ್ಮರಣೆ ಹಿನ್ನೆಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ ನಗರದ ಹಾಲೊಂಡ ಬಡಾವಣೆಯ ಗಾಯತ್ರಿ ಗೆಳೆಯರ ಬಳಗದಲ್ಲಿ ಶನಿವಾರ ಮೇ 23 ರ ಸಂಜೆ 4 ಘಂಟೆಗೆ ನಡೆಯಲಿದೆ.
ಕವಿತಾ ಹೆಗಡೆ ಅಭಯಂ ಇವರಿಂದ “ಮಹಾಭಾರತದಿಂದ ಮೆಟ್ರೋವರೆಗೆ – ಅವಳಿಗೆ ಪೋಷಕ ಪಾತ್ರವೇ ಯಾಕೆ?”
ನಂತರ ಕಾನೂನು ಸಾಕ್ಷರತೆ ಕುರಿತು ಎಸ್. ಕೆ. ಹೆಗಡೆ, ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಿಂದ ಉಪನ್ಯಾಸ ಕಾರ್ಯಕ್ರಮವನ್ನು ವಿಷ್ಣು ವಿ. ಸಭಾಹಿತ ಅವರ ಉಪಸ್ಥಿತಿಯಲ್ಲಿ ಆಯೋಜಿಸಿದ್ದು ಎಲ್ಲರಿಗೂ ಆದರದ ಸ್ವಾಗತ ಎಂದು ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ




















