ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
( ವರ್ಷ 1955 – 60) ನಮ್ಮ ತಂದೆಯವರು ಮುಧೋಳದ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ ಎಂಪ್ಲಾಯಮೆಂಟ್ ಜಾಹೀರಾತುಗಳನ್ನು ಗಮನಿಸುವುದು ಅವರ ಹವ್ಯಾಸವಾಗಿತ್ತು. ಅವರ ಮಾತುಗಳಲ್ಲಿ ಹೇಳುವುದಾದರೆ ” ಎಷ್ಟೋ ಜನ ಹುಡುಗರು ಕೆಲಸ ಗಿಟ್ಟಿಸುವ ವಿಷಯದಲ್ಲಿ ನನ್ನನ್ನು ಸಲಹೆ ಕೇಳಲು ಬರುತ್ತಿದ್ದರು. ನಾನು ಅವರಿಗೆ ಪೂರ್ತಿ ಸಹಾಯ ಮಾಡುತ್ತಿದ್ದೆ. ಇದರಿಂದ ಎಷ್ಟೋ ಜನ ಹುಡುಗರಿಗೆ ಕೆಲಸ ಸಿಕ್ಕಿತು. ಕೆಲವು ಜನ ಪೋಸ್ಟ್ ಮ್ಯಾನ್ ಗಳಾದರು. ಇನ್ನು ಕೆಲ ಜನ ಹುಡುಗರು ಟೆಲಿಫೋನ್ ಆಪರೇಟರ್ ಮತ್ತು ಟೆಲಿಗ್ರಾಫಿಸ್ಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಪೋಸ್ಟ್ ಆಫೀಸಿನಲ್ಲಿ ಇರುವ ಕೆಲಸದ ಒತ್ತಡವನ್ನು ಬಲ್ಲ ನಾನು ಅವರಿಗೆ ಟೆಲಿಫೋನ್ ಆಪರೇಟರ್ ಜಾಗಕ್ಕೆ ಅರ್ಜಿ ಹಾಕಲು ಸಲಹೆ ಕೊಡುತ್ತಿದ್ದೆ. ಇಂತಹ ಎಷ್ಟೋ ಹುಡುಗರಿಗೆ ನಾನು ಸಹಾಯ ಮಾಡಿದ್ದೆನಾದರೂ ಅವರು ನನಗೆ ವೈಯಕ್ತಿಕವಾಗಿ ಪರಿಚಯವಿರದ್ದರಿಂದ ಅವರ ಹೆಸರುಗಳು ನನಗೆ ನೆನಪಿಲ್ಲ, ಆದರೆ ಅವರು ನನ್ನ ಸಹಾಯವನ್ನು ಮರೆತಿಲ್ಲ. ಎಷ್ಟೋ ಜನ ಹುಡುಗರು ಈಗ ಗೆಜೆಟೆಡ್ ಆಫೀಸರ್ ಗಳಾಗಿದ್ದಾರೆ.
ಇಂತಹ ಒಬ್ಬ ಆಫೀಸರ್ ನನ್ನನ್ನು ಜಮಖಂಡಿಯಲ್ಲಿ ಭೇಟಿಯಾದ. ಅವನು ಶಿರಸಾಷ್ಟಾಂಗವಾಗಿ ನನ್ನ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ ‘ ಸರ್, ನಾನು ಮುಧೋಳದವನು, ಪುರಾಣಿಕ್ ಅಂತ ನನ್ನ ಹೆಸರು. ನೀವು ಮುಧೋಳದಲ್ಲಿ ಇರುವಾಗ ಮಾಡಿದ ಸಹಾಯದಿಂದಾಗಿ ನಾನು ಟೆಲಿಫೋನ್ ಆಪರೇಟರ್ ಹುದ್ದೆ ಗಿಟ್ಟಿಸಿದೆ. ಈಗ ನಾನು ಗೆಜೆಟೆಡ್ ಆಫೀಸರ್ ಆಗಿದ್ದೇನೆ ಹಾಗೂ ಮುಂಬೈಯಲ್ಲಿ ಡಿವಿಜನಲ್ ಎಂಜಿನಿಯರನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ. ಆಗ, ನಾನು, ಹೌದಾ? ನನಗೆ ನೆನಪಿಲ್ಲ. ದೇವರ ದಯೆಯಿಂದ ನಿನಗೆ ಇಂತಹ ಉನ್ನತ ಹುದ್ದೆ ಸಿಕ್ಕಿದೆ. ನನಗೆ ನಿನ್ನನ್ನು ನೋಡಿ ಸಂತೋಷವಾಗಿದೆ.” ಎಂದೆ .
