
ಬಳ್ಳಾರಿ / ಕುರುಗೋಡು : “ಧರ್ಮಸ್ಥಳ ಸಂಘದಿಂದ ಶಾಲಾ ಮಕ್ಕಳಿಗಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಲೆಗೆ ನೀಡಿದೆ. ಅದನ್ನು ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು,” ಎಂದು ಸಂಘದ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ಪಟ್ಟಣ ಸಮೀಪದ ಯಲ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಹಾಗೂ ರಾಯಚೂರು ಎಲ್.ಐ.ಸಿ ಆಫ್ ಇಂಡಿಯಾ ವಿಮಾ ವಿಭಾಗದಿಂದ ವಿಮಾ ಗ್ರಾಮ ಅಡಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಸಂಘದಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ :
ಬಡವರಿಗೆ ಹಾಗೂ ಸರಕಾರಿ ಶಾಲೆಗಳಿಗೆ ಸಹಕಾರದ ಜತೆಗೆ ಇನ್ನಿತರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ದೇವಸ್ಥಾನಗಳಿಗೆ, ಶಾಲೆಗಳಿಗೆ ಅವಶ್ಯಕವಿರುವ ಪರಿಕರಗಳು, ಸ್ವಚ್ಛತಾ, ನಿವೇಶನ, ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಇನ್ನಿತರ ಅವಶ್ಯ ವಸ್ತುಗಳನ್ನು ಸಹಕಾರ ನೀಡಿದೆ. ಸಂಘಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ,” ಎಂದರು.
ಯೋಜನಾಧಿಕಾರಿ ರಾಘವೇಂದ್ರ ಮತ್ತು ವಲಯ ಮೇಲ್ವಿಚಾರಕ ಎಂ.ಪ್ರಭು ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ನಾಗವೇಣಿ ಅಂಜಿನಿ, ಧರ್ಮಸ್ಥಳದ ಸಂಘದ ಮೇಲ್ವಿಚಾರಕ ಮಾಂತೇಶ್, ಸೇವಾ ಪ್ರತಿನಿಧಿ ಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮದ ಮುಖಂಡರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















