ಸಿರುಗುಪ್ಪ – ಕಳೆದ ಎರಡು ದಿನಗಳಿಂದ ಬಿಸಿಲಿನ ತಾಪಮಾನಕ್ಕೆ ತತ್ತರಿಸಿದ ಜನ ಜಾನುವಾರುಗಳಿಗೆ ಗುರುವಾರ ಮಧ್ಯರಾತ್ರಿಯಲ್ಲಿ ಗುಡುಗು ಸಿಡಿಲು ಮಿಂಚು ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದ ನಗರವು ತಂಪೆರಗಿದೆ. ಇದೇ ವೇಳೆ ಸಿಡಿಲಿಗೆ 8 ಕುರಿಗಳು ಬಲಿಯಾದ ಘಟನೆ ಜರುಗಿದೆ ಘಟನೆಯ ಸ್ಥಳಕ್ಕೆ ಪಶು ವೈದ್ಯರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು ನಗರದ ಹೊರ ವಲಯದಲ್ಲಿನ ಜಮೀನಿನಲ್ಲಿ ಬೀದರ್ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವಲ್ಕಿ ಗ್ರಾಮದ ಹಾಲಪ್ಪ ಎಂಬುವರು ಕುರಿ ಮೇಯಿಸಲು ತಗ್ಗಿದ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ 8 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಕೆಲವೆಡೆ ಬಿರುಗಾಳಿಗೆ ಗಿಡ ಮರಗಳ ರೆಂಬೆ ಕೊಂಬೆಗಳು ನೆಲಕ್ಕುರುಳಿವೆ ಇದರಿಂದ ಕೆಲ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















