ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ: ಸಾರ್ವಜನಿಕ ಶಾಂತಿ ಪಾಲನಾ ಸಭೆ ಬಕ್ರೀದ್ ಶಾಂತಿ ಸೌಹಾರ್ದದಿಂದ ಆಚರಿಸಿ – ಡಿ ವೈ ಎಸ್ ಪಿ ಮಾಲತೇಶ್ ಕೋನಬೇವ

ಸಿರುಗುಪ್ಪ- ತ್ಯಾಗ ಬಲಿದಾನದ ಸಂಕೇತ ಈದ್ ಉಲ್ ಅಜ್ ಹಾ ಬಕ್ರೀದ್ ಭಾವೈಕ್ಯತೆ ಶಾಂತಿ ಪ್ರೀತಿ ವಿಶ್ವಾಸ ಸೌಹಾರ್ದತೆಯಿಂದ ಸಮಾಜದ ಎಲ್ಲಾ ಬಾಂಧವರು ಆಚರಿಸಬೇಕು ಎಂದು ಡಿ ವೈ ಎಸ್ ಪಿ ಮಾಲತೇಶ್ ಕೋನಬೇವ ಅವರು ಹೇಳಿದರು.
ಸಿರುಗುಪ್ಪ ನಗರದ ಪೊಲೀಸ್ ಠಾಣಾ ಸಭಾ ಭವನದಲ್ಲಿ ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲಾ ಪೊಲೀಸ್ ವಿಭಾಗ‌ ಸಹಯೋಗದಲ್ಲಿ ಏರ್ಪಡಿಸಿದ ತ್ಯಾಗ ಬಲಿದಾನದ ಸಂಕೇತ ಈದ್ ಉಲ್ ಅಜ್ ಹಾ ಬಕ್ರೀದ್ ಹಬ್ಬದ ಸಾರ್ವಜನಿಕ ಶಾಂತಿಪಾಲನ ಸಭೆಯ ಅಧ್ಯಕ್ಷತೆಯಲ್ಲಿ ಅವರು ಮಾತನಾಡಿ ಸಿರುಗುಪ್ಪ ತಾಲೂಕು ಶಾಂತಿಗೆ ಹೆಸರಾಗಿದೆ ಎಲ್ಲರೂ ಭಾವೈಕ್ಯದಿಂದ ಭೇದ ಭಾವ ಮಾಡದೆ ಪ್ರತಿವರ್ಷದ ಪ್ರಕಾರ ಈ ಬಾರಿಯೂ ಬಕ್ರಿದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವುದರ ಜೊತೆಗೆ ಕಾನೂನು ಪಾಲನೆ ಮಾಡಿ ನಾವೆಲ್ಲ ಪರಸ್ಪರ ಸ್ನೇಹ ಪ್ರೀತಿಯಿಂದ ಬಕ್ರಿದ್ ಆಚರಿಸಬೇಕು ಇದರಿಂದ ಶಾಂತಿ ಸಹ ಬಾಳ್ವೆ ಸಾಧ್ಯ ಸಮಾಜದ ಬಾಂಧವರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿ ಸರ್ವರಿಗೂ ಬಕ್ರಿದ್ ಹಬ್ಬದ ಶುಭಾಶಯ ಹಾರೈಸಿದರು.
ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ವೈ.ಎಸ್. ಹನುಮಂತಪ್ಪ ಅವರು ಸರ್ವರಿಗೂ ಸ್ವಾಗತ ಬಯಸಿ ಮಾತನಾಡುತ್ತಾ ನಮ್ಮಲ್ಲಿ ಮಾನವೀಯ ಗುಣಗಳನ್ನು ಮೂಡಿಸಲು ಹಾಗೂ ಭ್ರಾತೃತ್ವದ ಭಾವನೆ ಎಲ್ಲರಲ್ಲೂ ಮೂಡಲು ಶಾಂತಿ ಪ್ರೀತಿ ವಿಶ್ವಾಸ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸೋಣ ಸಮಾಜದ ಬಾಂಧವರು ಪೊಲೀಸರಿಗೆ ಸಹಕಾರ ನೀಡಬೇಕು ಯಾವುದೇ ರೀತಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಸರ್ವಧರ್ಮ ಸಮಾನತೆಯಿಂದ ಅವರವರ ಆಚಾರ ವಿಚಾರಕ್ಕೆ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಸರ್ಕಾರದ ನಿಯಮಾನುಸಾರ ಮುಂಜಾಗ್ರತೆ ವಹಿಸಿ ಪ್ರಾಣಿಗಳ ವಧೆ ಖುರ್ಬಾನಿ ಕೊಡಿರಿ ಎಲ್ಲರಿಗೂ ಬಕ್ರಿದ್ ಹಬ್ಬದ ಶುಭಾಶಯಗಳು ಅವರು ಕೋರಿದರು ಮತ್ತು ವಂದಿಸಿದರು.
ಪಿಎಸ್ಐ ಪರುಶುರಾಮ್, ಕ್ರೈಂ ಪಿಎಸ್ಐ ಮಲ್ಲಯ್ಯ, ಪ್ರೊಫೆಷನರಿ ಪಿಎಸ್ಐಗಳಾದ ನರೇಶ್, ಶಿವಪ್ರಸಾದ್, ನಿಂಗಣ್ಣ ಮುಖಂಡರಾದ ಖತೀಬ್ ಜಹೀರುದ್ದೀನ್ ಬಾಬು, ಹಾಜಿ ಹಂಡಿ ಹುಸೇನ್ ಬಾಷಾ, ಹಾಜಿ ಚೌದ್ರಿ ಖಾಜಾ ಸಾಬ್, ದೇಶನೂರು ಹಾಜಿ ಅಬ್ದುಲ್ ಗಪೂರ್ ಸಾಬ್, ಉಡೇಗೋಳು ಖಾಜಾ ಸಾಬ್, ಡಾ. ಮೊಹಮ್ಮದ್ ಅಲಿ, ಸಮಾಜ ಸೇವಕ ಹಾಜಿ ಮೊಹಮ್ಮದ್ ಇಬ್ರಾಹಿಂ, ಮೋದಿನ್, ಮೀರ್ ಹುಸೇನ್, ವಕೀಲರು ಅಮೀರ್ ಬಾಷಾ, ಮುಲ್ಲಾ ದಾದಾ ಖಲಂದರ್, ಮೊಹಮ್ಮದ್ ಅಜೀಮ್, ಡೊಳ್ಳಿ ವಲಿ ರಜಾ, ಬೆಳಗಲ್ ಖಾಜಾಸಾಬ್, ವಲಿಸಾಬ್, ಅಲ್ಲಾ ಭಕ್ಷಿ, ಇಬ್ರಾಹಿಂಪುರ್ ಎಂ.ಖಾದರ್ ಸಾಬ್ ವಿವಿಧ ಸಮುದಾಯದ ಪ್ರಮುಖರು ಪೊಲೀಸ್ ಸಿಬ್ಬಂದಿ ಇದ್ದರು.

ವರದಿ : ಮಸೀದಿ, ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!