ಇಂತಹ ನಿಸ್ವಾರ್ಥದ, ಗುಣಮಟ್ಟದ ಅಮೂಲ್ಯವಾದ ಆಸ್ತಿಯನ್ನು ನಮ್ಮ ತಂದೆ ಬಿಟ್ಟು ಹೋಗಿದ್ದಾರೆ.
ನೆನಪಿನ ಆಳದಿಂದ…
ನಾನು ಚಿಕ್ಕವನಿದ್ದಾಗ ಗದಗ ಬೆಟಗೇರಿಯಲ್ಲಿ ನಮ್ಮ ಮನೆಯ ಮುಂದೆ ದಿನಾಲೂ ಒಬ್ಬ ಹಿರಿಯ ವ್ಯಕ್ತಿ ಹೋಗುತಿದ್ದರು… ಅವರು ತಮ್ಮ ಕೋಟಿನ ಕಿಸೆಯಲ್ಲಿ ಯಾವಾಗಲೂ ಬಡೇಸೋಪಿನ ಬಣ್ಣ ಬಣ್ಣದ ಚಿಕ್ಕ ಪೆಪ್ಪರಮೆಂಟ್ (ಅಕ್ಕಿ ಕಾಳಿನ ಹಾಗೆ) ಇಟಗೊಂಡ, ಹಾದಿಯಲ್ಲಿ ಎಲ್ಲ ಚಿಕ್ಕ ಮಕ್ಕಳಿಗೆ ಕೊಡತಾ ಹೋಗತಿದ್ದರು.. ಅವರಿಗೆ ನಾವು ಪೆಪ್ಪರಮೆಂಟ ಅಜ್ಜಾಅಂತಾ ಕರೀತಿದ್ದವಿ
- Ramesh Tandi, Dharwad.
ಇಂಥ ಉತ್ತಮ ಸಂಸ್ಕಾರವೇ ಮನೆ ತನದ ಆಸ್ತಿ.
- Matsendra Joshi, Bangalore.
ಸುಲಲಿತ ಭಾಷೆಯಲ್ಲಿ ಸೊಗಸಾಗಿ ನಿರೂಪಣೆ ಮಾಡಿದ್ದೀರಿ. Super.
- Srinivas ಘಂಗುರ್
” Asset 11 ನಿಮ್ಮ ಪುಸ್ತಕದಿಂದ ಪ್ರೇರಣೆಗೊಂಡು ನಾನೂ ಸಹ ನನ್ನ ಅಪ್ಪ ಅಮ್ಮನ ಬಗ್ಗೆ ಒಂದು ಪುಸ್ತಕ ಬರೆಯಲು ಸಿದ್ದನಾಗಿರುವೆ ಸರ್ .”
– ಸಿಹಿಜೀವಿ ಸಿ ಜಿ ವೆಂಕಟೇಶ್ವರ C G Venkateshwar, ಶಿಕ್ಷಕರು ತುಮಕೂರು.
ಸಂಸ್ಕಾರ ಇಲ್ಲದ ಶ್ರೀಮಂತಿಕೆ ತೆಗೆದುಕೊಂಡು ಏನೂ ಮಾಡೋದು: ನಮ್ಮ ಅಪ್ಪಾ ಅಮ್ಮ ಸಂಸ್ಕಾರ ಶ್ರೀಮಂತಿಕೆ ಕೊಟ್ಟಿದ್ದಾರೆ.
- Smt. Sridevi. Prabhakar of Raichur.
ನಮ್ಮ ಪಾಲಕರು ನಿರಕ್ಷರರು. ನಮ್ಮಮ್ಮ ಕೇವಲ ಸಹಿಮಾಡಲು ನಮ್ಮಿಂದ ಕಲಿತಿದ್ದಳು. ಆದರೂ ಅವರಿವರ ಮನೆಗೆಲಸ ಮಾಡಿ ನಮ್ಮನ್ನು ಸಲಹಿದರು.- Ramamurthy V S .Bangalore.
- ಪ್ರಮೋದ್ ಕುಲಕರ್ಣಿ




















