ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾನಸಿಕ ಶಾಂತಿ, ನೆಮ್ಮದಿಗಾಗಿ ಧಾರ್ಮಿಕ ಕಾರ್ಯಕ್ರಮಗಳ ಅಗತ್ಯವಿದೆ : ವಿಮಲ ಸಾಗರ ಸುರೀಶ್ವರಜಿ

ಬಳ್ಳಾರಿ / ಕಂಪ್ಲಿ : ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ,ನೆಮ್ಮದಿಗಾಗಿ ಧಾರ್ಮಿಕ ಕಾರ್ಯಕ್ರಮಗಳ ಅಗತ್ಯವಿದ್ದು, ಶ್ರದ್ಧೆ, ಭಕ್ತಿಯಿಂದ ನಡೆಸಿಕೊಂಡು ಹೋಗಬೇಕು, ನಮ್ಮ ಧರ್ಮವನ್ನು ಉಳಿಸಿ ಬೆಳೆಸುವ ಜೊತೆಗೆ ಅನ್ಯ ಧರ್ಮಗಳನ್ನು ಪ್ರೀತಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಜೈನ ಸಮಾಜದ ಪ್ರಸಿದ್ಧ ಜೈನ ಮುನಿಗಳಾದ ಪ.ಪೂ.ಆಚಾರ್ಯ ವಿಮಲ ಸಾಗರ್ ಸುರೀಶ್ವರಜಿ ಮಹಾರಾಜ್ ತಿಳಿಸಿದರು.
ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಇಂದು ಕಂಪ್ಲಿ ಪಟ್ಟಣಕ್ಕೆ ಆಗಮಿಸಿದ ಜೈನ ಸಮಾಜದ ಪ್ರಸಿದ್ಧ ಜೈನ ಮುನಿ ಪ.ಪೂ.ವಿಮಲ ಸಾಗರ್ ಸೂರೀಶ್ವರಜಿ ಮಹಾರಾಜ್ ಅವರನ್ನು ಪಟ್ಟಣದ ಭಾರತೀ ಶಿಶು ವಿದ್ಯಾಲಯದ ಮುಂಭಾಗದಲ್ಲಿ ಕಂಪ್ಲಿತಾಲ್ಲೂಕಿನ ಸಮಸ್ತ ಜೈನ ಸಮಾಜದ ಪರವಾಗಿ ಭವ್ಯವಾಗಿ ಸ್ವಾಗತಿಸಿ ಪ್ರಮುಖ ಬೀದಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿದ ನಂತರ ಪಟ್ಟಣದ ಮುಖ್ಯ ಬೀದಿಯಲ್ಲಿರುವ ಹುಂಡಿಯಾ ಭವನದಲ್ಲಿ ಸಮಾವೇಶಗೊಂಡ ನಂತರ ನಡೆದ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಶುಭ ಆರ್ಶೀವಚನ ನೀಡಿ ಮಾತನಾಡಿದರು.
ನಂತರ ಗುರುಪುಷ್ಯ ಅಮೃತ ಸಿದ್ಧಿಯೋಗ ಕಾರ್ಯಕ್ರಮದ ನಿಮಿತ್ತ ಜೈನ ಸಮಾಜದವರಿಂದ ವಿಶೇಷ ಅನುಷ್ಠಾನ ಕಾರ್ಯಕ್ರಮ ಜರುಗಿತು. ನಂತರ ಪ್ರಸಾದ ವಿತರಣೆ ಜರುಗಿತು.
ವಿಶೇಷ ಧಾರ್ಮಿಕ ಪ್ರವಚನ ಹಾಗೂ ವಿಶೇಷ ಅನುಷ್ಠಾನ ಪಜಾ ಕಾರ್ಯಕ್ರಮದಲ್ಲಿ ಬೆಂಗಳೂರು,ಮೈಸೂರು,ಗದಗ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಸಿಂಧನೂರು ಹಾಗೂ ಕಂಪ್ಲಿಯ ಜೈನ್ ಸಮಾಜದ ಸಕಲ ಸದ್ಭಕ್ತರು ಭಾಗವಹಿಸಿದ್ದರು. ಸಂಜೆ ಜೈನ ಮುನಿಗಳಿಂದ ಧರ್ಮಪ್ರಚಾರ ಕಾರ್ಯಕ್ರಮ ಜರುಗಿತು.
ಮೇ.22ರಂದು ಹುಂಡಿಯಾ ಭವನದಲ್ಲಿ ಜೈನ ಮುಇಗಳಾದ ಪ.ಪೂ.ಆಚಾರ್ಯ ವಿಮಲ ಸಾಗರ್ ಸೂರೀಸ್ವರಜಿ ಮಹಾರಾಜ್ ಅವರಿಂದ ವಿಶೇಷ ಪ್ರವಚನ ಕಾರ್ಯಕ್ರಮದ ಜರುಗಲಿದ್ದು,ನಂತರ ಜೈನಮುನಿಗಳು ಹಾಗೂ ಅವರ ಅನುಯಾಯಿಗಳು ಗಂಗಾವತಿಗೆ ಪಾದಯಾತ್ರೆ ಬೆಳೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಂಪ್ಲಿ ತಾಲ್ಲೂಕು ಜೈನ ಸಂಘದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪದಾಧಿಕಾರಿಗಳಾದ ಪಾರಸ್ ಮಲ್ ಹುಂಡಿಯಾ, ಶಾತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್, ಫತೇಕುಮಾರ್ ಭಾಪನಾ ಸೇರಿದಂತೆ ಜೈನ್ ಸಮಾಜದ ಯುವಕ ಯುವತಿಯರ ಸಂಘದ ಪದಾಧಿಕಾರಿಗಳು,ಮಹಿಳೆಯರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!