ಬೆಳಗಾವಿ :ಬೈಲಹೊಂಗಲ ನಗರ ಸಭೆಯಲ್ಲಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026 ರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಗರೋತ್ಥಾನ ಯೋಜನೆ ಪೌರಕಾರ್ಮಿಕರಿಗೆ, ನಮಸ್ತೆ ಯೋಜನೆಯಡಿ ಚಿಂದಿ ಆಯುವವರಿಗೆ ಸುರಕ್ಷತಾ ಕಿಟ್ಗಳ ವಿತರಣೆ ಹಾಗೂ ಶೇ.೫ರ ನಿಧಿಯಡಿ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿ -ಚಕ್ರ ಸೈಕಲ್ ಮತ್ತು ವ್ಹೀಲ್ ಚೇರ್ ವಿತರಣೆಯನ್ನು ಶಾಸಕರಾದ ಸನ್ಮಾನ್ಯ ಶ್ರೀ ಮಹಾಂತೇಶ ಎಸ್. ಕೌಜಲಗಿ ರವರು ಮಾಡಿದರು.
ಈ ವೇಳೆ ಮಾತನಾಡಿದ ಅವರು ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಮತ್ತು ಕಸ ಹಾಗೂ ಚಿಂದಿ ಆಯುವ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದ್ದು, ದೈನಂದಿನ ಕೆಲಸದ ಸಮಯದಲ್ಲಿ ಸುರಕ್ಷಾ ಧಿರಿಸುಗಳನ್ನು ಧರಿಸಿಕೊಂಡು ತಮ್ಮ ಆರೋಗ್ಯದ ಸುರಕ್ಷತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು ಹಾಗೂ ವಿಕಲಚೇತನ ಫಲಾನುಭವಿಗಳು ತ್ರಿ -ಚಕ್ರ ಸೈಕಲ್ ಮತ್ತು ವ್ಹೀಲ್ ಚೇರ್ ಸದ್ಭಳಕೆ ಮಾಡಿಕೊಂಡು ಸ್ವಾವಲಂಬಿ ಬದುಕು ಸಾಗಿಸುವಂತೆ ತಿಳಿಸಿದರು.
ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಆರ್. ಹುಗ್ಗಿ ರವರು ಮಾತನಾಡಿ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026 ಕುರಿತು ಪೌರಕಾರ್ಮಿಕರು ಮತ್ತು ಚಿಂದಿ ಆಯುವವರಿಗೆ ತ್ಯಾಜ್ಯ ಸಂಗ್ರಹಣೆ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮತ್ತು ವೈಯಕ್ತಿಕ ಸುರಕ್ಷತೆಯ ಬಗ್ಗೆ ತಿಳುವಳಿಕೆ ನೀಡಿದರು.
ಈ ವೇಳೆ ಕಛೇರಿ ವ್ಯವಸ್ಥಾಪಕ ಶ್ರೀ ಎಮ್. ಆಯ್. ಕುಟ್ರಿ, ಕಮ್ಯೂನಿಟಿ ಅಪೇರ್ಸ್ ಆಫೀಸರ್ ಶ್ರೀ ಆರ್. ಎಸ್. ಹಿಟ್ಟಣಗಿ, ಪ್ರ.ದ.ಸ. ಶ್ರೀ ಬಿ. ಆಯ್. ಗುಡಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀ ಎಂ. ಎಂ. ಧಾರವಾಡಕರ, ಕಮ್ಯುನಿಟಿ ಮೊಬಲೈಸರ್ಗಳು, ಡೇ ನಲ್ಮ ವಿಭಾಗದ ಸಿ.ಆರ್.ಪಿ.ಗಳು, ಪೌರಕಾರ್ಮಿಕರು, ಚಿಂದಿ ಆಯುವವರು ಮತ್ತು ಸಾರ್ವಜನಿಕರು ಇದ್ದರು.
ವರದಿ ಮಂಜು ಎಂ.ಚಿಕ್ಕಣ್ಣವರ




















